ಕೇರಳ, ಕರ್ನಾಟಕ ಪ್ರವಾಹ: ಸಂತ್ರಸ್ಥರ ನೋವಿಗೆ ಸ್ಪಂದಿಸಿ ತಮಿಳು ನಟ ಸೂರ್ಯ ಸಹೋದರರಿಂದ ದೇಣಿಗೆ

ಕರ್ನಾಟಕ ಮತ್ತು ಕೇರಳದಲ್ಲಿ ಭಾರಿ ಅವಾಂತರ ಸೃಷ್ಟಿಸಿರುವ ಪ್ರವಾಹಕ್ಕೆ ತಮಿಳು ನಟ ಸೂರ್ಯ ಹಾಗೂ ಅವರ ಸಹೋದರ ಕಾರ್ತಿ ಸ್ಪಂದಿಸಿದ್ದು. ಪ್ರವಾಹ ಸಂತ್ರಸ್ಥರ ದೇಣಿಗೆ ನೀಡಿದ್ದಾರೆ.

Published: 16th August 2019 12:58 AM  |   Last Updated: 16th August 2019 12:58 AM   |  A+A-


Posted By : Srinivasamurthy VN

ಚೆನ್ನೈ: ಕರ್ನಾಟಕ ಮತ್ತು ಕೇರಳದಲ್ಲಿ ಭಾರಿ ಅವಾಂತರ ಸೃಷ್ಟಿಸಿರುವ ಪ್ರವಾಹಕ್ಕೆ ತಮಿಳು ನಟ ಸೂರ್ಯ ಹಾಗೂ ಅವರ ಸಹೋದರ ಕಾರ್ತಿ ಸ್ಪಂದಿಸಿದ್ದು. ಪ್ರವಾಹ ಸಂತ್ರಸ್ಥರ ದೇಣಿಗೆ ನೀಡಿದ್ದಾರೆ.

ಕಾಲಿವುಡ್ ಸೂಪರ್ ಸ್ಚಾರ್ ನಟ ಸೂರ್ಯ ಹಾಗೂ ಅವರ ಸಹೋದರ ಕಾರ್ತಿ ಕೇರಳ ಮತ್ತು ಕರ್ನಾಟಕ ಸಂತ್ರಸ್ತರಿಗೆ ತಲಾ 10 ಲಕ್ಷ ರೂ. ಪರಿಹಾರ ಹಣ ನೀಡಿದ್ದಾರೆ. ತಮಿಳು ಚಲನಚಿತ್ರಗಳ ವಿಮರ್ಶಕ ರಮೇಶ್​ ಬಾಲಾ ಈ ಕುರಿತಂತೆ ತಮ್ಮ ಟ್ವಿಟರ್​ ಖಾತೆಯಲ್ಲಿ ಇದನ್ನು ಖಚಿತಪಡಿಸಿದ್ದಾರೆ. ನಟರಾದ ಸೂರ್ಯ ಹಾಗೂ ಕಾರ್ತಿಕ್​ ಅವರ ಕಾರ್ಯಕ್ಕೆ ಸಾಕಷ್ಟು ಮೆಚ್ಚುಗೆ ವ್ಯಕ್ತವಾಗಿದೆ.

ಪರ ರಾಜ್ಯದ ಜನತೆಯ ಸಂಕಷ್ಟಕ್ಕೆ ಮಿಡಿದ ಅವರಿಗೆ ಸಾಮಾಜಿಕ ಜಾಲತಾಣದಲ್ಲಿ ಪ್ರಶಂಸೆಯ ಮಹಾಪೂರವೇ ಹರಿದು ಬರುತ್ತಿದೆ. ಕನ್ನಡಿಗರು ಕೂಡ ನಟರಿಗೆ ಧನ್ಯವಾದಗಳನ್ನುಅರ್ಪಿಸಿದ್ದಾರೆ. ಇನ್ನು ರಾಜ್ಯದಲ್ಲಿ ಪ್ರವಾಹದಿಂದಾಗಿ ಸಾಕಷ್ಟು ನಷ್ಟ ಸಂಭವಿಸಿದ್ದು, ಪ್ರವಾಹ ಸಂತ್ರಸ್ಥರಿಗೆ ನೆರವಾಗಲು ಸಾಕಷ್ಟು ದಾನಿಗಳು ಮುಂದೆ ಬಂದಿದ್ದಾರೆ. ತಮ್ಮ ಕೈಲಾದಷ್ಟು ನೆರವನ್ನು ಸಿಎಂ ಪರಿಹಾರ ನಿಧಿಗೆ ನೀಡಿದ್ದಾರೆ. ಇನ್ನು ಕೆಲವರು ನೇರವಾಗಿ ಸಂತ್ರಸ್ತರಿಗೆ ಅಗತ್ಯವಸ್ತುಗಳನ್ನು ರವಾನಿಸಿದ್ದಾರೆ. ಸ್ಯಾಂಡಲ್​ ವುಡ್​ನಲ್ಲಿಯೂ ಸ್ಟಾರ್​ ನಟರಾದ ಪುನೀತ್​ ರಾಜ್​ಕುಮಾರ್​, ಸುದೀಪ್​, ದರ್ಶನ್​, ಯಶ್​ ಮುಂತಾದವರು ಪ್ರವಾಹ ಸಂತ್ರಸ್ತರಿಗೆ ಮಿಡಿದು, ತಮ್ಮ ಕೈಲಾದ ಮಟ್ಟಿಗೆ ನೆರವಾಗಿದ್ದಾರೆ.

Stay up to date on all the latest ರಾಜ್ಯ news with The Kannadaprabha App. Download now
facebook twitter whatsapp