ಬೆಂಗಳೂರಿನಲ್ಲಿ ಹೈ ಆಲರ್ಟ್: ಎಲ್ಲೆಡೆ ಕಟ್ಟೆಚ್ಚರಕ್ಕೆ  ಪೊಲೀಸ್ ಕಮೀಷನರ್ ಆದೇಶ!

ರಾಜಧಾನಿ ಬೆಂಗಳೂರಿನಲ್ಲಿ ಹೈ ಆಲರ್ಟ್ ಘೋಷಿಸಿ ಪೊಲೀಸ್ ಕಮೀಷನರ್ ಭಾಸ್ಕರ್ ರಾವ್ ಇಂದು ಆದೇಶ ಹೊರಡಿಸಿದ್ದಾರೆ.  ಪೊಲೀಸ್ ಅಧಿಕಾರಿಗಳು ಸನ್ನದ ರೀತಿಯಲ್ಲಿ ಇರುವಂತೆ  ಅವರು ದಿಢೀರನೇ ಹೈ ಆಲರ್ಟ್ ಘೋಷಿಸಿದ್ದು, ಉಗ್ರರ ಭೀತಿಯ ಅನುಮಾನ ಕಾಡುತ್ತಿದೆ. 
ಬೆಂಗಳೂರಿನಲ್ಲಿ ಹೈ ಆಲರ್ಟ್: ಎಲ್ಲೆಡೆ ಕಟ್ಟೆಚ್ಚರಕ್ಕೆ  ಪೊಲೀಸ್ ಕಮೀಷನರ್ ಆದೇಶ!

ಬೆಂಗಳೂರು: ರಾಜಧಾನಿ ಬೆಂಗಳೂರಿನಲ್ಲಿ ಹೈ ಆಲರ್ಟ್ ಘೋಷಿಸಿ ಪೊಲೀಸ್ ಕಮೀಷನರ್ ಭಾಸ್ಕರ್ ರಾವ್ ಇಂದು ಆದೇಶ ಹೊರಡಿಸಿದ್ದಾರೆ.  ಪೊಲೀಸ್ ಅಧಿಕಾರಿಗಳು ಸನ್ನದ ರೀತಿಯಲ್ಲಿ ಇರುವಂತೆ  ಅವರು ದಿಢೀರನೇ ಹೈ ಆಲರ್ಟ್ ಘೋಷಿಸಿದ್ದು, ಉಗ್ರರ ಭೀತಿಯ ಅನುಮಾನ ಕಾಡುತ್ತಿದೆ. 

 ಆಡಳಿತ ಶಕ್ತಿ ಕೇಂದ್ರ ವಿಧಾನಸೌಧ, ವಿಕಾಸಸೌಧ, ಹೈಕೋರ್ಟ್,  ಎಲ್ಲಾ ರೈಲು ನಿಲ್ದಾಣಗಳು, ಬೆಂಗಳೂರು ಮೆಟ್ರೋ, ಬಿಎಂಟಿಸಿ, ಕೆಎಸ್ ಆರ್ ಟಿಸಿ ಬಸ್ ನಿಲ್ದಾಣ,  ಪ್ರತಿಷ್ಠಿತ ಶಾಲೆಗಳು, ಮಾಲ್ ಗಳು,  ಪಂಚತಾರಾ ಹೋಟೆಲ್ ಗಳು  ಹಾಗೂ ಮಾರ್ಕೆಟ್ ಗಳಲ್ಲಿ ಕಟ್ಟೆಚ್ಚರ ವಹಿಸುವಂತೆ ಸೂಚಿಸಿದ್ದಾರೆ.

ಅನುಮಾನಾಸ್ಪದ ವ್ಯಕ್ತಿಗಳು ಹಾಗೂ ವಾಹನಗಳನ್ನು  ಪರಿಶೀಲಿಸುವಂತೆ, ಸೂಕ್ಷ್ಮ ಪ್ರದೇಶಗಳಲ್ಲಿ ಸಿಸಿಟಿವಿ  ಅಳವಡಿಸುವಂತೆ, ಮುಂದಿನ ಆದೇಶದವರೆಗೂ  ಉನ್ನತಾಧಿಕಾರಿಗಳು ನಿಗಾ ವಹಿಸುವಂತೆ  ನಿರ್ದೇಶನ ನೀಡಿದ್ದಾರೆ. ಪ್ರಮುಖ ಸ್ಥಳಗಳಲ್ಲಿ ಎಲ್ಲಾ ಅಧಿಕಾರಿಗಳು  ನಿಯಮಿತವಾಗಿ ಗಸ್ತು ತಿರುಗುವಂತೆಯೂ ತಿಳಿಸಿದ್ದಾರೆ.

ಪಿಜಿ ಹಾಸ್ಟೇಲ್ ಗಳು, ಅಪಾರ್ಟ್ ಮೆಂಟ್ ಗಳು, ಧಾರ್ಮಿಕ ಸ್ಥಳಗಳ ಬಳಿಯ ವಸತಿ ಗೃಹಗಳನ್ನು ಪರಿಶೀಲಿಸುವಂತೆ ಭಾಸ್ಕರ ರಾವ್  ಆದೇಶ ಹೊರಡಿಸಿದ್ದಾರೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com