ಬೆಂಗಳೂರು: ಬ್ಲೂ ಹೆವನ್ ಬಾರ್ ಮೇಲೆ ಸಿಸಿಬಿ ದಾಳಿ, 66 ಯುವತಿಯರ ರಕ್ಷಣೆ

ಹೊರ ರಾಜ್ಯಗಳಿಂದ ಕೆಲಸ ಅರಸಿ ಬಂದ ಯುವತಿಯರನ್ನು ಬಾರ್ ಗರ್ಲ್ ಗಳನ್ನಾಗಿ ಮಾಡಿ ಅಶ್ಲೀಲ ನೃತ್ಯ ಮಾಡಿಸುತ್ತಿದ್ದ ಉಪ್ಪಾರಪೇಟೆಯ ಬ್ಲೂ ಹೆವನ್ ಬಾರ್ ಮತ್ತು ರೆಸ್ಟೋರೆಂಟ್‍ ಮೇಲೆ...
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ಬೆಂಗಳೂರು: ಹೊರ ರಾಜ್ಯಗಳಿಂದ ಕೆಲಸ ಅರಸಿ ಬಂದ ಯುವತಿಯರನ್ನು ಬಾರ್ ಗರ್ಲ್ ಗಳನ್ನಾಗಿ ಮಾಡಿ ಅಶ್ಲೀಲ ನೃತ್ಯ ಮಾಡಿಸುತ್ತಿದ್ದ ಉಪ್ಪಾರಪೇಟೆಯ ಬ್ಲೂ ಹೆವನ್ ಬಾರ್ ಮತ್ತು ರೆಸ್ಟೋರೆಂಟ್‍ ಮೇಲೆ ಸಿಸಿಬಿ ಪೊಲೀಸರು ದಾಳಿ ನಡೆಸಿದ್ದು, 66 ಯುವತಿಯರನ್ನು ರಕ್ಷಿಸಿದ್ದಾರೆ.

ಬಾರ್ ನಲ್ಲಿ ಕೆಲಸ ಮಾಡುತ್ತಿದ್ದ 18 ಜನ ಸೇರಿ ಒಟ್ಟು 64 ಆರೋಪಿಗಳನ್ನು ಬಂಧಿಸಿದ ಸಿಸಿಬಿ ಅಧಿಕಾರಿಗಳು, 65,770 ನಗದು , ಮ್ಯೂಸಿಕ್  ಸೆಟ್, ಸ್ವೈಪಿಂಗ್ ಮೆಷಿನ್ ವಶಪಡಿಸಿಕೊಂಡಿದ್ದಾರೆ.

ಯುವತಿಯರಿಂದ ಅಶ್ಲೀಲ ನೃತ್ಯ ಮಾಡಿಸಿ ಗಿರಾಕಿಗಳಿಗೆ ಅವರ ಮೇಲೆ ಹಣ ಎಸೆಯುವಂತೆ ಪ್ರಚೋದಿಸಿ ಸಂಪಾದನೆ ಮಾಡಲಾಗುತ್ತಿದೆ ಎಂದು ತಿಳಿದು ಬಂದ ಖಚಿತ ಮಾಹಿತಿ ಮೇರೆಗೆ ಸಿಸಿಬಿ ಅಧಿಕಾರಿಗಳು ಕಾರ್ಯಚರಣೆ ಕೈಗೊಂಡಿದ್ದರು.

ಶಿವಮೊಗ್ಗ ಮೂಲದ ಧರ್ಮ(41), ಕಲ್ಲೇಶ್ (34), ಶ್ರೀಕಾಂತ್ (28),ನಾಗರಾಜ್ (46) ಮಂಡ್ಯ ಮೂಲದ ನಂಜೇಶ್ (40) ರಂಗಸ್ವಾಮಿ (44) ಹಾಗೂ ಚೆಲುವರಾಜು (32) ಒಡಿಶಾ ಮೂಲದ ಸುಬಾನ್ (23) ಸೇರಿ ಒಟ್ಟು 18 ಜನರನ್ನು ಬಂಧಿಸಲಾಗಿದೆ.

ದಾಳಿ ವೇಳೆಯಲ್ಲಿ 46 ಗಿರಾಕಿ ಆರೋಪಿಗಳನ್ನು ವಶಕ್ಕೆ ಪಡೆದಿದ್ದು, ಒಟ್ಟು 66 ಬೇರೆ ಬೇರೆ ರಾಜ್ಯದ ಯುವತಿಯರನ್ನು ರಕ್ಷಿಸಲಾಗಿದೆ ಎಂದು ಅಪರಾಧ ವಿಭಾಗದ ಜಂಟಿ ಪೊಲೀಸ್ ಆಯುಕ್ತ ಸಂದೀಪ್ ಪಾಟೀಲ್ ತಿಳಿಸಿದ್ದಾರೆ.

ಬ್ಲೂ-ಹೆವನ್ ಬಾರ್ ಮತ್ತು ರೆಸ್ಟೋರೆಂಟ್‍ ಮಾಲೀಕರಾದ ದಿನೇಶ್ ಶೆಟ್ಟಿ, ಮಹೇಶ್ ಮತ್ತು ಕಿರಣ್ ಎಂಬುವವರು ತಲೆಮರೆಸಿಕೊಂಡಿದ್ದು, ಶೋಧ ಕಾರ್ಯ ಮುಂದುವರಿದಿದೆ. 
ಪ್ರಕರಣಕ್ಕೆ ಸಂಬಂಧಿಸಿದಂತೆ ಉಪ್ಪಾರಪೇಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com