ಭೂಕುಸಿತ- ಪ್ರವಾಹದಿಂದ ಹಾನಿಯಾಗಿರುವ ಶಿವಮೊಗ್ಗಕ್ಕೆ ವಿಶೇಷ ಪ್ಯಾಕೇಜ್: ಯಡಿಯೂರಪ್ಪ

ಶಿವಮೊಗ್ಗ ಜಿಲ್ಲೆಯ ತೀರ್ಥಹಳ್ಳಿ ತಾಲೂಕಿನ ಹೆಗಲತ್ತಿ ಗ್ರಾಮದಲ್ಲಿ ಗುಡ್ಡ ಕುಸಿದಿದ್ದು, ಅಪಾರ ಪ್ರಮಾಣದ ತೋಟದ ಬೆಳೆ ನಷ್ಟವಾಗಿದೆ, ಅರಣ್ಯ ಇಲಾಖೆ ಮತ್ತು ಕಂದಾಯ ಇಲಾಖೆ ಅಧಿಕಾರಿಗಳು ಸರ್ವೆ ನಡೆಸಿದ ಬಳಿಕ ವರದಿ ನೀಡಲಿದ್ದು, ..
ಭೂಕುಸಿತ- ಪ್ರವಾಹದಿಂದ ಹಾನಿಯಾಗಿರುವ ಶಿವಮೊಗ್ಗಕ್ಕೆ ವಿಶೇಷ ಪ್ಯಾಕೇಜ್: ಯಡಿಯೂರಪ್ಪ

ಬೆಂಗಳೂರು: ಶಿವಮೊಗ್ಗ ಜಿಲ್ಲೆಯ ತೀರ್ಥಹಳ್ಳಿ ತಾಲೂಕಿನ ಹೆಗಲತ್ತಿ ಗ್ರಾಮದಲ್ಲಿ ಗುಡ್ಡ ಕುಸಿದಿದ್ದು, ಅಪಾರ ಪ್ರಮಾಣದ ತೋಟದ ಬೆಳೆ ನಷ್ಟವಾಗಿದೆ, ಅರಣ್ಯ ಇಲಾಖೆ ಮತ್ತು ಕಂದಾಯ ಇಲಾಖೆ ಅಧಿಕಾರಿಗಳು ಸರ್ವೆ ನಡೆಸಿದ ಬಳಿಕ ವರದಿ ನೀಡಲಿದ್ದು, ನಂತರ ಪರಿಹಾರ ವಿತರಿಸಲಾಗುವುದು. ಯಾವುದೇ ರೈತರು, ಸಂತ್ರಸ್ತರು ಆತಂಕ ಪಡುವ ಅಗತ್ಯವಿಲ್ಲ ಎಂದು ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ ಭರವಸೆ ನೀಡಿದ್ದಾರೆ.

ಇಂದು ಬೆಳಗ್ಗೆ ಹೆಗಲತ್ತಿ ಗ್ರಾಮಕ್ಕೆ ಭೇಟಿ ನೀಡಿ ಪರಿಶೀಲಿಸಿದ ಅವರು, ಅಧಿಕಾರಿಗಳು ಇನ್ನು ನಾಲ್ಕೈದು ದಿನಗಳಲ್ಲಿ ಸ್ಥಳ ವೀಕ್ಷಣೆ ಮಾಡಿ ಹಾನಿಗೊಳಗಾದ ಜಮೀನಿನಲ್ಲಿ ಎಷ್ಟು ಅರಣ್ಯ ಇಲಾಖೆಗೆ ಸೇರಿದೆ ಮತ್ತು ಎಷ್ಟು ರೈತರಿಗೆ ಸೇರಿದೆ ಎಂಬುದನ್ನು ಅಂದಾಜಿಸಲಿದ್ದಾರೆ. ಅವರು ವರದಿ ಕೊಟ್ಟ ನಂತರ ಪರಿಹಾರ ವಿತರಿಸಲಾಗುವುದು. ಯಾರು ಕೂಡ ಕಂಗಾಲಾಗುವ ಅಗತ್ಯವಿಲ್ಲ ಎಂದು ಹೇಳಿದರು.

ಇಡೀ ಜಿಲ್ಲೆಯಲ್ಲಿ ಪ್ರವಾಹ ಹಾಗೂ ಭೂ ಕುಸಿತದಿಂದ ಉಂಟಾಗಿರುವ ಹಾನಿಯ ಬಗ್ಗೆ ಒನ್ನೊಂದು ವಾರದಲ್ಲಿ ವರದಿ ಸಿಗಲಿದ್ದು, ಬಳಿಕ ವಿಶೇಷ ಪ್ಯಾಕೇಜ್ ಘೋಷಿಸಲಾಗುವುದು. ಇಂದು ಸಂಜೆ ಕ್ಷೇತ್ರದ ಶಾಸಕರು ಮತ್ತು ಅಧಿಕಾರಿಗಳೊಂದಿಗೆ ಸಭೆ ನಡೆಸಲಾಗುವುದು ಎಂದು ಅವರು ತಿಳಿಸಿದರು.

ಪರಿಸ್ಥಿತಿ ಸುಧಾರಿಸಿದ ಬಳಿಕ ಅಧಿಕಾರಿಗಳು ಸರ್ವೆ ನಡೆಸಲಿದ್ದಾರೆ. ಅದಾದ ಬಳಿಕ ಅವರು ನಷ್ಟದ ಅಂದಾಜು ವರದಿ ನೀಡಲಿದ್ದಾರೆ ಎಂದು ಪ್ರಶ್ನೆಯೊಂದಕ್ಕೆ ಯಡಿಯೂರಪ್ಪ ಉತ್ತರಿಸಿದರು.
ಇದೇ ವೇಳೆ ಪ್ರವಾಹದಿಂದ ಜಾನುವಾರುಗಳನ್ನು ಕಳೆದುಕೊಂಡು ಕೆಲವು ರೈತರಿಗೆ ಮುಖ್ಯಮಂತ್ರಿ ಚೆಕ್ ವಿತರಿಸಿದರು.

ಸಂಸದ ಬಿ.ವೈ.ರಾಘವೇಂದ್ರ, ಶಾಸಕ ಜ್ಞಾನೇಂದ್ರ, ವಿಧಾನ ಪರಿಷತ್ ಸದಸ್ಯ ಎನ್.ರವಿಕುಮಾರ್ ಮತ್ತಿತರರು ಈ ಸಂದರ್ಭದಲ್ಲಿ ಹಾಜರಿದ್ದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com