ಬಿಜೆಪಿ ಶಾಸಕ ಅಪ್ಪಚ್ಚು ರಂಜನ್ ವಿರುದ್ಧ ಗ್ರಾಮಸ್ಥರ ಆಕ್ರೋಶ

ಬಿಜೆಪಿ ಶಾಸಕ ಅಪ್ಪಚ್ಚು ರಂಜನ್ ಹಾಗೂ ಬೆಂಬಲಿಗರನ್ನು ಗ್ರಾಮಸ್ಥರು ತರಾಟೆಗೆ ತೆಗೆದುಕೊಂಡ ಘಟನೆ ಭಾನುವಾರ ಜರುಗಿದೆ.
ಬಿಜೆಪಿ ಶಾಸಕ ಅಪ್ಪಚ್ಚು ರಂಜನ್ ವಿರುದ್ಧ ಗ್ರಾಮಸ್ಥರ ಆಕ್ರೋಶ

ಕೊಡಗು: ಬಿಜೆಪಿ ಶಾಸಕ ಅಪ್ಪಚ್ಚು ರಂಜನ್ ಹಾಗೂ ಬೆಂಬಲಿಗರನ್ನು ಗ್ರಾಮಸ್ಥರು ತರಾಟೆಗೆ ತೆಗೆದುಕೊಂಡ ಘಟನೆ ಭಾನುವಾರ ಜರುಗಿದೆ.

ಕೊಡಗಿನಲ್ಲಿ ಪ್ರವಾಹಪೀಡಿತರಿಗೆ ಶಾಸಕರಾದ ಅಪ್ಪಚ್ಚು ರಂಜನ್ ಸರಿಯಾದ ರೀತಿಯಲ್ಲಿ ಸಹಕರಿಸುತ್ತಿಲ್ಲ. ಸಹಾಯ ನೀಡಲು ಶ್ರೀಮಂತ ಬಡವ ಎಂಬ ಬೇಧಭಾವ ಮಾಡುತ್ತಿದ್ದಾರೆ ಎಂದು ಆರೋಪಿಸಿ ಗುಡ್ಡೆಹೊಸೂರು ತೆಪ್ಪದಗಕಂಡಿ ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿದರು.

ಶನಿವಾರ ಕಾವೇರಿ ನೀರಿನ ರಭಸಕ್ಕೆ ತೆಪ್ಪದಕಂಡಿ ಗ್ರಾಮದಲ್ಲಿ 4 ಮನೆಗಳು ಕುಸಿದು ಬಿದ್ದಿದ್ದು, ಮನೆ ಸಾಮಾಗ್ರಿಗಳನ್ನು ಜನರನ್ನು ತೆರವುಗೊಳಿಸಲು ಶಾಸಕರಾಗಲೀ ಅಥವಾ ಅವರ ಕಡೆಯವರಾಗಲೀ ಆಗಮಿಸಿರಲಿಲ್ಲ. ಯಾರ ನೆರವು ಇಲ್ಲದೇ ಇದ್ದುದ್ದರಿಂದ ಗ್ರಾಮಸ್ಥರೇ ಸಾಮಾಗ್ರಿಗಳನ್ನೆಲ್ಲ ತೆರವುಗೊಳಿಸಿದ್ದರು. ಆದರೆ ಇಂದು ಎರಡು ಜೀಪ್ ನಲ್ಲಿ ಅಪ್ಪಚ್ಚು ರಂಜನ್ ಭಾವಚಿತ್ರ ಅಂಟಿಸಿಕೊಂಡು ಅವರ ಬೆಂಬಲಿಗರು ತೆಪ್ಪದಕಂಡಿ ಗ್ರಾಮಕ್ಕೆ ಆಗಮಿಸಿದ್ದನ್ನು ಕಂಡ ಗ್ರಾಮಸ್ಥರು  ಅವರನ್ನು  ತೀವ್ರ ತರಾಟೆಗೆ ತೆಗೆದುಕೊಂಡು, ಶಾಸಕರ ವಿರುದ್ಧ ಧಿಕ್ಕಾರ ಕೂಗಿದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com