ಸಂಸ್ಕೃತ ವಿದ್ವಾನ್ ಡಾ. ಜನಾರ್ದನ ಹೆಗಡೆಗೆ ರಾಷ್ಟ್ರಪತಿ ಪುರಸ್ಕಾರ

ಕೇಂದ್ರದ ಮಾನವ ಸಂಸಾದನ ಮಂತ್ರಾಲಯವು ಪ್ರತಿವರ್ಷ ಭಾರತೀಯ ಭಾಷೆಗಳಲ್ಲಿ ಗಣನೀಯ ಸೇವೆ ಸಲ್ಲಿಸಿದವರಿಗೆ ರಾಷ್ಟ್ರಪತಿ ಪುರಸ್ಕಾರ ನೀಡುತ್ತಿದ್ದು, 2019ನೇ ಸಾಲಿನ ಪುರಸ್ಕಾರಕ್ಕೆ ಸಂಸ್ಕೃತ ವಿದ್ವಾಂಸ ಡಾ. ಜನಾರ್ದನ ಹೆಗಡೆ ಭಾಜನರಾಗಿದ್ದಾರೆ. 
ಡಾ. ಜನಾರ್ದನ ಹೆಗಡೆ
ಡಾ. ಜನಾರ್ದನ ಹೆಗಡೆ

ಬೆಂಗಳೂರು: ಕೇಂದ್ರದ ಮಾನವ ಸಂಸಾದನ ಮಂತ್ರಾಲಯವು ಪ್ರತಿವರ್ಷ ಭಾರತೀಯ ಭಾಷೆಗಳಲ್ಲಿ ಗಣನೀಯ ಸೇವೆ ಸಲ್ಲಿಸಿದವರಿಗೆ ರಾಷ್ಟ್ರಪತಿ ಪುರಸ್ಕಾರ ನೀಡುತ್ತಿದ್ದು, 2019ನೇ ಸಾಲಿನ ಪುರಸ್ಕಾರಕ್ಕೆ ಸಂಸ್ಕೃತ ವಿದ್ವಾಂಸ ಡಾ. ಜನಾರ್ದನ ಹೆಗಡೆ ಭಾಜನರಾಗಿದ್ದಾರೆ.

ಸಂಸ್ಕೃತ ಭಾಷೆಗಾಗಿ ಅವರು ಸಲ್ಲಿಸುತ್ತಿರುವ ನಿಸ್ವಾರ್ಥ ಸೇವೆಯನ್ನು ಗಮನಿಸಿ ಈ ಪ್ರಶಸ್ತಿಗೆ ಅವರನ್ನು ಆಯ್ಕೆ ಮಾಡಲಾಗಿದೆ. ಈ ಪ್ರಶಸ್ತಿಯು ರಾಷ್ಟ್ರಪತಿ ಪ್ರಮಾಣ ಪತ್ರ ಮತ್ತು 5 ಲಕ್ಷ ರೂ ನಗದು ಪುರಸ್ಕಾರ ಒಳಗೊಂಡಿದೆ. ಸಂಸ್ಕೃತ ಕ್ಷೇತ್ರದಲ್ಲಿ ಗಣನೀಯ ಸೇವೆ ಸಲ್ಲಿಸಿದ ಹಿರಿಯ ಸಂಸ್ಕೃತ ವಿದ್ವಾಂಸರಿಗೆ ಈ ಪ್ರಶಸ್ತಿಯನ್ನು ನೀಡಲಾಗುತ್ತದೆ. ಸಂಸ್ಕೃತ ಜಗತ್ತಿನ ಅನೇಕ ಗಣ್ಯರು ಡಾ. ಜನಾರ್ದನ ಹೆಗಡೆ ಅವರಿಗೆ ಈ ಪ್ರಶಸ್ತಿ ಲಭಿಸಿರುವುದಕ್ಕೆ ಹರ್ಷ ವ್ಯಕ್ತಪಡಿಸಿ ಅಭಿನಂದಿಸಿದ್ದಾರೆ.

ಜನಾರ್ದನ ಹೆಗಡೆ ಅವರು “ಸಂಭಾಷಣ ಸಂದೇಶಃ” ಎಂಬ ಸಂಸ್ಕೃತ ಮಾಸಪತ್ರಿಕೆಯ ಸಂಸ್ಥಾಪಕ ಸಂಪಾದಕರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com