ನೆರೆ ಮತ್ತು ಅತಿವೃಷ್ಠಿ ಪೀಡಿತ ಜಿಲ್ಲೆಗಳಿಗೆ ಮೇಲುಸ್ತುವಾರಿ ಅಧಿಕಾರಿಗಳ ನೇಮಕ

ರಾಜ್ಯದ ಅತಿವೃಷ್ಠಿ ಹಾಗೂ ಪ್ರವಾಹ ಪೀಡಿತ ಜಿಲ್ಲೆಗಳಲ್ಲಿ ಪರಿಹಾರ ಕಾರ್ಯಗಳ ಮೇಲ್ವಿಚಾರಣೆ ನಡೆಸಲು 11 ಹಿರಿಯ ಐಎಎಸ್ ಅಧಿಕಾರಿಗಳಿಗೆ ಮೇಲುಸ್ತವಾರಿ ಜವಾಬ್ದಾರಿ ವಹಿಸಿ ಸರ್ಕಾರ ಆದೇಶ ಹೊರಡಿಸಿದೆ.
ಬಿಎಸ್ ಯಡಿಯೂರಪ್ಪ
ಬಿಎಸ್ ಯಡಿಯೂರಪ್ಪ

ಬೆಂಗಳೂರು: ರಾಜ್ಯದ ಅತಿವೃಷ್ಠಿ ಹಾಗೂ ಪ್ರವಾಹ ಪೀಡಿತ ಜಿಲ್ಲೆಗಳಲ್ಲಿ ಪರಿಹಾರ ಕಾರ್ಯಗಳ ಮೇಲ್ವಿಚಾರಣೆ ನಡೆಸಲು 11 ಹಿರಿಯ ಐಎಎಸ್ ಅಧಿಕಾರಿಗಳಿಗೆ ಮೇಲುಸ್ತವಾರಿ ಜವಾಬ್ದಾರಿ ವಹಿಸಿ ಸರ್ಕಾರ ಆದೇಶ ಹೊರಡಿಸಿದೆ.

ಗೃಹ ಕಚೇರಿ ಕೃಷ್ಣಾದಲ್ಲಿ ಹಿರಿಯ ಅಧಿಕಾರಿಗಳ ಸಭೆ ನಡೆಸಿದ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ನೇತೃತ್ವದ ಸಭೆಯಲ್ಲಿ ಮೇಲುಸ್ತುವಾರಿ ವಹಿಸಲು ತೀರ್ಮಾನ ಕೈಗೊಳ್ಳಲಾಗಿದೆ. ಈ ಹಿರಿಯ ಐಎಎಸ್ ಆಧಿಕಾರಿಗಳು ಜಿಲ್ಲಾಡಳಿತ ಮತ್ತು ಉಸ್ತುವಾರಿ ಕಾರ್ಯದರ್ಶಿಗಳೊಂದಿಗೆ ನಿರಂತರ ಸಂಪರ್ಕದಲ್ಲಿದ್ದು ಸಮನ್ವಯ ಸಾಧಿಸಿ ಪರಿಹಾರ ಕಾರ್ಯ ತ್ವರಿತ ಹಾಗೂ ಪರಿಣಾಮಕಾರಿ ನೆಡೆಸಲು ಸೂಚಿಸಲಾಗಿದೆ.

17 ಜಿಲ್ಲೆಗಳಲ್ಲಿ ನೆರೆ ಹಾಗೂ ಅತಿವೃಷ್ಠಿಯಿಂದ ಸಾಕಷ್ಟು ಹಾನಿಗೀಡಾದರೂ ಕೇವಲ 11 ಜಿಲ್ಲೆಗಳಿಗೆ ಮಾತ್ರ ಮೇಲುಸ್ತುವಾರಿ ಅಧಿಕಾರಿಗಳನ್ನು ನೇಮಿಸಿರುವುದು ಅಚ್ಚರಿ ಮೂಡಿಸಿದೆ. ಗದಗ, ಹಾವೇರಿ, ಧಾರವಾಡ, ಚಿಕ್ಕಮಗಳೂರು, ದಕ್ಷಿಣ ಕನ್ನಡ ಹಾಗೂ ಮೈಸೂರು ಜಿಲ್ಲೆಗಳಿಗೆ ಮೇಲುಸ್ತುವಾರಿ ಕಾರ್ಯದರ್ಶಿಗಳನ್ನು ನೇಮಿಸಿಲಾಗಿಲ್ಲ.

ಬೆಳಗಾವಿ, ಬಾಗಲಕೋಟೆ- ಡಾ.ರಜನೀಶ್ ಗೋಯಲ್ 
ವಿಜಯಪುರ,ಕಲಬುರಗಿ-ಇ.ವಿ.ರಮಣರೆಡ್ಡಿ
ರಾಯಚೂರು,ಯಾದಗಿರಿ -ಮಹೇಂದ್ರ ಜೈನ್ 
ಉತ್ತರ ಕನ್ನಡ, ಉಡುಪಿ- ಡಾ.ಸಂದೀಪ್ ದವೆ
ಶಿವಮೊಗ್ಗ -ರಾಜೀವ್ ಚಾವ್ಲಾ
ಹಾಸನ,ಕೊಡಗು -ಡಾ.ರಾಜ್ ಕುಮಾರ್ ಖತ್ರಿ ಅವರಿಗೆ ಜವಾಬ್ದಾರಿ ವಹಿಸಲಾಗಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com