ಪ್ರವಾಹ ಪೀಡಿತ ಉತ್ತರ ಕರ್ನಾಟಕಕ್ಕೆ ಕೋಲಾರದಿಂದ ಹಾಲು ಪೂರೈಕೆ

 ಪ್ರವಾಹ ಪೀಡಿತ ಪ್ರದೇಶಗಳ ನೆರೆ ಸಂತ್ರಸ್ತರಿಗೆ ಪೌಷ್ಟಿಕಾಂಶಯುಕ್ತ ಆಹಾರಗಳು ಬೇಕಾಗಿದ್ದು, ಈ ನಿಟ್ಟಿನಲ್ಲಿ , ಕರ್ನಾಟಕ ಹಾಲು ಒಕ್ಕೂಟವು ನೆರವಿನ ಹಸ್ತ ಚಾಚಲು ಮುಂದಾಗಿದೆ.
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ

ಬೆಂಗಳೂರು: ಪ್ರವಾಹ ಪೀಡಿತ ಪ್ರದೇಶಗಳ ನೆರೆ ಸಂತ್ರಸ್ತರಿಗೆ ಪೌಷ್ಟಿಕಾಂಶಯುಕ್ತ ಆಹಾರಗಳು ಬೇಕಾಗಿದ್ದು, ಈ ನಿಟ್ಟಿನಲ್ಲಿ  ಕರ್ನಾಟಕ ಹಾಲು ಒಕ್ಕೂಟವು ನೆರವಿನ ಹಸ್ತ ಚಾಚಲು ಮುಂದಾಗಿದೆ.

ಕೋಲಾರ ಮತ್ತು ದಕ್ಷಿಣ ಕನ್ನಡ ಹಾಲು ಒಕ್ಕೂಟಗಳು ಸುಮಾರು 8ಸಾವಿರ ಲೀಟರ್ ಗುಡ್ ಲೈಫ್ ಹಾಲನ್ನು ಉತ್ತರ ಕರ್ನಾಟಕದ ನೆರೆ ಪೀಡಿತರಿಗೆ ಪೂರೈಸುತ್ತಿದೆ.

ಕರ್ನಾಟಕದಲ್ಲಿ ಒಟ್ಟು 14 ಹಾಲು ಒಕ್ಕೂಟಗಳಿದ್ದು, ಐದು ಉತ್ತರ ಕರ್ನಾಟಕದಲ್ಲಿವೆ.ಉತ್ತರ ಕರ್ನಾಟಕದಲ್ಲಿನ ಹಾಲು ಒಕ್ಕೂಟವು ಆರುವರೆ ಲಕ್ಷ ಲೀಟರ್ ಹಾಲು ಉತ್ಪಾದಿಸುತ್ತಿದ್ದು, ಸದ್ಯಕ್ಕೆ 70-80 ಸಾವಿರ ಲೀಟರ್ ಗೆ ಉತ್ಪಾದನೆ ಕುಸಿದಿದೆ.

ಬೆಳಗಾವಿ, ವಿಜಯಪುರ, ಧಾರವಾಡ, ಬಳ್ಳಾರಿ ಹಾಗೂ ಕಲಬುರಗಿ ಜಿಲ್ಲೆಗಳಿಗೂ ಪ್ರವಾಹದ ಬಿಸಿ ತಟ್ಟಿದೆ. ಹಾಲನ್ನು ಹೊರತು ಪಡಿಸಿ ಕೆಎಂಎಫ್ ಜಾನುವಾರಗಳಿಗೆ 50 ಸಾವಿ ಕೆಜಿ ಮೇವು ಪೂರೈಸಿದೆ. ಇನ್ನೂ 25 ಸಾವಿರ ಕೆಜಿ ಪಶು ಆಹಾರ ಪೂರೈಸಬೇಕಿದೆ. ಸದ್ಯ ಜಾನುವಾರುಗಳನ್ನು ಪರಿಹಾರ ಕೇಂದ್ರಗಳಿಗೆ ಕಳುಹಿಸಲಾಗಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com