ಪ್ರವಾಹದಲ್ಲಿ ಕೊಚ್ಚಿ ಹೋದ ಬದುಕು: 500 ಸೇತುವೆ,16.4 ಸಾವಿರ ಕಿ.ಮೀ ರಸ್ತೆ ನಾಶ!

ಉತ್ತರ ಕರ್ನಾಟಕದಲ್ಲಿ ಸುರಿದ ಭಾರೀ ಮಳೆ ಹಾಗೂ ಪ್ರವಾಹದಿಂದಾಗಿ ಹಲವು ಪ್ರದೇಶಗಳಿಗೆ ಹಾನಿ ಉಂಟಾಗಿದೆ, ಪ್ರವಾಹದಿಂದ ಉಂಟಾಗಿರುವ ಸಮಸ್ಯೆಯನ್ನು ಬಗೆಹರಿಸುವುದೇ ಮುಖ್ಯಮಂತ್ರಿ ಯಡಿಯೂರಪ್ಪ ಅವರ ಮುಂದಿನ ದೊಡ್ಡ ಸವಾಲಾಗಿದೆ.
ಬೆಳಗಾವಿಯಲ್ಲಿ ಕೊಚ್ಚಿ ಹೋದ ಸೇತುವೆ
ಬೆಳಗಾವಿಯಲ್ಲಿ ಕೊಚ್ಚಿ ಹೋದ ಸೇತುವೆ

ಬೆಂಗಳೂರು: ಉತ್ತರ ಕರ್ನಾಟಕದಲ್ಲಿ ಸುರಿದ ಭಾರೀ ಮಳೆ ಹಾಗೂ ಪ್ರವಾಹದಿಂದಾಗಿ ಹಲವು ಪ್ರದೇಶಗಳಿಗೆ ಹಾನಿ ಉಂಟಾಗಿದೆ, ಪ್ರವಾಹದಿಂದ ಉಂಟಾಗಿರುವ ಸಮಸ್ಯೆಯನ್ನು ಬಗೆಹರಿಸುವುದೇ ಮುಖ್ಯಮಂತ್ರಿ ಯಡಿಯೂರಪ್ಪ ಅವರ ಮುಂದಿನ ದೊಡ್ಡ ಸವಾಲಾಗಿದೆ.

ಕಳೆದ ಒಂದು ವಾರದಿಂದ ಸುರಿದ ಭಾರಿ ಮಳೆ ಮತ್ತು ಪ್ರವಾಹಕ್ಕೆ ಹಲವು ರಸ್ತೆಗಳು ಹಾನಿಗೊಳಗಾಗಿವೆ, ರಾಜ್ಯದ 30 ಜಿಲ್ಲೆಗಳಲ್ಲಿ 21 ಸೇತುವೆಗಳು ಹಾನಿಗೊಳಗಾಗಿವೆ,  ಸೇತುವೆಗಳು ಹಾನಿಗೊಳಗಾದ ಪರಿಣಾಮ ಪಟ್ಟಣ ಮತ್ತು ಹಲವು ಗ್ರಾಮಗಳ ಸಂಪರ್ಕ ಸಂಪೂರ್ಣ ಕಡಿದು ಹೋಗಿದೆ.

ಎಷ್ಟು ಪ್ರಮಾಣದ ರಸ್ತೆಗಳು ಹಾನಿಗೊಳಗಾಗಿವೆ ಎಂಬ ಬಗ್ಗೆ ಈಗಲೇ ಪೂರ್ಣ ಪ್ರಮಾಣದಲ್ಲಿ ಅಂದಾಜು ಹಾಕಲು ಸಾಧ್ಯವಿಲ್ಲ, ಪ್ರಾಥಮಿಕ ಸರ್ವೆಯ ಪ್ರಕಾರ, 16,400 ಕಿಮೀ ಉದ್ದದ ರಸ್ತೆಗಳು ನಾಶವಾಗಿವೆ, 21 ಜಿಲ್ಲೆಗಳಲ್ಲಿ 2,400 ಕಿಮೀ ಉದ್ದರ ರಸ್ತೆಗಳು ಸಂಪೂರ್ಣ ಹಾಳಾಗಿವೆ, ಇವುಗಳನ್ನು ಹೊಸದಾಗಿ  ನಿರ್ಮಾಣ ಮಾಡಬೇಕಾಗಿದೆ.

14 ಸಾವಿರ ಕಿಮೀ ರಸ್ತೆಗಳು ಹಲವು ರೀತಿಯಲ್ಲಿ  ಹಾನಿಗೊಳಗಾಗಿವೆ,. ಇದನ್ನು ಹೊರತು ಪಡಿಸಿ, 500 ಸೇತುವೆಗಳು ಹಾಳಾಗಿವೆ, ಸುಮಾರು 253 ಸೇತುವೆಗಳ ಮೇಲೆ ವಾಹನಗಳು ಓಡಾಡಲು ಸಾದ್ಯವಿಲ್ಲ,  ಹೀಗಾಗಿ ಹಲವು  ಗ್ರಾಮಗಳ ಸಂಪರ್ಕ ಕಡಿತವಾಗಿವೆ. ಹೀಗಾಗಿ ಸ್ಥಳೀಯರು 20ರಿಂದ 50 ಕಿಮೀ ಹೆಚ್ಚಿನ ದೂರ ಕ್ರಮಿಸಬೇಕಾಗಿದೆ. ಪುಡಿ ಮಾಡಿದ ಕಲ್ಲಿನ ಮಿಶ್ರಣವನ್ನು ಹಾಕಿ ಸಂಪರ್ಕ ಕಲ್ಪಿಸಲು ನಮ್ಮ ಅಧಿಕಾರಿಗಳು ಪ್ರಯತ್ನಿಸುತ್ತಿದ್ದಾರೆ ಎಂದು ಲೋಕೋಪಯೋಗಿ ಇಲಾಖೆ ಕಾರ್ಯದರ್ಶಿ  ಗುರು ಪ್ರಸಾದ್ ಹೇಳಿದ್ದಾರೆ.

ಮುರಿದ ಸೇತುವೆಗಳ ಮೇಲೆ ಮರಳಿನ ಬ್ಯಾಗ್ ಹಾಕಲಾಗಿದೆ, ಸದ್ಯ ಎಲ್ಲಾ ರೀತಿಯ ಕೆಲಸಗಳಿಗಾಗಿ ಇಲಾಖೆಗೆ 1,500 ಕೋಟಿ ಅವಶ್ಯಕತೆಯಿದೆ,  ಹಲವು ಪ್ರದೇಶಗಳಲ್ಲಿ ನೀರಿನ ಪ್ರಮಾಣ ಇನ್ನೂ ಕಡಿಮೆಯಾಗಿಲ್ಲ, ಅಂತಹ ಪ್ರದೇಶಗಳಲ್ಲಿ ಆಗಿರುವ ಹಾನಿಯನ್ನು ನಾವು ಗುರುತಿಸಲು ಸಾಧ್ಯವಾಗುತ್ತಿಲ್ಲ,  ಇನ್ನು ಕೆಲವೇ ದಿನಗಳಲ್ಲಿ ಎಷ್ಟು ಪ್ರಮಾಣದಲ್ಲಿ ಹಾನಿಯಾಗಿದೆ ಎಂಬುದನ್ನು ಮಾಹಿತಿ ನೀಡಲಾಗುತ್ತದೆ, ಮೂಲಭೂತ ಸೌಕರ್ಯಗಳನ್ನು ಮತ್ತೆ ಸರಿಪಡಿಸಲು ಬಹುದೊಡ್ಡ ಪ್ರಮಾಣದ ಹಣ ಬೇಕಾಗುತ್ತದೆ ಎಂದು ಗುರುಪ್ರಸಾದ್ ತಿಳಿಸಿದ್ದಾರೆ.

ಈ ವರ್ಷದಲ್ಲಿ ಸಂಭವಿಸಿದ ಅತಿ ದೊಡ್ಡ ಪ್ರವಾಹ ಇದಾಗಿದೆ, ಉತ್ತರ ಕರ್ನಾಟಕ ಹಾಗೂ ಕರಾವಳಿ ಮತ್ತು ಮಲೆನಾಡಿನಲ್ಲಿ  ಅಪಾರ ಪ್ರಮಾಣದ ಹಾನಿ ಉಂಟಾಗಿದೆ. ಮಂಗಳವಾರದ ಹೊತ್ತಿಗೆ 54ಮಂದಿ ಪ್ರವಾಹಕ್ಕೆ ಬಲಿಯಾಗಿದ್ದು, 15 ಮಂದಿ ಇನ್ನೂ ನಾಪತ್ತೆಯಾಗಿದ್ದಾರೆ, 100 ತಾಲೂಕುಗಳ 6.77 ಲಕ್ಷ ಮಂದಿಯನ್ನು ಸ್ಥಳಾಂತರಿಸಲಾಗಿದೆ, ವಿಪತ್ತು ನಿರ್ವಹಣಾ ದಳದ ಪ್ರಕಾರ 2,217 ಗ್ರಾಮಗಳು ಪ್ರವಾಹಕ್ಕೊಳಗಾಗಿವೆ,

ಖಾನಾಪುರದಲ್ಲಿ ಆರು ತಿಂಗಳ ಹಿಂದೆ 4.5 ಕೋಟಿ ರು ವೆಚ್ಚದಲ್ಲಿ ನಿರ್ಮಾಣ ಮಾಡಿದ್ದ ಸೇತುವೆ ಪ್ರವಾಹಕ್ಕೆ ಕೊಚ್ಚಿ ಹೋಗಿದೆ. ಹೀಗಾಗಿ ಕಾಮಗಾರಿಗಳ ಗುಣಮಟ್ಟದ ಬಗ್ಗೆ ಪ್ರಶ್ನೆ ಎದುರಾಗಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com