ಬಳ್ಳಾರಿಯ ಮೆಚ್ಚಿನ ಅಮ್ಮನಾಗಿದ್ದ ಸುಷ್ಮಾ: 2011ರ ನಂತರ ವರ ಮಹಾಲಕ್ಷ್ಮಿ ಹಬ್ಬಕ್ಕೆ ಬರಲೇ ಇಲ್ಲ'

ಹಣೆಯಲ್ಲಿ ದೊಡ್ಡ ಬಿಂದಿ, ಬೈತಲೆಗೆ ದೊಡ್ಡ ಕುಂಕುಮ, ರೇಷ್ಮೆ ಸೀರೆ, ಸದಾ ನಗುವ ಮುಖ ಇದು ಮಾಜಿ ಕೇಂದ್ರ ಸಚಿವೆ ಸುಷ್ಮಾ ಸ್ವರಾಜ್ ಯಾವಾಗಲೂ ಇರುತ್ತಿದ್ದ ...
ಸುಷ್ಮಾ ಸ್ವರಾಜ್
ಸುಷ್ಮಾ ಸ್ವರಾಜ್
ಬೆಂಗಳೂರು: ಹಣೆಯಲ್ಲಿ ದೊಡ್ಡ ಬಿಂದಿ, ಬೈತಲೆಗೆ ದೊಡ್ಡ ಕುಂಕುಮ, ರೇಷ್ಮೆ ಸೀರೆ, ಸದಾ ನಗುವ ಮುಖ ಇದು ಮಾಜಿ ಕೇಂದ್ರ ಸಚಿವೆ ಸುಷ್ಮಾ ಸ್ವರಾಜ್ ಯಾವಾಗಲೂ ಇರುತ್ತಿದ್ದ ರೀತಿ, ತಮ್ಮ ನಗುಮೊಗದಿಂದಿರುತ್ತಿದ್ದ ಸುಷ್ಮಾ ಬಳ್ಳಾರಿಗೆ ಚಿರಪರಿಚಿತರು.
1999ರಿಂದ ಬಳ್ಳಾರಿ ಜೊತೆಗೆ ಸುಷ್ಮಾ ನಂಟು ಆರಂಭವಾಯಿತು, ಕಾಂಗ್ರೆಸ್ ನಾಯಕಿ ಸೋನಿಯಾ ಗಾಂಧಿ ವಿರುದ್ದ ಸುಷ್ಮಾ ,ಸ್ವರಾಜ್ ಅವರನ್ನು ಬಿಜೆಪಿ ಬಳ್ಳಾರಿ ಲೋಕಸಭೆ ಕ್ಷೇತ್ರದಿಂದ ಕಣಕ್ಕಿಳಿಸಿತ್ತು, ಈ ಚುನಾವಣೆಯಲ್ಲಿ ಸುಷ್ಮಾ ಸೋತರು ಬಳ್ಳಾರಿ ನಂಟನ್ನು ಮಾತ್ರ ಬಿಟ್ಟಿರಲಿಲ್ಲ.
ಪ್ರತಿ ವರ್ಷ ವರಮಹಾಲಕ್ಷ್ಮಿ ಹಬ್ಬಕ್ಕೆ ಬರುತ್ತಿದ್ದ ಸುಷ್ಮಾ ಬಳ್ಳಾರಿಗೆ ಬರುತ್ತಿದ್ದರು. 11 ವರ್ಷಗಳಿಂದ ಈ ಪದ್ದತಿ ನಿರಂತರವಾಗಿ ನಡೆದುಕೊಂಡು ಬರುತ್ತಿತ್ತು. ಬಿ.ಕೆ ಶ್ರೀನಿವಾಸ ಮೂರ್ತಿ ಎಂಬುವರ ಮನೆಯಲ್ಲಿ ಪೂಜಾ ಕೈಂಕರ್ಯಗಳು ನಡೆಯುತ್ತಿದ್ದವು.
ಸುಷ್ಮಾ ಸ್ವರಾಜ್ ಅವರ ದತ್ತು ಪುತ್ರ ಬಿಜೆಪಿ ಶಾಸಕ ಶ್ರೀರಾಮುಲು ಸಾಮೂಹಿಕ ವಿವಾಹ ಆಯೋಜಿಸುತ್ತಿದ್ದರು.  ಇದಕ್ಕೆ ಸುಷ್ಮಾ ಮುಖ್ಯ ಅತಿಥಿಯಾಗಿರುತ್ತಿದ್ದರು. 
ಮಾಜಿ ಸಚಿವ ಜನಾರ್ದನ ರೆಡ್ಡಿ ಗಣಿ ಹಗರಣದಲ್ಲಿ ಸಿಲುಕಿ ಜೈಲಿಗೆ ಹೋದ ನಂತರ, 2011ರ ರಿಂದ ಸುಷ್ಮಾ ಬಳ್ಳಾರಿಗೆ ಭೇಟಿ ನೀಡುವುದನ್ನು ನಿಲ್ಲಿಸಿದರು. ರೆಡ್ಡಿ ಸಹೋದರರಾದ, ಕರುಣಾಕರ ರೆಡ್ಡಿ, ಜನಾರ್ದನ ರೆಡ್ಡಿ ಹಾಗೂ ಸೋಮಶೇಖರ ರೆಡ್ಡಿ ಅವರಿಗೆ ಗುರುವಾಗಿದ್ದರು.  ಆದರೆ ತಾವು ಕೇವಲ ವರಮಹಾಲಕ್ಷ್ಮಿ ಹಬ್ಬ ಆಚರಿಸಲು ಮಾತ್ರ  ಬಳ್ಳಾರಿಗೆ ತೆರಳುತ್ತಿದ್ದೆ, ರೆಡ್ಡಿ ಸಹೋದರರ ರಾಜಕೀಯಕ್ಕೂ ನನಗು ಯಾವುದೇ ಸಂಬಂಧವಿಲ್ಲ ಎಂದು ಸ್ಪಷ್ಟ ಪಡಿಸಿದ್ದರು. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com