ಗೋವಾ-ಕರ್ನಾಟಕ ರೈಲು ಮಾರ್ಗದಲ್ಲಿ ಕುಸಿತ: ಗ್ರಾಮಸ್ಥರ ಸಮಯಪ್ರಜ್ಞೆಯಿಂದ ತಪ್ಪಿತು ಅನಾಹುತ!

ಪಶ್ಚಿಮ ಘಟ್ಟದಲ್ಲಿ ನಿರಂತರವಾಗಿ ಸುರಿಯುತ್ತಿರುವ ಮಳೆಯಿಂದಾಗಿ ಭೂ ಕುಸಿತ ಸಂಭವಿಸಿದೆ. ಪರಿಣಾಮ ಗೋವಾ-ಕರ್ನಾಟಕ ನಡುವಿನ ರೈಲು ಮಾರ್ಗದಲ್ಲಿ ಸಂಭವಿಸಬೇಕಿದ್ದ ಭಾರಿ ಅನಾಹುತವೊಂದು ಗ್ರಾಮಸ್ಥರ
ಗೋವಾ-ಕರ್ನಾಟಕ ರೈಲು ಮಾರ್ಗದಲ್ಲಿ ಭೂಕುಸಿತ: ಗ್ರಾಮಸ್ಥರ ಸಮಯಪ್ರಜ್ಞೆಯಿಂದ ತಪ್ಪಿತು ಅನಾಹುತ!
ಗೋವಾ-ಕರ್ನಾಟಕ ರೈಲು ಮಾರ್ಗದಲ್ಲಿ ಭೂಕುಸಿತ: ಗ್ರಾಮಸ್ಥರ ಸಮಯಪ್ರಜ್ಞೆಯಿಂದ ತಪ್ಪಿತು ಅನಾಹುತ!
ಬೆಳಗಾವಿ: ಪಶ್ಚಿಮ ಘಟ್ಟದಲ್ಲಿ ನಿರಂತರವಾಗಿ ಸುರಿಯುತ್ತಿರುವ ಮಳೆಯಿಂದಾಗಿ ಭೂ ಕುಸಿತ ಸಂಭವಿಸಿದೆ. ಪರಿಣಾಮ ಗೋವಾ-ಕರ್ನಾಟಕ ನಡುವಿನ ರೈಲು ಮಾರ್ಗದಲ್ಲಿ ಸಂಭವಿಸಬೇಕಿದ್ದ ಭಾರಿ ಅನಾಹುತವೊಂದು ಗ್ರಾಮಸ್ಥರ ಸಮಯಪ್ರಜ್ಞೆಯಿಂದ ತಪ್ಪಿದೆ. 
ಬೆಳಗಾವಿ ಬಳಿಯ ಲೋಂಡಾ-ಗೋವಾ ನಡುವಿನ ರೈಲು ಮಾರ್ಗದಲ್ಲಿ ಮಣ್ಣು ಕುಸಿತವನ್ನು ಕಂಡ ಗ್ರಾಮಸ್ಥರು ಸಂಬಂಧಪಟ್ಟ ಅಧಿಕಾರಿಗಳಿಗೆ ಸುದ್ದಿ ಮುಟ್ಟಿಸಿದ್ದಾರೆ. 
ಸ್ಥಳಕ್ಕೆ ಧಾವಿಸಿದ ಅಧಿಕಾರಿಗಳು, ದುರಸ್ತಿ ಕಾಮಗಾರಿ ಕೈಗೊಂಡರಾದರೂ ಮಳೆಯ ಕಾರಣದಿಂದಾಗಿ ದುರಸ್ತಿಗೆ ಅಗತ್ಯವಿದ್ದ ಸರಕುಗಳು ತಲುಪಲು ಸಾಧ್ಯವಾಗದೇ ವಾಸ್ಕೋ-ನಿಜಾಮುದ್ದೀನ್ ಗೋವಾ ಎಕ್ಸ್ ಪ್ರೆಸ್ ರೈಲು ಭಾಗಶಃ ರದ್ದುಗೊಂಡಿತ್ತು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com