ಪ್ರವಾಹದ ನೀರಿನಲ್ಲಿ ತೆಪ್ಪ ನಡೆಸಲು ರೇಣುಕಾಚಾರ್ಯ ಹರಸಾಹಸ: ವಿಡಿಯೋ ವೈರಲ್

ನೆರೆಯ ದಾವಣಗೆರೆ ಜಿಲ್ಲೆಗೂ ಪ್ರವಾಹದ ನೀರು ನುಗ್ಗಿ ಅವಾಂತರ ಸೃಷ್ಟಿ ಮಾಡಿದೆ. ಇದೇ ಪ್ರವಾಹದ ನೀರಿನಲ್ಲಿ ಹೊನ್ನಾಳಿ ಶಾಸಕ ರೇಣುಕಾಚಾರ್ಯ ತೆಪ್ಪ ನಡೆಸಲು ಹರಸಾಹಸ ಪಟ್ಟಿದ್ದಾರೆ. ಈ ವಿಡಿಯೋ ಇದೀಗ ವೈರಲ್ ಆಗಿದೆ.
ರೇಣುಕಾಚಾರ್ಯ ಅವರ ತೆಪ್ಪದ ಸರ್ಕಸ್
ರೇಣುಕಾಚಾರ್ಯ ಅವರ ತೆಪ್ಪದ ಸರ್ಕಸ್

ಹೊನ್ನಾಳಿ: ನೆರೆಯ ದಾವಣಗೆರೆ ಜಿಲ್ಲೆಗೂ ಪ್ರವಾಹದ ನೀರು ನುಗ್ಗಿ ಅವಾಂತರ ಸೃಷ್ಟಿ ಮಾಡಿದೆ. ಇದೇ ಪ್ರವಾಹದ ನೀರಿನಲ್ಲಿ ಹೊನ್ನಾಳಿ ಶಾಸಕ ರೇಣುಕಾಚಾರ್ಯ ತೆಪ್ಪ ನಡೆಸಲು ಹರಸಾಹಸ ಪಟ್ಟಿದ್ದಾರೆ. ಈ ವಿಡಿಯೋ ಇದೀಗ ವೈರಲ್ ಆಗಿದೆ.

ಇಡೀ ಕರ್ನಾಟಕ ಪ್ರವಾಹದಿಂದ ನಲುಗಿ ಹೋಗಿದ್ದು, ಉತ್ತರ ಕರ್ನಾಟಕ ಮತ್ತು ಕರಾವಳಿ, ಮಲೆನಾಡು ಜಿಲ್ಲೆಗಳು ಮಳೆ ಮತ್ತು ಪ್ರವಾಹದಿಂದಾಗಿ ಕಂಡು ಕೇಳರಿಯದ ರೀತಿಯಲ್ಲಿ ಸಂಕಷ್ಟಕ್ಕೀಡಾಗಿವೆ. ಏತನ್ಮಧ್ಯೆ ನೆರೆಯ ದಾವಣಗೆರೆ ಜಿಲ್ಲೆಗೂ ಪ್ರವಾಹದ ನೀರು ಹರಿದಿದ್ದು, ಸಾಕಷ್ಟು ಪ್ರಮಾಣದ ಕೃಷಿ ಭೂಮಿ ನೀರಿನಲ್ಲಿ ಮುಳುಗಿದೆ. ಇದೀಗ ಇದೇ ಪ್ರವಾಹದ ನೀರಿನಲ್ಲಿ ಹೊನ್ನಾಳಿ ಶಾಸಕ ರೇಣುಕಾಚಾರ್ಯ ತೆಪ್ಪ ನಡೆಸಲು ಹೋಗಿ ನಗೆಪಾಟಲಿಗೀಡಾಗಿದ್ದಾರೆ.

ಹೌದು.. ದಾವಣಗೆರೆ ಜಿಲ್ಲೆಯ ಹೊನ್ನಾಳಿಯ ಬೆಳಿಮಲ್ಲೂರ್ ಗ್ರಾಮದಲ್ಲಿ ಕೃಷಿಭೂಮಿಗೆ ನೀರು ನುಗ್ಗಿದ್ದು, ಸಾಕಷ್ಟು ಬೆಳೆ ಹಾನಿಯಾಗಿದೆ. ಈ ಕುರಿತಂತೆ ವೀಕ್ಷಣೆಗೆ ಆಗಮಿಸಿದ ಬಿಜೆಪಿ ಶಾಸಕ ಎಂಪಿ ರೇಣುಕಾಚಾರ್ಯ ಸ್ಥಳೀಯರ ಬಳಿ ಇದ್ಜ ತೆಪ್ಪವನ್ನು ಹತ್ತಿದ್ದಾರೆ. ಈ ವೇಳೆ ಹುಟ್ಟನ್ನು ಕೈಗೆ ತೆಗೆದುಕೊಂಡು ತೆಪ್ಪವನ್ನು ನಡೆಸಲು ಮುಂದಾಗಿದ್ದಾಗೆ.ಮೊಣಕಾಲುದ್ದವೂ ನೀರಿಲ್ಲದ ಜಾಗದಲ್ಲಿ ತೆಪ್ಪ ನಿಲ್ಲಿಸಿಕೊಂಡು ಅದನ್ನು ಚಲಿಸಲು ರೇಣುಕಾಚಾರ್ಯ ಅವರು ಪಟ್ಟ ಹರಸಾಹಸದ ವಿಡಿಯೋ ಇದೀಗ ವೈರಲ್ ಆಗಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com