ಕರ್ನಾಟಕ ಪ್ರವಾಹ: ಸಾವಿನ ಸಂಖ್ಯೆ 61ಕ್ಕೇರಿಕೆ: ಶಿಬಿರ ಸೇರಿದ 3ಲಕ್ಷ ನಿರಾಶ್ರಿತರು 

ಒಂದು ವಾರ ಕಳೆದರೂ ಕರ್ನಾಟಕದಲ್ಲಿ ಮಳೆಯ ಅಬ್ಬರ ನಿಂತಿಲ್ಲ. ಉತ್ತರ ಕರ್ನಾಟಕ ಭಾಗದ ಬೆಳಗಾವಿ, ಬಾಗಲಕೋಟೆ, ಚಿಕ್ಕೋಡಿಯಲ್ಲಿ ಪ್ರವಾಹ ಮುಂದುವರೆದಿದೆ. 58 ಇದ್ದ ಸಾವಿನ ಸಂಖ್ಯೆ 61ಕ್ಕೇರಿದೆ...
ಕೊಡಗು ಪ್ರವಾಹ
ಕೊಡಗು ಪ್ರವಾಹ

ಬೆಂಗಳೂರು: ಒಂದು ವಾರ ಕಳೆದರೂ ಕರ್ನಾಟಕದಲ್ಲಿ ಮಳೆಯ ಅಬ್ಬರ ನಿಂತಿಲ್ಲ. ಉತ್ತರ ಕರ್ನಾಟಕ ಭಾಗದ ಬೆಳಗಾವಿ, ಬಾಗಲಕೋಟೆ, ಚಿಕ್ಕೋಡಿಯಲ್ಲಿ ಪ್ರವಾಹ ಮುಂದುವರೆದಿದೆ. 58 ಇದ್ದ ಸಾವಿನ ಸಂಖ್ಯೆ 61ಕ್ಕೇರಿದೆ.

ಪ್ರವಾಹ ಪೀಡಿತ 22 ಜಿಲ್ಲೆಗಳ ಪೈಕಿ ಬೆಳಗಾವಿಯೊಂದರಲ್ಲೇ 15 ಮಂದಿ ಸಾವನ್ನಪ್ಪಿದ್ದಾರೆ,  ಅಂಕಿ ಅಂಶಗಳ ಪ್ರಕಾರ,  ಇನ್ನೂ 14 ಮಂದಿ ಕಾಣೆಯಾಗಿದ್ದಾರೆ, ಇದುವರೆಗೂ ರಕ್ಷಣಾ ತಂಡ ಸುಮಾರು 7 ಲಕ್ಷ ಮಂದಿಯನ್ನು ಸ್ಥಳಾಂತರಿಸಲಾಗಿದೆ ಎಂದು ಮಾಹಿತಿ ತಿಳಿದು ಬಂದಿದೆ.

ಸುಮಾರು 859 ಜಾನುವಾರುಗಳು ಬಲಿಯಾಗಿವೆ. ಮುಂದಿನ 24 ಗಂಟೆಗಳಲ್ಲಿ ಕರ್ನಾಟಕದ ಹಲವು ಭಾಗಗಳಲ್ಲಿ ಭಾರೀ ಪ್ರಮಾಣದ ಮಳೆಯಾಗುವ ಸಾಧ್ಯತೆಯಿದೆ ಎಂದು ರಾಜ್ಯ ಹವಾಮಾನ ಇಲಾಖೆ ತಿಳಿಸಿದೆ.

ಇತ್ತ ಮಲೆನಾಡಿನಲ್ಲೂ ನದಿಗಳ ನೀರಿನ ಮಟ್ಟ ಹೆಚ್ಚುತ್ತಿದ್ದು, ಉತ್ತರ ಕನ್ನಡ ಜಿಲ್ಲೆ, ಶಿವಮೊಗ್ಗ, ಚಿಕ್ಕಮಗಳೂರು, ಹಾಸನ, ಕರಾವಳಿ ಜಿಲ್ಲೆಗಳಲ್ಲಿ ಪ್ರವಾಹದ ಭೀತಿ ಹೆಚ್ಚಿದೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com