ಬೆಳಗಾವಿ: ಮನೆ ಜಲಾವೃತಗೊಂಡು ಮರವನ್ನೇರಿ ಕುಳಿತ ದಂಪತಿ, ರಕ್ಷಣೆಗಾಗಿ ಹರಸಾಹಸ

ಕಳೆದ ಕೆಲವು ದಿನಗಳಿಂದ ಉತ್ತರ ಕರ್ನಾಟಕದಲ್ಲಿ ಪ್ರವಾಹ ಪರಿಸ್ಥಿತಿ ಗಂಭೀರವಾಗಿದ್ದು, ರಕ್ಷಣಾ ಸಿಬ್ಬಂದಿ ಸಾವಿರಾರು ಜನರನ್ನು ಸ್ಥಳಾಂತರಿಸಿದ್ದಾರೆ. ಆದರೆ, ಕಬಲಾಪುರ ಗ್ರಾಮದಲ್ಲಿ ದಂಪತಿಯ ರಕ್ಷಣಾ ಕಾರ್ಯಾಚರಣೆ ಇನ್ನೂ ಯಶಸ್ವಿಯಾಗಿಲ್ಲ.
ಜಲಾವೃತಗೊಂಡ ಬೆಳಗಾವಿ ನಗರ
ಜಲಾವೃತಗೊಂಡ ಬೆಳಗಾವಿ ನಗರ
ಬೆಳಗಾವಿ:  ಕಳೆದ ಕೆಲವು ದಿನಗಳಿಂದ ಉತ್ತರ ಕರ್ನಾಟಕದಲ್ಲಿ ಪ್ರವಾಹ ಪರಿಸ್ಥಿತಿ ಗಂಭೀರವಾಗಿದ್ದು, ರಕ್ಷಣಾ ಸಿಬ್ಬಂದಿ ಸಾವಿರಾರು ಜನರನ್ನು ಸ್ಥಳಾಂತರಿಸಿದ್ದಾರೆ. ಆದರೆ, ಕಬಲಾಪುರ ಗ್ರಾಮದಲ್ಲಿ ದಂಪತಿಯ ರಕ್ಷಣಾ ಕಾರ್ಯಾಚರಣೆ ಇನ್ನೂ ಯಶಸ್ವಿಯಾಗಿಲ್ಲ.
ಕಾಳಪ್ಪ ಮತ್ತು ರತ್ನವ್ವ ಎಂಬ ದಂಪತಿ ಕಳೆದ ಮೂರು ದಿನಗಳಿಂದ ಪ್ರವಾಹದಿಂದ ಜಲಾವೃತಗೊಂಡ ಮನೆಯಿಂದಾಗಿ ಕುಸಿದಿದ್ದು ರಕ್ಷಣೆಗಾಗಿ ಮರವನೇರಿ ಕುಳಿತಿದ್ದು, ರಕ್ಷಣಾ ಸಿಬ್ಬಂದಿಗಳಿಗಾಗಿ ಕಾಯುತ್ತಿದ್ದಾರೆ. ಈ ದಂಪತಿಯನ್ನು ರಕ್ಷಿಸಲು ರಕ್ಷಣಾ ತಂಡ ಹರಸಾಹಸಪಡುತ್ತಿದೆ. 
ಬಳ್ಳಾರಿ ನಾಲೆಯಲ್ಲಿ ತೀವ್ರ ಪ್ರವಾಹದಿಂದಾಗಿ ರಕ್ಷಣಾ ಕಾರ್ಯಾಚರಣೆ ಕಷ್ಟಕರವಾಗಿದೆ. ನಾಲೆಯ ಬದಿಯಲ್ಲಿ ಈ ದಂಪತಿಯ ಮನೆಯಿದ್ದು, ಕಳೆದ ಮೂರು ದಿನಗಳಿಂದ ಬರುತ್ತಿರುವ ನೀರಿನಿಂದಾಗಿ ಮನೆ ಜಲಾವೃತಗೊಂಡಿದೆ.
ಬಳ್ಳಾರಿ ನಾಲೆಯ ಬಳಿ ರಕ್ಷಣಾ ಕಾರ್ಯಾಚರಣೆ ಮೇಲ್ವಿಚಾರಣೆ ನಡೆಸುತ್ತಿರುವ ಶಾಸಕಿ ಲಕ್ಷ್ಮಿ ಹೆಬ್ಬಾಳ್ಕರ್, ದಂಪತಿಗಳು ಇರುವ ಸ್ಥಳಕ್ಕೆ ತಲುಪಲು ಪ್ರಯತ್ನಿಸಲಾಗುತ್ತಿದೆ. ಕಾರ್ಯಚಾರಣೆ ಯಶಸ್ವಿಗೊಳಿಸಲು 120 ಅಡಿ ಉದ್ದದ ಕ್ರೇನ್ ವ್ಯವಸ್ಥೆ ಮಾಡಲಾಗುವುದು ಎಂದು ಹೇಳಿದ್ದಾರೆ.
ಬಳ್ಳಾರಿ ನಾಲಾ ಬಳಿಯ ಕಾರ್ಯಾಚರಣೆಗಾಗಿ ಹೆಲಿಕಾಪ್ಟರ್ ಬಳಸಲಾಗಿತ್ತು. ಆದರೆ, ಹವಾಮಾನ ವೈಫರೀತ್ಯದ ಹಿನ್ನೆಲೆಯಲ್ಲಿ ಅರ್ಧ ದಾರಿಯಲ್ಲೇ ಈ ಹೆಲಿಕಾಪ್ಟರ್ ವಾಪಸ್ ಆಯಿತು. ಈ ದಂಪತಿಗಳ ರಕ್ಷಣೆಗಾಗಿ ಜಿಲ್ಲಾಡಳಿತದಿಂದ ತೀವ್ರ ಕಸರತ್ತು ನಡೆಸಲಾಗುತ್ತಿದೆ. 
ಈ ದಂಪತಿಗಳನ್ನು ನಮ್ಮ ತಂಡ ರಕ್ಷಿಸಲಿದೆ ಎಂದು ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ವಿಶ್ವಾಸ ವ್ಯಕ್ತಪಡಿಸಿದ್ದಾರೆ. 
ಇಂದಿನಿಂದ ವಿಶೇಷ ರೈಲು ಸೇವೆ:  ಪ್ರವಾಹ ಸಂತ್ರಸ್ಥರಿಗೆ ನೆರವು ನೀಡುವ ನಿಟ್ಟಿನಲ್ಲಿ ಯಶವಂತಪುರ ಹಾಗೂ ಮಹಾರಾಷ್ಟ್ರದ ಮಿರಾಜ್ ನಡುವೆ ಇಂದಿನಿಂದ ನಾಲ್ಕು ದಿನಗಳ ಕಾಲ ವಿಶೇಷ ರೈಲು ಸಂಚರಿಸಲಿದೆ.
ಪ್ರವಾಹ ಪೀಡಿತ ಸಂತ್ರಸ್ಥರಿಗಾಗಿ ಅಗತ್ಯ ವಸ್ತುಗಳನ್ನು ನೈರುತ್ಯ ರೈಲ್ವೆ ವಲಯದಿಂದ ಕಳುಹಿಸಲಾಗಿದೆ. ಸುಮಾರು 50 ಸಾವಿರ ರೂಪಾಯಿ ಮೌಲ್ಯದ ವಸ್ತುಗಳನ್ನು ಹುಬ್ಬಳ್ಳಿ- ಹಜರತ್ ನಿಜಾಮುದ್ದೀನ್ ಎಕ್ಸ್ ಪ್ರೆಸ್ ನಲ್ಲಿ ಬುಧವಾರ ಕಳುಹಿಸಲಾಗಿದೆ ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com