ಬಕ್ರೀದ್ ಹಬ್ಬಕ್ಕೆ ರಕ್ಷಣೆ ಕೊಡಿ: ಸಿಎಂ ಯಡಿಯೂರಪ್ಪಗೆ ಮುಸ್ಲಿಂ ಶಾಸಕರಿಂದ ಪತ್ರ

ಪವಿತ್ರ ಬಕ್ರೀದ್ ಹಬ್ಬವನ್ನು ನಾಡಿನಾದ್ಯಂತ ಮುಸಲ್ಮಾನ ಬಾಂಧವರು ಆಚರಿಸುತ್ತಿದ್ದು, ಹಬ್ಬ ಆಚರಣೆ ವೇಳೆ ಸೂಕ್ತ ರಕ್ಷಣೆ ನೀಡುವಂತೆ...
ಬಿಎಸ್ ಯಡಿಯೂರಪ್ಪ
ಬಿಎಸ್ ಯಡಿಯೂರಪ್ಪ
ಬೆಂಗಳೂರು: ಪವಿತ್ರ ಬಕ್ರೀದ್ ಹಬ್ಬವನ್ನು ನಾಡಿನಾದ್ಯಂತ ಮುಸಲ್ಮಾನ ಬಾಂಧವರು ಆಚರಿಸುತ್ತಿದ್ದು, ಹಬ್ಬ ಆಚರಣೆ ವೇಳೆ ಸೂಕ್ತ ರಕ್ಷಣೆ ನೀಡುವಂತೆ ಮುಸ್ಲಿಂ ಶಾಸಕರು ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ ಅವರಿಗೆ ಮನವಿ ಮಾಡಿದ್ದಾರೆ.
ಆಗಸ್ಟ್ 12 ರಂದು ಹಬ್ಬ ಆಚರಿಸಲಾಗುತ್ತಿದ್ದು, ಅವರವರ ಸಾಮರ್ಥ್ಯಕ್ಕನುಗುಣವಾಗಿ ಹಬ್ಬದಂದು ಬಲಿ ‌ಕೊಡುವ ಪದ್ಧತಿ ಇದೆ. ಹೀಗಾಗಿ ಹಬ್ಬದ ಸಂದರ್ಭದಲ್ಲಿ ವಾಹನಗಳಲ್ಲಿ ಪ್ರಾಣಿ ಸಾಗಾಣಿಕೆಗೆ ಅಡಚಣೆಯಾಗದಂತೆ ಜಿಲ್ಲಾಡಳಿತ ಹಾಗೂ ಪೊಲೀಸ್ ಇಲಾಖೆಯಿಂದ ಸೂಕ್ತ ರಕ್ಷಣೆ ಒದಗಿಸುವಂತೆ ಕಾಂಗ್ರೆಸ್ ಶಾಸಕ ತನ್ವೀರ್ ಸೇಠ್ ಸಿಎಂಗೆ ಪತ್ರ ಬರೆದಿದ್ದು, ಪತ್ರಕ್ಕೆ ಶಾಸಕರಾದ ಎನ್.ಎ.ಹ್ಯಾರೀಸ್, ರಹೀಂಖಾನ್, ಸಿ.ಎಂ ಇಬ್ರಾಹಿಂ, ನಜೀರ್ ಅಹ್ಮದ್, ಅಬ್ದುಲ್ ಜಬ್ಬಾರ್ ಸೇರಿದಂತೆ ಇತರೆ ಕಾಂಗ್ರೆಸ್ ಶಾಸಕರು ಸಹಿ ಹಾಕಿದ್ದಾರೆ.
ಮುಸ್ಲಿಂ ಶಾಸಕರ ಮನವಿ ಮೇರೆಗೆ ಹಬ್ಬ ಆಚರಣೆ ವೇಳೆ ಸೂಕ್ತ ಕ್ರಮ ಜರುಗಿಸುವಂತೆ ಯಡಿಯೂರಪ್ಪ ಅವರು ಪೊಲೀಸ್ ಇಲಾಖೆಗೆ ಸೂಚಿಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com