ಆಗಸ್ಟ್ 16 ರಿಂದ ಬೆಳಗಾವಿ-ಗೋವಾ ನಡುವೆ ರೈಲು ಸಂಚಾರ!

ಆಗಸ್ಟ್ 16ರಿಂದ ಬೆಳಗಾವಿ ಮತ್ತು ಗೋವಾದ ವಾಸ್ಕೊ ನಡುವೆ ರೈಲು ಸಂಚಾರ ಸೇವೆ ಆರಂಭವಾಗಲಿದೆ ...
ರೈಲ್ವೆ ಹಳಿ ಸ್ವಚ್ಛತೆ ಕೆಲಸದಲ್ಲಿ ತೊಡಗಿರುವ ಕಾರ್ಮಿಕರು
ರೈಲ್ವೆ ಹಳಿ ಸ್ವಚ್ಛತೆ ಕೆಲಸದಲ್ಲಿ ತೊಡಗಿರುವ ಕಾರ್ಮಿಕರು
ಹುಬ್ಬಳ್ಳಿ: ಆಗಸ್ಟ್ 16ರಿಂದ ಬೆಳಗಾವಿ ಮತ್ತು ಗೋವಾದ ವಾಸ್ಕೊ ನಡುವೆ ರೈಲು ಸಂಚಾರ ಸೇವೆ ಆರಂಭವಾಗಲಿದೆ ಎಂದು ನೈರುತ್ಯ ರೈಲ್ವೆ ತಿಳಿಸಿದೆ. 
ಈ ಹಿನ್ನೆಲೆಯಲ್ಲಿ ಉದ್ಘಾಟನಾ ತಪಾಸಣೆ ರೈಲು ವಾಸ್ಕೊದಿಂದ ಬೆಳಗಾವಿಗೆ ಇದೇ 10ರಂದು ಸಂಚಾರ ನಡೆಸಲಿದೆ. ಕೇಂದ್ರ ರೈಲ್ವೆ ಖಾತೆ ರಾಜ್ಯ ಸಚಿವ ಸುರೇಶ್ ಅಂಗಡಿ ಮತ್ತು ಕೇಂದ್ರ ರಕ್ಷಣಾ ಇಲಾಖೆ ರಾಜ್ಯ ಸಚಿವ ಶ್ರೀಪಾದ್ ಯೆಸ್ಸೊ ನಾಯಕ್ ವಾಸ್ಕೊ ಡ ಗಾಮಾ ರೈಲ್ವೆ ನಿಲ್ದಾಣದಲ್ಲಿ ಚಾಲನೆ ನೀಡಲಿದ್ದಾರೆ.
ಆಗಸ್ಟ್ 16ರಿಂದ ಬೆಳಗಾವಿಯಿಂದ ತನ್ನ ನಿಗದಿತ ಪ್ರಯಾಣವನ್ನು ಆರಂಭಿಸಲಿದೆ.
ಬೆಳಗಾವಿಯಿಂದ ಬೆಳಗ್ಗೆ 6.20ಕ್ಕೆ ಹೊರಟು ವಾಸ್ಕೊಗೆ ಮಧ್ಯಾಹ್ನ 12.40ಕ್ಕೆ ತಲುಪಲಿದೆ. ಅದೇ ರೀತಿ ವಾಸ್ಕೊ ನಿಲ್ದಾಣದಿಂದ ಅಪರಾಹ್ನ 3.55ಕ್ಕೆ ಹೊರಟು ಬೆಳಗಾವಿಗೆ ರಾತ್ರಿ 9.25ಕ್ಕೆ ತಲುಪಲಿದೆ.
ಮೂರು ತಿಂಗಳವರೆಗೆ ಪ್ರಾಯೋಗಿಕವಾಗಿ ರೈಲು ವಾರಕ್ಕೆ ಎರಡು ಬಾರಿ ಸಂಚರಿಸಲಿದೆ. ರೈಲ್ವೆ ಓಡಾಟದಿಂದ ಈ ಭಾಗಗಳಲ್ಲಿ ಪ್ರವಾಸೋದ್ಯಮ ಮತ್ತು ಉದ್ಯಮಕ್ಕೆ ಹೆಚ್ಚಿನ ಒತ್ತು ಸಿಗಲಿದೆ. 
ತಿಂಗಳಿಗೆ ನಾವು 28 ಬಾರಿ ರೈಲು ಸಂಚಾರ ನಡೆಸಲಿದೆ. ನಂತರ ಜನರ ಪ್ರತಿಕ್ರಿಯೆ ನೋಡಿಕೊಂಡು ಸೇವೆಯನ್ನು ವಿಸ್ತರಿಸಲಾಗುವುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com