ಪುಷ್ಪ ಪ್ರದರ್ಶನಕ್ಕೆ ಲಾಲ್ ಬಾಗ್ ಸಜ್ಜು: ಮೈಸೂರು ದೊರೆ 'ಜಯಚಮರಾಜೇಂದ್ರ ಒಡೆಯರ್' ಗೆ ಅರ್ಪಣೆ

ಸ್ವಾತಂತ್ರ್ಯ ದಿನಾಚರಣೆ ಪುಷ್ಪ ಪ್ರದರ್ಶನಕ್ಕೆ ದಿನಗಣನೆ ಆರಂಭವಾಗಿದ್ದು ಲಾಲ್ ಬಾಗ್ ನಲ್ಲಿ ಸಿದ್ದತೆ ...
ಪುಷ್ಪ ಪ್ರದರ್ಶನಕ್ಕೆ ಸಿದ್ದತೆ
ಪುಷ್ಪ ಪ್ರದರ್ಶನಕ್ಕೆ ಸಿದ್ದತೆ
ಬೆಂಗಳೂರು: ಸ್ವಾತಂತ್ರ್ಯ ದಿನಾಚರಣೆ ಪುಷ್ಪ ಪ್ರದರ್ಶನಕ್ಕೆ ದಿನಗಣನೆ ಆರಂಭವಾಗಿದ್ದು ಲಾಲ್ ಬಾಗ್ ನಲ್ಲಿ ಸಿದ್ದತೆ ಭರದಿಂದ ಸಾಗುತ್ತಿದೆ. ಆಗಸ್ಟ್ 9ರಿಂದ 18ರವರೆಗೆ 10 ದಿನಗಳು ಲಾಲ್ ಬಾಗ್ ನ ಗಾಜಿನ ಮನೆಯಲ್ಲಿ ಪುಷ್ಪ ಪ್ರದರ್ಶನ ನಡೆಯಲಿದೆ.
ಮೈಸೂರಿನ ಮಾಜಿ ದೊರೆ ಜಯಚಾಮರಾಜೇಂದ್ರ ಒಡೆಯರ್ ಅವರ ಜನ್ಮ ಶತಮಾನೋತ್ಸವ ಪ್ರಯುಕ್ತ ಅವರ ಗೌರವಾರ್ಥ 210ನೇ ಆವೃತ್ತಿಯ ಪುಷ್ಪ ಪ್ರದರ್ಶನವನ್ನು ಅವರಿಗೆ ಈ ಬಾರಿ ಅರ್ಪಿಸಲಾಗುತ್ತಿದೆ.
ಈಗಾಗಲೇ ವಿವಿಧ ರೀತಿಯ ಗಿಡಗಳನ್ನು ತಂದು ಜೋಡಿಸುವ ಕಾರ್ಯ ನಡೆಯುತ್ತಿದೆ. ಜಯಚಾಮರಾಜೇಂದ್ರ ಒಡೆಯರ್ ಅವರಿಗೆ ಇಷ್ಟವಾದ ಸ್ಥಳ ಮೈಸೂರಿನ ಜಯಚಾಮರಾಜೇಂದ್ರ ವೃತ್ತ, ಅವರಿಗೆ ಇಷ್ಟವಾಗಿದ್ದ ಸಂಗೀತ ಪರಿಕರಗಳಾದ ವೀಣೆ, ತಬಲಾ, ವಯಲಿನ್ ಗಳನ್ನು ಪುಷ್ಪಗಳಲ್ಲಿ ಅಲಂಕರಿಸುವುದು, ಸಾಹಿತ್ಯ ಮತ್ತು ಶಿಕ್ಷಣಕ್ಕೆ ಒಡೆಯರ್ ಅವರ ಕೊಡುಗೆಗಳನ್ನು ನೆನಪಿಸುವ ಪುಷ್ಪ ಪ್ರದರ್ಶನಗಳು ಈ ಬಾರಿ ನೋಡುಗರಿಗೆ ಆಕರ್ಷಣೆಯಾಗಿರುತ್ತದೆ. ಗಾಜಿನ ಮನೆಯ ಇನ್ನೊಂದು ಬದಿಯಲ್ಲಿ ಲಂಬ ಉದ್ಯಾನವನ್ನು ರಚಿಸಲಾಗುತ್ತದೆ.
ಜಯಚಾಮರಾಜೇಂದ್ರ ವೃತ್ತದ ಪಕ್ಕದಲ್ಲಿ ಮೈಸೂರು ಅರಮನೆಯ ಸಿಂಹಾಸನ, ಹೂವುಗಳಲ್ಲಿ ಎರಡು ಆನೆಗಳು, ಹೂವುಗಳ ದಳಗಳಿಂದ ಒಡೆಯರ್ ಅವರ ನಾಲ್ಕು ಮೂರ್ತಿಗಳು ಕೂಡ ನೋಡುಗರ ಕಣ್ಣಿಗೆ ಹಬ್ಬವನ್ನು ನೀಡಲಿವೆ.ಇವುಗಳನ್ನು ವಿನ್ಯಾಸಗೊಳಿಸುತ್ತಿರುವುದು ವಿನ್ಯಾಸಕ ನಾರಾಯಣ್ ಅವರ ತಂಡ. 
ಈ ಬಾರಿಯ ಪುಷ್ಪ ಪ್ರದರ್ಶನದಲ್ಲಿ ಸುಮಾರು 4 ಲಕ್ಷ ಗುಲಾಬಿಗಳು, ಬೆಗೊನಿಯಾ, ಚೆಂಡು ಹೂವು, ಜೀನಿಯಾ ಮತ್ತಿತರ ಹೂವುಗಳನ್ನು ಬಳಸಲಾಗುತ್ತದೆ. ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ ಮತ್ತು ಪ್ರಮೋದಾ ದೇವಿ ಒಡೆಯರ್ ಪುಷ್ಪ ಪ್ರದರ್ಶನವನ್ನು ಉದ್ಘಾಟಿಸಲಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com