ವರ್ಗಾವಣೆ ಪ್ರಶ್ನಿಸಿ ನ್ಯಾಯಮಂಡಳಿಗೆ ಸಲ್ಲಿಸಿದ್ದ ಅರ್ಜಿ: ಹಿಂಪಡೆದ ಮಾಜಿ ಆಯುಕ್ತ ಅಲೋಕ್ ಕುಮಾರ್ 

ತಮ್ಮ ವರ್ಗಾವಣೆ ಆದೇಶವನ್ನು ಪ್ರಶ್ನಿಸಿ ಕೇಂದ್ರ ಆಡಳಿತಾತ್ಮಕ ನ್ಯಾಯಮಂಡಳಿ(CAT)ಯ ಬೆಂಗಳೂರು ವಿಭಾಗಕ್ಕೆ ಸಲ್ಲಿಸಿದ್ದ ಅರ್ಜಿಯನ್ನು ಬೆಂಗಳೂರು ನಗರ ಪೊಲೀಸ್ ಮಾಜಿ ಆಯುಕ್ತ ಅಲೋಕ್ ಕುಮಾರ್ ಶುಕ್ರವಾರ ಹಿಂಪಡೆದಿದ್ದಾರೆ. 
ಮಾಜಿ ಆಯುಕ್ತ ಅಲೋಕ್ ಕುಮಾರ್
ಮಾಜಿ ಆಯುಕ್ತ ಅಲೋಕ್ ಕುಮಾರ್

ಬೆಂಗಳೂರು: ತಮ್ಮ ವರ್ಗಾವಣೆ ಆದೇಶವನ್ನು ಪ್ರಶ್ನಿಸಿ ಕೇಂದ್ರ ಆಡಳಿತಾತ್ಮಕ ನ್ಯಾಯಮಂಡಳಿ(CAT)ಯ ಬೆಂಗಳೂರು ವಿಭಾಗಕ್ಕೆ ಸಲ್ಲಿಸಿದ್ದ ಅರ್ಜಿಯನ್ನು ಬೆಂಗಳೂರು ನಗರ ಪೊಲೀಸ್ ಮಾಜಿ ಆಯುಕ್ತ ಅಲೋಕ್ ಕುಮಾರ್ ಶುಕ್ರವಾರ ಹಿಂಪಡೆದಿದ್ದಾರೆ.


ಬೆಂಗಳೂರು ನಗರ ಪೊಲೀಸ್ ಆಯುಕ್ತರಾಗಿ ನೇಮಕಗೊಂಡು 50 ದಿನಗಳಾಗುವ ಮುನ್ನವೇ ತಮ್ಮನ್ನು ಏಕಾಏಕಿ ಹುದ್ದೆಯಿಂದ ವರ್ಗಾವಣೆ ಮಾಡಿದ್ದನ್ನು ಪ್ರಶ್ನಿಸಿ ಅಲೋಕ್ ಕುಮಾರ್ ಕಳೆದ 2ರಂದು ನ್ಯಾಯಮಂಡಳಿಗೆ ಅರ್ಜಿ ಸಲ್ಲಿಸಿದ್ದರು.
ಈ ವಿಷಯವನ್ನು ಖಚಿತಪಡಿಸಿದ ಇಂದಿನ ನಗರ ಪೊಲೀಸ್ ಆಯುಕ್ತ ಭಾಸ್ಕರ್ ರಾವ್, ಅಲೋಕ್ ಕುಮಾರ್ ಅರ್ಜಿಯನ್ನು ಹಿಂಪಡೆದಿದ್ದಾರೆ. ಈ ಬಗ್ಗೆ ನಾನು ಹೆಚ್ಚು ಏನೂ ಮಾತನಾಡುವುದಿಲ್ಲ ಎಂದಿದ್ದಾರೆ.


ನ್ಯಾಯಾಂಗ ಸದಸ್ಯ ಕೆ ಬಿ ಸುರೇಶ್ ನೇತೃತ್ವದ ನ್ಯಾಯಪೀಠ, ಗೃಹ ಇಲಾಖೆ ಹೆಚ್ಚುವರಿ ಕಾರ್ಯದರ್ಶಿ, ಡಿಪಿಎಆರ್ ಇಲಾಖೆ ಮತ್ತು ರಾಜ್ಯ ಪೊಲೀಸ್ ಮಹಾ ನಿರ್ದೇಶಕರು, ನಗರ ಪೊಲೀಸ್ ಆಯುಕ್ತರು ಮತ್ತು ಯೂನಿಯನ್ ಆಫ್ ಇಂಡಿಯಾಗೆ ನೊಟೀಸ್ ಜಾರಿಗೊಳಿಸುವಂತೆ ಆದೇಶ ನೀಡಿದೆ.


ತಮ್ಮ ವರ್ಗಾವಣೆ ಅಮಾನ್ಯ, ಅನೂರ್ಜಿತ ಮತ್ತು ನ್ಯಾಯಸಮ್ಮತವಲ್ಲ, ಪೊಲೀಸ್ ಕಾಯ್ದೆ 1963 ಮತ್ತು ಭಾರತೀಯ ಪೊಲೀಸ್ ಸೇವೆ(ಕ್ಯಾಡರ್) ನಿಯಮ 1954ಕ್ಕೆ ವಿರುದ್ಧವಾಗಿ ಒಂದು ಹುದ್ದೆಯಲ್ಲಿ ಒಂದು ವರ್ಷ ಅವಧಿ ಪೂರೈಸುವ ಮುನ್ನವೇ ತಮ್ಮನ್ನು ವರ್ಗಾವಣೆ ಮಾಡಿದ್ದಾರೆ ಎಂದು ಆರೋಪಿಸಿ ಅಲೋಕ್ ಕುಮಾರ್ ಅರ್ಜಿ ಸಲ್ಲಿಸಿದ್ದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com