ಪ್ರವಾಹದಿಂದ ಕಂಗೆಟ್ಟ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಧಾರ್ಮಿಕ ಸಾಮರಸ್ಯ ಸಂದೇಶ ರವಾನೆ

ಮಳೆ- ಭೀಕರ ಪ್ರವಾಹದಿಂದಾಗಿ ಸದಾ ಕೋಮು ಗಲಭೆಗೆ ಸಾಕ್ಷಿಯಾಗುತ್ತಿದ್ದ ದಕ್ಷಿಣ ಕನ್ನಡ ಜಿಲ್ಲೆ ಬಕ್ರೀದ್ ಸಮಯದಲ್ಲಿ ಎಲ್ಲಾ ಧಾರ್ಮಿಕ ಭಿನ್ನಾಭಿಪ್ರಾಯಗಳನ್ನು ಮರೆತು ಕೋಮು ಸಾಮರಸ್ಯ ಸಂದೇಶ ರವಾನಿಸಿದೆ.
ಪ್ರವಾಹದಿಂದ ಕಂಗೆಟ್ಟ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಧಾರ್ಮಿಕ ಸಾಮರಸ್ಯ ಸಂದೇಶ ರವಾನೆ

ಮಿಟ್ಟಬಾಗಿಲು: ಮಳೆ- ಭೀಕರ ಪ್ರವಾಹದಿಂದಾಗಿ ಸದಾ ಕೋಮು ಗಲಭೆಗೆ ಸಾಕ್ಷಿಯಾಗುತ್ತಿದ್ದ ದಕ್ಷಿಣ ಕನ್ನಡ ಜಿಲ್ಲೆ ಬಕ್ರೀದ್ ಸಮಯದಲ್ಲಿ ಎಲ್ಲಾ ಧಾರ್ಮಿಕ ಭಿನ್ನಾಭಿಪ್ರಾಯಗಳನ್ನು ಮರೆತು ಕೋಮು ಸಾಮರಸ್ಯ ಸಂದೇಶ ರವಾನಿಸಿದೆ.

ಪ್ರವಾಹ ಪರಿಸ್ಥಿತಿಯ ನಂತರ ಹಿಂದೂ ಮತ್ತು ಮುಸ್ಲಿಂ  ಸಮುದಾಯದ ಮಹಿಳೆ ಮತ್ತು ಪುರುಷರು  ಜೊತೆಗೂಡಿ ಸ್ವಚ್ಛತಾ ಕೆಲಸದಲ್ಲಿ ಭಾಗಿಯಾದರು.

ಇಲ್ಲಿನ ಹಲವು ಧಾರ್ಮಿಕ ಸಂಸ್ಥೆಗಳು ಜನರಿಗೆ ಆಶ್ರಯ ತಾಣವಾಗಿದ್ದವು. ಶುಕ್ರವಾರ ಸುರಿದ ಧಾರಾಕಾರ ಮಳೆಯಿಂದಾಗಿ ಅಲ್ಲಿನ ಜನ ಜೀವನ ಅಸ್ಯವ್ಯಸ್ತಗೊಂಡಿತ್ತು,

ಮಟ್ಟಿ ಬಾಗಿಲಿನಲ್ಲಿನ ಮಸೀದಿಯಲ್ಲಿ ಮೊಹಮದ್ ಆರಿಫ್ ಮತ್ತು ಮಹಮದ್  ಶಪೀಕ್ ವಿಶೇಷ ಪ್ರಾರ್ಥನೆ ಸಲ್ಲಿಸಿದರು, ನೇತ್ರಾವತಿ ನದಿಯಲ್ಲಿ ನೀರಿನ ಪ್ರಮಾಣ ಅಧಿಕವಾಗಿದ್ದು, ನದಿಯ ದಡದಲ್ಲಿರುವ ಸುಮಾರು 50 ಮನೆಗಳು ಜಲಾವೃತವಾಗಿದ್ದು, ಅಲ್ಲಿನ ಎಲ್ಲಾ ಕುಟುಂಬಗಳನ್ನು ಮಸೀದಿಗೆ ತೆರಳಿ ಪ್ರಾರ್ಥನೆ ಸಲ್ಲಿಸುತ್ತಿದ್ದವು, ಕ್ಷಣಾರ್ಧದಲ್ಲಿ ಅಲ್ಲಿನ ಸನ್ನಿವೇಶ ಬದಲಾಗಿ ಹೋಯಿತು, ಸಂಭವಿಸಿದ ಪ್ರವಾಹದಿಂದ ಅಲ್ಲಿ ಒಂದು ಗ್ರಾಮ ಇತ್ತು ಎಂಬ ಗುರುತು ಸಿಗದಂತೆ ಪ್ರವಾಹದ ನೀರಿನಲ್ಲಿ ಎಲ್ಲವೂ ಕೊಚ್ಚಿ ಹೋಗಿತ್ತು.

ಆರಿಫ್ ಮತ್ತು ಶಫೀಕ್ ತಮ್ಮ ಮನೆಗಳಿಗೆ ತೆರಳಿ ಕುಟುಂಬಸ್ಥರನ್ನು  ರಕ್ಷಿಸು ಮುಂದಾದರು, ಆದರೆ ಅಲ್ಲಿ ಯಾರೂ ಇರಲಿಲ್ಲ, ಎಲ್ಲಿಗೆ ಹೋದರು ಎಂಬುದು ತಿಳಿಯಲಿಲ್ಲ,. ಮಹಿಳೆಯರು ಮತ್ತು ಮಕ್ಕಳು ಅಲ್ಲಿಯೇ ಸಮೀಪದಲ್ಲಿದ್ದ ದುರ್ಗಾ ಪರಮೇಶ್ವರಿ ದೇವಾಲಯದಲ್ಲಿ ನಿಂತು ರಕ್ಷಿಸುವಂತೆ ಕೂಗುತ್ತಿದ್ದರು ಎಂದು ಅಲ್ಲಿನ ನಿವಾಸಿ ಮೋನಪ್ಪ ಗೌಡ ಹೇಳಿದ್ದಾರೆ.

ಆರಿಫ್ ಮತ್ತು ಶಫೀಕ್ ಕುಟುಂಬಸ್ಥರ ಜೊತೆಗೆ ಬೇರೆ ಸಮುದಾಯದ ಹಲವು ಮಂದಿ ದೇವಾಲಯದಲ್ಲಿ ಆಶ್ರಯ ಪಡೆದಿದ್ದರು,.ದೇವಾಲಯ ಸಮಿತಿ ಜನ ಅಲ್ಲಿ ಉಳಿದುಕೊಳ್ಳಲು ಬೇಕಾದ ಎಲ್ಲಾ ವ್ಯವಸ್ಥೆ ಮಾಡಿತ್ತು,, ಹೊದಿಕೆ ಜೊತೆಗೆ ಊಟದ ವ್ಯವಸ್ಥೆ ಕೂಡ ಮಾಡಿತ್ತು. 

ರಾಜಕೀಯ ನಮ್ಮನ್ನು ವಿಭಜಿಸಿತು, ಆದರೆ ಪ್ರಕೃತಿ ನಮ್ಮನ್ನು ಒಗ್ಗೂಡಿಸಿತು ಎಂದು  ದೇವಾಲಯದಲ್ಲಿ ಕೆಲಸ ಮಾಡುವ ರಾಮಣ್ಣ ಅಭಿಪ್ರಾಯ  ಪಟ್ಟಿದ್ದಾರೆ, ಈ ಘಟನೆ ನಾವೆಲ್ಲರೂ ಸಮಾನ ಎಂಬುದನ್ನು ತಿಳಿಸಿಕೊಟ್ಟಿದೆ, ಹೀಗಾಗೀ ಈ ಭಾರಿಯ ಬಕ್ರೀದ್ ನಮಗೆ ವಿಶೇಷವಾಗಿದೆ ಎಂದು ಶಫೀಕ್ ಅಭಿಪ್ರಾಯ ಪಟ್ಟಿದ್ದಾರೆ. ಎಲ್ಲರೂ ಒಗ್ಗೂಡಿ ಸಂಕಟದಲ್ಲಿದ್ದ ಬೇರೆ ಮಂದಿಗೆ ಸಹಾಯ ಮಾಡಿದ್ದಲ್ಲದೇ ಪ್ರವಾಹದಿಂದ ಹಾಳಾಗಿದ್ದ ಗ್ರಾಮವನ್ನು ಸ್ವಚ್ಛಗೊಳಿಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com