ದೇಶದಲ್ಲೇ ಮೊದಲು! ಬೆಳಗಾವಿಯಲ್ಲಿ ಮಹಿಳಾ ಸೇನಾ ಭರ್ತಿ, ಸಾವಿರಾರು ಯುವತಿಯರು ಭಾಗಿ

ಭಾರತೀಯ ಸೇನೆ ದಕ್ಷಿಣ ಭಾರತದಲ್ಲಿ ಹಮ್ಮಿಕೊಂಡಿದ್ದ ದೇಶದ ಪ್ರಪ್ರಥಮ ಸೇನಾ ಪೊಲೀಸ್ ಹುದ್ದೆಯ ಮಹಿಳಾ ಅಭ್ಯರ್ಥಿಗಳ ನೇಮಕಾತಿ ಜಾಥಾಗೆ ಅತ್ಯುತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ ಎಂದು ಉಪ ಪ್ರಧಾನ ನಿರ್ದೇಶಕ (ನೇಮಕಾತಿ) ಬ್ರಿಗೇಡಿಯರ್ ದಿಪೇಂದ್ರ ರಾವತ್ ಹೇಳಿದ್ದಾರೆ.
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ
ಬೆಳಗಾವಿ: ಭಾರತೀಯ ಸೇನೆ ದಕ್ಷಿಣ ಭಾರತದಲ್ಲಿ ಹಮ್ಮಿಕೊಂಡಿದ್ದ ದೇಶದ ಪ್ರಪ್ರಥಮ ಸೇನಾ ಪೊಲೀಸ್ ಹುದ್ದೆಯ ಮಹಿಳಾ ಅಭ್ಯರ್ಥಿಗಳ ನೇಮಕಾತಿ ಜಾಥಾಗೆ ಅತ್ಯುತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ ಎಂದು ಉಪ ಪ್ರಧಾನ ನಿರ್ದೇಶಕ (ನೇಮಕಾತಿ) ಬ್ರಿಗೇಡಿಯರ್ ದಿಪೇಂದ್ರ ರಾವತ್ ಹೇಳಿದ್ದಾರೆ.
ಇಲ್ಲಿನ ಮರಾಠಾ ಲೈಟ್ ಇನ್ ಫೆಂಟ್ರಿ ರೆಜಿಮೆಂಟಲ್ ಸೆಂಟರ್ ನಲ್ಲಿ (ಎಂಎಲ್ ಐಆರ್ ಸಿ)ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬೆಳಗಾವಿಯಲ್ಲಿ ನಡೆದ ನೇಮಕಾತಿ ಜಾಥಾದಲ್ಲಿ 1000ಕ್ಕೂ ಹೆಚ್ಚು ಮಹಿಳೆಯರು ಪಾಲ್ಗೊಂಡಿದ್ದರು ಎಂದರು.
ಕರ್ನಾಟಕ, ಕೇರಳ, ತಮಿಳುನಾಡು, ಆಂಧ್ರಪ್ರದೇಶ , ತೆಲಂಗಾಣ ಹಾಗೂ ಕೇಂದ್ರಾಡಳಿತ ಪ್ರದೇಶಗಳಾದ ಅಂಡಮಾನ್ -ನಿಕೋಬಾರ್, ಲಕ್ಷದ್ವೀಪ ಹಾಗೂ ಪುದುಚೆರಿಯಲ್ಲಿ ನೇಮಕಾತಿ ಜಾಥಾವನ್ನು ಹಮ್ಮಿಕೊಳ್ಳಲಾಗಿತ್ತು. ಇವುಗಳಲ್ಲಿ 200 ಅಭ್ಯರ್ಥಿಗಳನ್ನು ವೈದ್ಯಕೀಯ ಪರೀಕ್ಷೆಗೆ ಆಯ್ಕೆ ಮಾಡಲಾಗಿದೆ. ಇವರು ವೈದ್ಯಕೀಯ ಪರೀಕ್ಷೆಯಲ್ಲಿ ತೇರ್ಗಡೆ ಹೊಂದಿದರೆ ಅಕ್ಟೋಬರ್ ತಿಂಗಳ ಕೊನೆಯ ವಾರದಲ್ಲಿ ಲಿಖಿತ ಪರೀಕ್ಷೆ ಬರೆಯಲಿದ್ದಾರೆ ಎಂದರು.
ಈ ನೇಮಕಾತಿ ಜಾಥಾಕ್ಕೆ ದೇಶದ ಮೂಲೆಮೂಲೆಯಿಂದ 2 ಲಕ್ಷಕ್ಕೂ ಹೆಚ್ಚು ಅರ್ಜಿಗಳು ಬಂದಿದ್ದವು. ದಕ್ಷಿಣ ವಲಯದಿಂದ 15 ಸಾವಿರ ಮಹಿಳೆಯರು ಅರ್ಜಿ ಸಲ್ಲಿಸಿದ್ದರು. ಇದರಿಂದ ಆಯ್ಕೆ ಸಮಿತಿ ಎಸ್ ಎಸ್ ಎಲ್ ಸಿ ಪರೀಕ್ಷೆಯಲ್ಲಿ ಶೇ. 86ಕ್ಕಿಂತ ಹೆಚ್ಚು ಅಂಕ ಗಳಿಸಿದವರನ್ನು ಆಯ್ಕೆ ಮಾಡಬೇಕಾಯಿತು. ಒಟ್ಟು 3000 ಅಭ್ಯರ್ಥಿಗಳು ಜಾಥಾಕ್ಕೆ ಆಯ್ಕೆಯಾಗಿದ್ದರು. ಅದರಲ್ಲಿ 250 ಕರ್ನಾಟಕದ ಇತರೆ ಜಿಲ್ಲೆಯವರಾದರೆ  ಹಾಗೂ 180 ಮಂದಿ ಬೆಳಗಾವಿ ಅಭ್ಯರ್ಥಿಗಳಾಗಿದ್ದರು ಎಂದರು. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com