ಎಂಎಂ ಕಲ್ಬುರ್ಗಿ ಹತ್ಯೆ ಪ್ರಕರಣ: ಆಗಸ್ಟ್ 19ಕ್ಕೆ ಚಾರ್ಜ್‌ಶೀಟ್ ಸಲ್ಲಿಕೆ

ಸಾಹಿತಿ, ವಿದ್ವಾಂಸ ಎಂ.ಎಂ.ಕಲ್ಬುರ್ಗಿ ಅವರ ಹತ್ಯೆಯ ತನಿಖೆ ಅಂತಿಮ ಹಂತಕ್ಕೆ ತಲುಪಿದೆ.ಈ ಪ್ರಕರಣದ ತನಿಖೆ ನಡೆಸುತ್ತಿರುವ ವಿಶೇಷ ತನಿಖಾ ತಂಡ (ಎಸ್‌ಐಟಿ) ಆಗಸ್ಟ್ 19 ರಂದು ಧಾರವಾಡದ ವಿಶೇಷ ನ್ಯಾಯಾಲಯದಲ್ಲಿ....
ಎಂ.ಎಂ.ಕಲ್ಬುರ್ಗಿ
ಎಂ.ಎಂ.ಕಲ್ಬುರ್ಗಿ

ಬೆಂಗಳೂರು: ಸಾಹಿತಿ, ವಿದ್ವಾಂಸ ಎಂ.ಎಂ.ಕಲ್ಬುರ್ಗಿ ಅವರ ಹತ್ಯೆಯ ತನಿಖೆ ಅಂತಿಮ ಹಂತಕ್ಕೆ ತಲುಪಿದೆ.ಈ ಪ್ರಕರಣದ ತನಿಖೆ ನಡೆಸುತ್ತಿರುವ ವಿಶೇಷ ತನಿಖಾ ತಂಡ (ಎಸ್‌ಐಟಿ) ಆಗಸ್ಟ್ 19 ರಂದು ಧಾರವಾಡದ ವಿಶೇಷ ನ್ಯಾಯಾಲಯದಲ್ಲಿ ಚಾರ್ಜ್‌ಶೀಟ್ ಸಲ್ಲಿಸುವ ಸಾಧ್ಯತೆಯಿದೆ ಎಂದು ಅಧಿಕೃತ ಮೂಲಗಳು ಪತ್ರಿಕೆಗೆ ಹೇಳಿದೆ.

"ಮಹಾರಾಷ್ಟ್ರ ಮತ್ತು ಉತ್ತರ ಕರ್ನಾಟಕದ ಕೆಲವು  ಬಲಪಂಥೀಯ ಗುಂಪುಗಳ ಸದಸ್ಯರನ್ನು ಒಳಗೊಂಡ ತಂಡ ಗೋವಾ ಮೂಲದ ಸನಾತನ ಸಂಸ್ಥೆಯ ತತ್ವದಿಂದ ಪ್ರೇರಿತವಾಗಿ  ಗೌರಿ ಲಂಕೇಶ್  ಹಾಗೂ ಕಲ್ಬುರ್ಗಿ ಹತ್ಯೆ ಮಾಡಿದೆ ಎಂದು ವರದಿಯಾಗಿದೆ. ಹಿಂದೂ ವಿರೋಧಿ ಅಭಿಪ್ರಾಯಗಳನ್ನು ಹೊಂದಿದ್ದ ಕಲ್ಬುರ್ಗಿ ಮತ್ತು ಗೌರಿ ಅವರನ್ನುಹಂತಕರು ಹತ್ಯೆ ಮಾಡಿದ್ದಾರೆ. ಎರಡೂ ಪ್ರಕರಣಗಳಲ್ಲಿ ಒಂದೇ ಬಗೆಯ ನಿಷೇಧಿತ 7.65 ಎಂಎಂ ಪಿಸ್ತೂಲ್ ಅನ್ನು ಬಳಸಿದ್ದಾರೆ ”ಎಂದು ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಉಗ್ರ ಬಲಪಂಥೀಯ ಗುಂಪಿನ ಹಿಂದೂ ಜನ ಜಾಗೃತಿ ಸಮಿತಿ (ಎಚ್ಜೆಜೆಎಸ್) ಮಾಜಿ ಸದಸ್ಯ ಗೌರಿ ಹತ್ಯೆ ಪ್ರಕರಣದಲ್ಲಿ ಪ್ರಮುಖ ಸ್ಥಾನದ ಆರೊಪಿಯಾಗಿರುವ ಅಮೋಲ್ ಕಾಳೆ  ಕಲ್ಬುರ್ಗಿ ಕೊಲೆ ಪ್ರಕರಣದ ಪ್ರಮುಖ ಆರೋಪಿ ಎಂದು ವರದಿಯಾಗಿದೆ. ಹುಬ್ಬಳ್ಳಿಯ ಅಗರಬತ್ತಿ ತಯಾರಕ ಮತ್ತು ಕಲ್ಬುರ್ಗಿಯ ಕೊಲೆಗಾರ - ಗಣೇಶ್ ಮಿಸ್ಕಿನ್ - ಗೌರಿ ಪ್ರಕರಣದಲ್ಲಿಯೂ ಪ್ರಮುಖ ಆರೋಪಿಯಾಗಿದ್ದಾನೆ.ಮತ್ತೊಬ್ಬ ಶಂಕಿತ - ಪ್ರವೀಣ್ ಪ್ರಕಾಶ್ ಚತುರ್ -ಧಾರವಾಡದಲ್ಲಿ 2015 ರ ಆಗಸ್ಟ್ 30 ರ ಬೆಳಿಗ್ಗೆ ಕದ್ದ ಮೋಟಾರ್ ಸೈಕಲ್ ನಲ್ಲಿ ಮಿಸ್ಕಿನ್ ಅನ್ನು ಡ್ರಾಪ್ ಮಾಡಿದ್ದನೆಂದು ಆರೋಪಿಸಲಾಗಿದೆ. ಎಸ್ಐಟಿ ತನಿಖೆಯ ಪ್ರಕಾರ, ಚತುರ್ ಬೈಕ್ನಲ್ಲಿ ಕಾಯುತ್ತಿದ್ದಾಗ ಕಲ್ಬುರ್ಗಿಯ ವಿದ್ಯಾರ್ಥಿಯಂತೆ ಮಿಸ್ಕಿನ್ ಪೋಸ್ ಮಾಡುತ್ತಾನೆ. ಬಳಿಕ ಕಲ್ಬುರ್ಗಿಯವರ ಮನೆಗೆ ತೆರಳಿದ ಮಿಸ್ಕಿನ್ ಅವರನ್ನು ಗನ್ ಪಾಯಿಂಟ್ ಮೂಲಕ ಹತ್ಯೆ ಮಾಡಿದ್ದಾನೆ. ಕಲ್ಬುರ್ಗಿ ಅವರ ಪತ್ನಿ ಉಮದೇವಿ ಹಂತಕನ ಗುರುತು ಪತ್ತೆ ಹಚ್ಚಿದ್ದಾರೆ.

ಮಹಾರಾಷ್ಟ್ರದ ಇಬ್ಬರು ವಿಚಾರವಾದಿಗಳ ಕೊಲೆ ಪ್ರಕರಣಗಳಲ್ಲಿ ಕಾಳೆ ಸಹ ಆರೋಪಿಯಾಗಿದ್ದಾನೆ. - ಪುಣೆಯ ಪ್ರೊಫೆಸರ್ ನರೇಂದ್ರ ದಾಭೋಲ್ಕರ್ ಮತ್ತು ಕೊಲ್ಹಾಪುರದ ಕಾಮ್ರೇಡ್ ಗೋವಿಂದ್ ಪನ್ಸಾರೆ ಅವರುಗಳ ಹತ್ಯೆಗೂ ಗೌರಿ ಹತ್ಯೆಗೂ ಸಂಬಂಧವಿದೆ ಎಂದು ಹೇಳಲಾಗಿದೆ.ಗೌರಿ ಹತ್ಯೆಯ ತನಿಖೆಗಾಗಿ ಸ್ಥಾಪಿಸಲಾದ ಎಸ್‌ಐಟಿಯನ್ನು ಈ ವರ್ಷದ ಫೆಬ್ರವರಿಯಲ್ಲಿ ಕಲ್ಬುರ್ಗಿ ಪ್ರಕರಣದ ತನಿಖೆ ನಡೆಸುವಂತೆ ಸುಪ್ರೀಂ ಕೋರ್ಟ್ ನಿರ್ದೇಶಿಸಿತ್ತು.

ಈ ಪ್ರಕರಣವನ್ನು ಈ ಹಿಂದೆ ಕರ್ನಾಟಕ ಅಪರಾಧ ತನಿಖಾ ಇಲಾಖೆ (ಸಿಐಡಿ) ತನಿಖೆ ನಡೆಸುತ್ತಿತ್ತು. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com