ದೇವಸ್ಥಾನ ವಾಣಿಜ್ಯ ಸಂಸ್ಥೆಯಲ್ಲ: ಕರ್ನಾಟಕ ಹೈಕೋರ್ಟ್

ದೇವಸ್ಥಾನಗಳು ವಾಣಿಜ್ಯ ಸಂಸ್ಥೆಯಲ್ಲ ಎಂದು ಕರ್ನಾಟಕ ಹೈಕೋರ್ಟ್ ಹೇಳಿದೆ.
ದೇವಸ್ಥಾನ ವಾಣಿಜ್ಯ ಸಂಸ್ಥೆಯಲ್ಲ: ಕರ್ನಾಟಕ ಹೈಕೋರ್ಟ್
ದೇವಸ್ಥಾನ ವಾಣಿಜ್ಯ ಸಂಸ್ಥೆಯಲ್ಲ: ಕರ್ನಾಟಕ ಹೈಕೋರ್ಟ್
ಬೆಂಗಳೂರು: ದೇವಸ್ಥಾನಗಳು ವಾಣಿಜ್ಯ ಸಂಸ್ಥೆಯಲ್ಲ ಎಂದು ಕರ್ನಾಟಕ ಹೈಕೋರ್ಟ್ ಹೇಳಿದೆ. 
ಕೊಲ್ಲೂರು ಮೂಕಾಂಬಿಕಾ ದೇವಾಲಯ ಸಲ್ಲಿಸಿದ್ದ ಅರ್ಜಿಯನ್ನು ಭಾಗಶಃ ಒಪ್ಪಿ ವಿಚಾರಣೆ ನಡೆಸಿರುವ ಹೈಕೋರ್ಟ್ ನ ನ್ಯಾ.ಬಿ.ವಿ ನಾಗರತ್ನ, ಕೆಎನ್ ಫಣೀಂದ್ರ ಹಾಗೂ ಬಿಎ ಪಾಟೀಲ್ ಇದ್ದ ಪೀಠ ಈ ಹೇಳಿಕೆ ನೀಡಿದೆ. ದೇವಾಲಯಗಳು ವಾಣಿಜ್ಯ ಸಂಸ್ಥೆಗಳಲ್ಲದ ಕಾರಣ ಅಲ್ಲಿರುವ ನೌಕರರು ಗ್ರಾಚ್ಯುಟಿಗೆ ಅರ್ಹರಲ್ಲ ಎಂಬುದು ಕೋರ್ಟ್ ನ ಹೇಳಿಕೆಯಾಗಿದೆ.
ಕೇಂದ್ರ ಸರ್ಕಾರವಾಗಲೀ ಅಥವಾ ಮೂಕಾಂಬಿಕಾ ದೇವಾಲಯ ಸ್ವತಃ ಆಗಲೀ ಗ್ರಾಚ್ಯುಟಿ ಪಡೆಯುವುದಕ್ಕೆ ಅರ್ಹವಾಗಿರುವ  ಗ್ರಾಚ್ಯುಟಿ ಕಾಯ್ದೆ 1972 ರ ಸೆಕ್ಷನ್ 1(3) (ಸಿ) ಅಡಿಯಲ್ಲಿ ಅಧಿಸೂಚನೆಗೊಳಪಟ್ಟಿಲ್ಲ. 
ಆದರೆ ಕರ್ನಾಟಕ ಹಿಂದೂ ಧಾರ್ಮಿಕ ಸಂಸ್ಥೆಗಳು ಹಾಗೂ ಧರ್ಮಾರ್ಥ ದತ್ತಿ ಕಾಯ್ದೆಯ ಪ್ರಕಾರ ಗ್ರಾಚ್ಯುಟಿ ನೀಡುವುದಕ್ಕೆ ಅವಕಾಶವಿದೆ. ಇದು ವಿಶೇಷ ಕಾಯ್ದೆಯಾಗಿದ್ದು, ರಾಷ್ಟ್ರಪತಿಗಳ ಅನುಮೋದನೆಯೂ ಇರುವುದರಿಂದ ಗ್ರಾಚ್ಯುಟಿ ಕಾಯ್ದೆಯನ್ನೂ ಮೀರಿದೆ. ಈ ಹಿನ್ನೆಲೆಯಲ್ಲಿ ರವಿಜಾರಜ ಶೆಟ್ಟಿ ಎಂಬುವವರಿಗೆ  ಕರ್ನಾಟಕ ಹಿಂದೂ ಧಾರ್ಮಿಕ ಸಂಸ್ಥೆಗಳು ಹಾಗೂ ಧರ್ಮಾರ್ಥ ದತ್ತಿ ಕಾಯ್ದೆಯ ಪ್ರಕಾರ ಗ್ರಾಚ್ಯುಟಿ ನೀಡುವುದಕ್ಕೆ ಅವಕಾಶವಿದ್ದು, ನಾಲ್ಕು ವಾರಗಳಲ್ಲಿ ಈ ಪ್ರಕ್ರಿಯೆಯನ್ನು ಪೂರ್ಣಗೊಳಿಸಬೇಕೆಂದು ಕೋರ್ಟ್ ಮೂಕಾಂಬಿಕ ದೇವಾಲಯಕ್ಕೆ ನಿರ್ದೇಶನ ನೀಡಿತ್ತು. ಈ ಆದೇಶವನ್ನು ಪ್ರಶ್ನಿಸಿ ಮೂಕಾಂಬಿಕ ದೇವಾಲಯ ಹೈಕೋರ್ಟ್ ಮೊರೆ ಹೋಗಿತ್ತು. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com