ಧಾರವಾಡ: ವ್ಯಕ್ತಿಯನ್ನು ಕಾಪಾಡಲು ಹೋಗಿ ಸಿಕ್ಕಿ ಹಾಕಿಕೊಂಡ ರಕ್ಷಣಾ ತಂಡ

ತುಂಬಿ ಹರಿಯುತ್ತಿದ್ದ ತುಪ್ಪಾರಿ ಹಳ್ಳ ಕಣಿವೆಯಲ್ಲಿ ಸಿಕ್ಕಿಹಾಕಿಕೊಂಡಿದ್ದ ವ್ಯಕ್ತಿಯನ್ನು ಕಾಪಾಡಲು ...
ಉತ್ತರ ಕರ್ನಾಟಕ ಜಿಲ್ಲೆಯ ಪ್ರವಾಹ ಪೀಡಿತ ಪ್ರದೇಶಗಳ ವೈಮಾನಿಕ ಸಮೀಕ್ಷೆ
ಉತ್ತರ ಕರ್ನಾಟಕ ಜಿಲ್ಲೆಯ ಪ್ರವಾಹ ಪೀಡಿತ ಪ್ರದೇಶಗಳ ವೈಮಾನಿಕ ಸಮೀಕ್ಷೆ
ಧಾರವಾಡ: ತುಂಬಿ ಹರಿಯುತ್ತಿದ್ದ ತುಪ್ಪಾರಿ ಹಳ್ಳ ಕಣಿವೆಯಲ್ಲಿ ಸಿಕ್ಕಿಹಾಕಿಕೊಂಡಿದ್ದ ವ್ಯಕ್ತಿಯನ್ನು ಕಾಪಾಡಲು ಹೋದ ಅಧಿಕಾರಿಗಳ ತಂಡ ರಾತ್ರಿಯಿಡೀ ಸುಮಾರು 12 ಗಂಟೆಗಳ ಕಾಲ ಅಲೆಗಳಲ್ಲಿ ಸಿಕ್ಕಿಹಾಕಿಕೊಂಡಿದ್ದು ಬುಧವಾರ ಬೆಳಗ್ಗೆ ಅವರನ್ನು ರಕ್ಷಿಸಿದ ಘಟನೆ ನಡೆದಿದೆ.
ಕಳೆದ ಸೋಮವಾರ ರಾತ್ರಿಯಿಂದ ಸುರಿದ ಧಾರಾಕಾರ ಮಳೆಯಿಂದ ಜನರು, ಜಾನುವಾರುಗಳನ್ನು ರಕ್ಷಿಸಲು ಅಧಿಕಾರಿಗಳು ಮತ್ತು ರಕ್ಷಣಾ ತಂಡ ದಿನಪೂರ್ತಿ ಕೆಲಸದಲ್ಲಿ ತೊಡಗಿತ್ತು. ಧಾರವಾಡದ ನವಲಗುಂದ ತಾಲ್ಲೂಕಿನ ಶಿರ್ಕೊಲ್ ಗ್ರಾಮದಲ್ಲಿ ತಪಾಸಣೆ ನಡೆಸುತ್ತಿದ್ದ ವೇಳೆ ಬಾಸ್ವನೆಪ್ಪ ಹೆಬ್ಸೂರ್ ಎಂಬ ವ್ಯಕ್ತಿ ತುಪ್ಪಾರಿ ಹಳ್ಳ ದಿಬ್ಬೆಯಲ್ಲಿ ಸಿಕ್ಕಿಹಾಕಿಕೊಂಡಿದ್ದಾರೆ ಎಂದು ತಿಳಿದುಬಂತು.
ಅವರನ್ನು ರಕ್ಷಿಸಲೆಂದು ಸಹಾಯಕ ಆಯುಕ್ತ ಮೊಹಮ್ಮದ್ ಜುಬೇರ್, ಪೊಲೀಸ್ ಅಧಿಕಾರಿ ಮತ್ತು ಅಗ್ನಿಶಾಮಕ ಸಿಬ್ಬಂದಿ ಸೇರಿ 7 ಜನರ ತಂಡ ದೋಣಿ ಮೂಲಕ ಹೋಗಿದ್ದರು. ನಿನ್ನೆ ರಾತ್ರಿ 7 ಗಂಟೆ ಹೊತ್ತಿಗೆ ಹೋಗಿ ವ್ಯಕ್ತಿ ಇದ್ದಲ್ಲಿಗೆ ತಲುಪಿದರು. ವ್ಯಕ್ತಿಯನ್ನು ಕಾಪಾಡಿ ಹಿಂತಿರುಗಿ ಬರುವಾಗ ಮಧ್ಯದಲ್ಲಿ ದೋಣಿ ಸಿಕ್ಕಿಹಾಕಿಕೊಂಡಿತು. 
ನೀರು ಮೇಲಕ್ಕೆ ಬರುತ್ತಿರುವುದರ ಅಪಾಯವನ್ನು ಅರಿತ ಅಗ್ನಿಶಾಮಕ ಸಿಬ್ಬಂದಿ ದೋಣಿಯನ್ನು ಕಟ್ಟಿ ಬಸ್ವನೆಪ್ಪನನ್ನು ಕಾಪಾಡಿದ ಎತ್ತರದ ಪ್ರದೇಶಕ್ಕೆ ಮತ್ತೆ ಹಿಂತಿರುಗಿ ಹೋದರು.
ನೀರು ಅಪಾಯದ ಮಟ್ಟ ಮೀರಿ ಹರಿಯುತ್ತಿದ್ದರಿಂದ ರಕ್ಷಣಾ ತಂಡ ಇಡೀ ರಾತ್ರಿ ದಿಬ್ಬದಲ್ಲಿ ಆಹಾರ, ಸೂರು ಇಲ್ಲದೆ ಗಾಳಿ, ಮಳೆ, ಚಳಿಯಲ್ಲಿಯೇ ಕಳೆಯಬೇಕಾಗಿ ಬಂತು. ಇಂದು ಬೆಳಗ್ಗೆ ಬಾಗಲಕೋಟೆಯಿಂದ ಮತ್ತೊಂದು ದೋಣಿಯಲ್ಲಿ ರಕ್ಷಣಾ ತಂಡ ಹೋಗಿ ಅಲ್ಲಿನವರನ್ನು ಕರೆದು ತಂದಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com