'ಸಿದ್ದಾರ್ಥ್ ರಾವಣನ ಯುದ್ದ ಮಾಡುತ್ತಿದ್ದರು: ಸಹಾಯ ಕೋರಿದ್ದರೆ ರಾವಣನನ್ನು ಗೆಲ್ಲಬಹುದಿತ್ತು'

ಸರಿಯಾಗಿ ಇಂದಿಗೆ 19 ವರ್ಷಗಳ ಹಿಂದೆ ಜುಲೈ 30 ರಂದು ಆ ವ್ಯಕ್ತಿಯನ್ನು ಭೇಟಿ ಮಾಡಿದ್ದೆ. ನಮ್ಮ ಕುಟುಂಬಕ್ಕೆ ಅಪಾರ ಪ್ರಮಾಣದಲ್ಲಿ ನೈತಿಕ ಧೈರ್ಯ ತುಂಬಿದ್ದರು.
ರಾಘವೇಂದ್ರ ರಾಜ್ ಕುಮಾರ್
ರಾಘವೇಂದ್ರ ರಾಜ್ ಕುಮಾರ್
ಬೆಂಗಳೂರು: ಸರಿಯಾಗಿ ಇಂದಿಗೆ 19 ವರ್ಷಗಳ ಹಿಂದೆ ಜುಲೈ 30 ರಂದು ಆ ವ್ಯಕ್ತಿಯನ್ನು ಭೇಟಿ ಮಾಡಿದ್ದೆ. ನಮ್ಮ  ಕುಟುಂಬಕ್ಕೆ ಅಪಾರ ಪ್ರಮಾಣದಲ್ಲಿ ನೈತಿಕ ಧೈರ್ಯ ತುಂಬಿದ್ದರು. ಇಂದು ನಾನು ಅವರ ಮನೆಯಲ್ಲಿ ಕುಳಿತು ಅವರ 87 ವರ್ಷದ ಮಾವನನ್ನು ಸಮಾಧಾನ ಮಾಡುವ ಪರಿಸ್ಥಿತಿ ಬಂದಿದೆ ಎಂದು ನಟ ರಾಜ್ ರಾಘವೇಂದ್ರ ರಾಜ್ ಕುಮಾರ್ 
ಕೃಷ್ಣ ಅವರನ್ನು ಸಮಾಧಾನ ಮಾಡಿದ ಮೇಲೆ ಭಾರವಾದ ಹೃದಯದೊಂದಿಗೆ ನಾನು ಮನೆಗೆ ಮರಳಿದ್ದೆ,  ಮಂಗಳವಾರ ರಾತ್ರಿ ನಿದ್ದೆ ಮಾಡುವ ಮುನ್ನ ನಾನು ಮತ್ತು ನನ್ನ ಕುಟುಂಬದವರು ಸಿದ್ದಾರ್ಥ ಅವರು ಸುರಕ್ಷಿತವಾಗಿ ಜೀವಂತವಾಗಿ ಬರಲಿ ಎಂದು ದೇವರಲ್ಲಿ ಪ್ರಾರ್ಥಿಸಿದ್ದೆವು, ಆದರೆ ದೇವರನ್ನು ನಾವು ನಿಯಂತ್ರಿಸಲು ಸಾಧ್ಯವೇ, ಅವನ ಯೋಜನೆಗಳೇ ಬೇರೆ ಇರುತ್ತವೆ,. ಸಿದ್ದಾರ್ಥ ಅವರ ಮೃತ ದೇಹ ಪತ್ತೆಯಾಗಿದ್ದನ್ನು ಕೇಳಿ ನಾವು ಕುಗ್ಗಿ ಹೋದೆವು.
ಅವರು ನಮ್ಮ ಪಕ್ಕದ ಮನೆಯಲ್ಲಿದ್ದರು, ನಮ್ಮ ನೆರೆಹೊರೆಯವರು ಎಂಬುದಕ್ಕಿಂತ ಹೆಚ್ಚಾಗಿ  ನಮ್ಮ ಕುಟುಂಬಕ್ಕೆ ಆತ್ಮೀಯ ಸ್ನೇಹಿತರಾಗಿದ್ದರು. ಸದಾಶಿವ ನಗರದಲ್ಲಿ ನಮ್ಮ ಮನೆಯ ಮೂರು ರಸ್ತೆ ದಾಟಿದರೇ  ಸಿದ್ದಾರ್ಥ್ ಅವರ ಮನೆಯಿತ್ತು. ಜುಲೈ 30 200ನೇ ಇಸವಿಯಲ್ಲಿ ನಮ್ಮ ಅಪ್ಪಾಜಿ(ಡಾ.ರಾಜ್ ಕುಮಾರ್) ಅವರು ಕಾಡುಗಳ್ಳ ವೀರಪ್ಪನ್ ಅವರಿಂದ ಕಿಡ್ನಾಪ್ ಆದಾಗ ನಾನು ಸಿದ್ದಾರ್ಥ್ ಅವರ ಜೊತೆ ಮಾತನಾಡಿದ್ದೆ.
ನಮಗೆ ಆಗ ಏನು ಗೊತ್ತಾಗದೇ ಕೈಚೆಲ್ಲಿ ಕುಳಿತಿದ್ದೆವು, ಯಾರನ್ನು ಭೇಟಿ ಮಾಡಬೇಕು, ಏನು ಮಾಡಬೇಕೆಂದು ತಿಳಿದಿರಲಿಲ್ಲ.  ಹೀಗಾಗಿ ಸಿಎಂ ಎಸ್ ಎಂ ಕಡಷ್ಣ ಅವರನ್ನು ಭೇಟಿ ಮಾಡಲು ತೆರಳಿದೆವು.  ಅವರನ್ನು ಭೇಟಿ ಮಾಡಲು ಹಲವು ಮಂದಿ ಕಾಯುತ್ತಾ ಕುಳಿತಿದ್ದರು. ಅಲ್ಲಿಗೆ ಓಡುತ್ತಾ ಬಂದ ಸಿದ್ದಾರ್ಥ್ ಅವರು ತಮ್ಮ ಪರಿಚಯ ಮಾಡಿಕೊಂಡರು. ಜೊತೆಗೆ ತಮ್ಮ ಮಾವ ಎಸ್ ಎಂ ಕೃಷ್ಣ ಅವರಿದ್ದ ಕೊಠಡಿಗೆ ಕರೆದುಕೊಂಡು ಹೋದರು,  ಬೇರೆಯವರ ಜೊತೆ ನೀವು ಕಾಯುವ ಅವಶ್ಯಕತೆಯಿಲ್ಲ, ನೀವು ಮತ್ತು ನಿಮ್ಮ ಕುಟುಂಬದವರು ಯಾವಾಗ ಬೇಕಾದರು ಬಂದು ನಮ್ಮನ್ನು ಭೇಟಿ ಮಾಡಬಹುದು. ನಾನು ನಿಮ್ಮನ್ನು ಮಾವನ ಕೊಠಡಿಗೆ ಕರೆದೊಯ್ಯುತ್ತೇನೆ ಎಂದು ಹೇಳಿದರು.
ಮೊದಲ ಬಾರಿಗೆ ಯಾರೋ ಒಬ್ಬರು ನಮ್ಮ ಬೆಂಬಲಕ್ಕೆ ನಿಂತಂತೆ ಅನಿಸಿತು.ನಮ್ಮನ್ನು ತುಂಬಾ ಚೆನ್ನಾಗಿ ನಡೆಸಿಕೊಂಡರು, ಅದಾದ ನಂತರ ನಾನು ಎಸ್ ಎಂ ಕೃಷ್ಣ ಅವರ ಜೊತೆ ಮಾತಾನಾಡಬೇಕಾದಾಗ ನಾನು ಸಿದ್ದಾರ್ಥ ಅವರ ನಂಬರ್ ಕರೆ ಮಾಡುತ್ತಿದ್ದೆ. ಒಂದು ಬಾರಿಯೂ ಅವರು ಕಾಲ್ ಕಟ್ ಮಾಡಲಿಲ್ಲ,  ಎಲ್ಲಾ ಸಮಯದಲ್ಲೂ ಪೋನ್ ಪಿಕ್ ಮಾಡಿ ಉತ್ತರಿಸುತ್ತಿದ್ದರು, ಫೋನ್ ರಿಸೀವ್ ಮಾಡಿ ಹೇಳಿ ಸರ್ ಎಂದು ಹೇಳುತ್ತಿದ್ದರು.
ನನ್ನ ತಾಯಿ ಆಸ್ಪತ್ರೆಗೆ ದಾಖಲಾಗಿದ್ದಾಗ ಬಂದು ಭೇಟಿ ಮಾಡಿದ್ದರು,  ನೀವು ಧೈರ್ಯವಾಗಿರಬೇಕು, ನಾವು ಅಪ್ಪಾಜಿಯನ್ನು ಸುರಕ್ಷಿತವಾಗಿ ಕರೆದುಕೊಂಡು ಬರುತ್ತೇವೆ ಎಂದು ಹೇಳಿದ್ದರು. ಆದರೆ ಮಂಗಳವಾರ ನಾನು ಕೃಷ್ಣ ಅವರ ಪಕ್ಕದಲ್ಲಿ ಕುಳಿತು, ಆತಂಕ ಪಡಬೇಡಿ ಸರ್, ಎಲ್ಲವೂ ಸರಿಯಾಗುತ್ತದೆ ಎಂದು ಹೇಳಿ ಬಂದಿದ್ದೆ. ಆದರೆ ಈಗ ಅವರ ಕುಟುಂಬಸ್ಥರನ್ನು ಭೇಟಿ ಮಾಡಲು ನನ್ನಲ್ಲಿ ಧೈರ್ಯವಿಲ್ಲ,. 
ಸಿದ್ದಾರ್ಥ್ ಎಂದ ಕೂಡಲೇ ನನ್ನ ಮನಸ್ಸಿನಲ್ಲಿ ಹಲವು ನೆನಪುಗಳು ಹಾದುಹೋಗುತ್ತವೆ, ವ್ಯಾವಹಾರಿಕವಾಗಿ ನಾನು ಅವರನ್ನು ಹಲವು ಬಾರಿ ಭೇಟಿ ಮಾಡಿದ್ದೇನೆ. ನನ್ನ ಸಹೋದರ ಪುನೀತ್ ವಂಶಿ ಸಿನಿಮಾ ಪಬ್ಲಿಸಿಟಿಗಾಗಿ ಅವರ ಕಚೇರಿಗೆ ತೆರಳಿದ್ದೆ, ಅವರ ಸಹಾಯಕರೊಬ್ಬರು ಮೇಲ್ಮಮಹಡಿಗೆ ಹೋಗಿ ಡಾ. ರಾಜ್ ಕುಮಾರ್ ಅವರ ಪುತ್ರ  ನಿಮ್ಮನ್ನು ಭೇಟಿ ಮಾಡಲು ಬಂದಿದ್ದಾರೆ ಎಂದು ಹೇಳಿದರು, ನನಗೆ ಅಚ್ಚರಿ ಕಾದಿತ್ತು, ನೇರವಾಗಿ ಅವರೇ ಇಳಿದು ಬಂದು ನನ್ನ ಭೇಟಿ ಮಾಡಿದ್ದರು, ನನ್ನ ಪಬ್ಲಿಸಿಟಿಗೆ ಬೇಕಾದ ಸಿಡಿ, ಪೋಸ್ಟರ್ ಎಲ್ಲವನ್ನು ಉಚಿತವಾಗಿ ನೀಡಿದ್ದರು.
ಕಳೆದ ಎರಡು ದಿಗನಗಳಿಂದ ನನ್ನ ತಂದೆ ಹೇಳುತ್ತಿದ್ದ ತತ್ವ ನೆನಪಿಗೆ ಬರುತ್ತಿದೆ, ನಿನ್ನ ಮನಸು ರಾಮನ ರೀತಿ, ಬುದ್ದಿ ರಾವಣನ ರೀತಿ, ನೀನು ಯಾವತ್ತೂ ಕೋಪಗೊಳ್ಳಬೇಡ ಮತ್ತು ನಿನ್ನ ಬುದ್ದಿ ನಿನ್ನನ್ನು ನಿಯಂತ್ರಿಸಲು ಬಿಡಬೇಡ, ರಾಮ ಮತ್ತು ರಾವಣ ಯಾವುದೇ ಕಾರಣಕ್ಕಾದರೂ ಫೈಟ್ ಮಾಡಿದಾಗ,.ಪ್ರಾಣಯಾಮ ಎಂಬುದು ಹನುಮಾನ್ ಮತ್ತು ಅವನ ಸೇನೆಯಂತೆ, ಹನುಮಾನ್ ರಾವಣನ ಹಾಗಿರುವ ಬುದ್ದಿ ಜೊತೆ ಹೋರಾಟಕ್ಕೆ ಮಾಡುತ್ತಾನೆ ಮತ್ತು ಗೆಲ್ಲುತ್ತಾನೆ, 
ಸಿದ್ದಾರ್ಥ್ ಅವರು ಕೂಡ ಇದೇ ಪರಿಸ್ಥಿತಿ ಎದುರಿಸಿದ್ದಾರೆ, ರಾವಣ ಅವರ ಮನಸ್ಸಿನಲ್ಲಿದ್ದ, ಅವರು ಯಾರದ್ದಾದರೂ ಸಹಾಯ ಪಡೆದಿದ್ದರೇ ನಿಜವಾಗಿಯೂ ಗೆಲ್ಲುತ್ತಿದ್ದರು. ಅವರ ಸಾವಿರಾರು ಸಿಬ್ಬಂದಿ ಹಾಗೂ ಅವರ ಕುಟುಂಬಕ್ಕೆ ಸಿದ್ದಾರ್ಥ್ ಅಗಲಿಕೆಯ ನೋವಿನ ದುಃಖ ಭರಿಸುವ ಶಕ್ತಿ ನೀಡಲಿ, ಸಿದ್ದಾರ್ಥ್ ಆತ್ಮಕ್ಕೆ ಶಾಂತಿ ಸಿಗಲಿ.
ರಾಘವೇಂದ್ರ ರಾಜ್ ಕುಮಾರ್
ಸಿನಿಮಾ ನಿರ್ಮಾಪಕ ಹಾಗೂ ಸಿದ್ದಾರ್ಥ್ ಸ್ನೇಹಿತ

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com