ಗೌರಿ ಲಂಕೇಶ್ ಹತ್ಯೆ ಪ್ರಕರಣದ ತನಿಖಾಧಿಕಾರಿಗಳಿಗೆ 'ಗೃಹಮಂತ್ರಿ ಪದಕ'

ಗೌರಿ ಲಂಕೇಶ್ ಹತ್ಯೆ ಪ್ರಕರಣದಲ್ಲಿ ಅತ್ಯುತ್ತಮವಾಗಿ ತನಿಖೆ ನಡೆಸಿದ ಕರ್ನಾಟಕದ ಪೊಲೀಸ್ ಅಧಿಕಾರಿಗಳು ಪ್ರತಿಷ್ಠಿತ ಕೇಂದ್ರ ಗೃಹಮಂತ್ರಿ ಪದಕ-2019ಕ್ಕೆ ಭಾಜನರಾಗಿದ್ದಾರೆ.
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ

ಬೆಂಗಳೂರು:  ಗೌರಿ ಲಂಕೇಶ್ ಹತ್ಯೆ ಪ್ರಕರಣದಲ್ಲಿ ಅತ್ಯುತ್ತಮವಾಗಿ ತನಿಖೆ ನಡೆಸಿದ ಕರ್ನಾಟಕದ ಪೊಲೀಸ್ ಅಧಿಕಾರಿಗಳು ಪ್ರತಿಷ್ಠಿತ ಕೇಂದ್ರ ಗೃಹಮಂತ್ರಿ ಪದಕ-2019ಕ್ಕೆ ಭಾಜನರಾಗಿದ್ದಾರೆ.

ಹೌದು.. ಕರ್ನಾಟಕದ 6 ಮಂದಿ ಪೋಲಿಸ್‌ ಅಧಿಕಾರಿಗಳಿಗೆ ಕೇಂದ್ರ ಗೃಹ ಮಂತ್ರಿ ಪದಕ ಪ್ರಶಸ್ತಿಗೆ ಪಾತ್ರವಾಗಿದ್ದು, ಈ ಪೈಕಿ ಗೌರಿ ಲಂಕೇಶ್‌ ಹತ್ಯೆ ಪ್ರಕರಣದಲ್ಲಿ ಅತ್ಯುತ್ತಮ ತನಿಖೆ ನಡೆಸಿದ್ದ ಹಿನ್ನಲೆಯಲ್ಲಿ ಐಪಿಎಸ್‌ ಅಧಿಕಾರಿಗಳಾದ ಎಂ.ಎನ್ ಅನುಚೇತನ್‌ ಹಾಗೂ ಡಿವೈಎಸ್‌ಪಿ ರಂಗಪ್ಪ. ಡಿವೈಎಸ್‌ಪಿ ರವಿಶಂಕರ್‌, ಎಸ್ಪಿ ಜಾಹ್ನವಿ ಸಿಪಿಐ ಸತೀಶ್‌ ಹಾಗೂ ಇನ್ಸಪೆಕ್ಟರ್‌ ರಾಜು ಅವರು ಪ್ರಶಸ್ತಿ ಪಡೆದುಕೊಂಡಿರುವ ಪೊಲೀಸ್‌ ಅಧಿಕಾರಿಗಳಾಗಿದ್ದಾರೆ.

ಇನ್ನು ದೇಶದ್ಯಾಂತ ವಿವಿಧ ರಾಜ್ಯಗಳ ಪೊಲೀಸ್ ಅಧಿಕಾರಿಗಳು ಈ ಪ್ರಶಸ್ತಿಗಳನ್ನು ಪಡೆದುಕೊಳ್ಳುತ್ತಿದ್ದು ಈ ಪೈಕಿ ನಮ್ಮ ರಾಜ್ಯ 6 ಮಂದಿ ಪೋಲಿಸ್‌ ಅಧಿಕಾರಿಗಳು ಗೌರವಕ್ಕೆ ಪಾತ್ರವಾಗಿದ್ದಾರೆ. ತನಿಖಾ ವಿಭಾಗದಲ್ಲಿ ಉತ್ತಮ ಕಾರ್ಯದಕ್ಷತೆ ತೋರಿದ ಹಿನ್ನೆಲೆಯಲ್ಲಿ ಆರು ಪೊಲೀಸ್‌ ಅಧಿಕಾರಿಗಳಿಗೆ ಪದಕ ಪ್ರಕಟಿಸಲಾಗಿದೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com