ಬ್ಯೂಟಿ ಆಫ್ ಹ್ಯೂಮಾನಿಟಿ: ಸಂತ್ರಸ್ತರಿಗೆ ನೆರವಾಗಲು ಅದ್ಧೂರಿ ಗೃಹಪ್ರವೇಶ ರದ್ದುಗೊಳಿಸಿದ ಬೆಂಗಳೂರು ದಂಪತಿ!

ಉತ್ತರ ಕರ್ನಾಟಕದ ಪ್ರವಾಹ ಪೀಡಿತರಿಗೆ ನೆರವಾಗಲು ಬೆಂಗಳೂರಿನ ವ್ಯಕ್ತಿಯೊಬ್ಬರು ತಮ್ಮ ಹೊಸ ಮನೆಯ ಅದ್ಧೂರಿ ಗೃಹಪ್ರವೇಶವನ್ನೇ ರದ್ದುಗೊಳಿಸಿದ್ದಾರೆ.
ಗೃಹ ಪ್ರವೇಶ ರದ್ದು ಮಾಡಿದ ಶೇಖರ್
ಗೃಹ ಪ್ರವೇಶ ರದ್ದು ಮಾಡಿದ ಶೇಖರ್

ಬೆಂಗಳೂರು: ಉತ್ತರ ಕರ್ನಾಟಕದ ಪ್ರವಾಹ ಪೀಡಿತರಿಗೆ ನೆರವಾಗಲು ಬೆಂಗಳೂರಿನ ವ್ಯಕ್ತಿಯೊಬ್ಬರು ತಮ್ಮ ಹೊಸ ಮನೆಯ ಅದ್ಧೂರಿ ಗೃಹಪ್ರವೇಶವನ್ನೇ ರದ್ದುಗೊಳಿಸಿದ್ದಾರೆ.

ವಿಜಯನಗರದ ಫ್ಲವರ್‌ ಡೆಕೊರೇಟರ್‌ ಆದ ಶೇಖರ್‌ ಹಾಗೂ ಮಹೇಶ್ವರಿ ಶೇಖರ್‌ ದಂಪತಿ ಸಂತ್ರಸ್ತರ ಕಷ್ಟಕ್ಕೆ ಸ್ಪಂದಿಸಲು ತಮ್ಮ ಗೃಹ ಪ್ರವೇಶ ಕಾರ್ಯಕ್ರಮವನ್ನೇ ರದ್ದುಗೊಳಿಸಿರುವುದು ವಿಶೇಷ. 

ಶೇಖರ್ ತಮ್ಮ ಉಳಿತಾಯ ಹಾಗೂ ಬ್ಯಾಂಕ್ ಲೋನ್ ಪಡೆದು ಮಾಗಡಿ ರಸ್ತೆಯ ಗಂಗೊಂಡನಹಳ್ಳಿಯಲ್ಲಿ ಮನೆ ಕಟ್ಟಿಸಿದ್ು, ಆಗಸ್ಟ್ 24 ರಂದು ಗೃಹ ಪ್ರವೇಶ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು.

ಆದರೆ ನೆರೆ ಸಂತ್ರಸ್ತರ ಸ್ಥಿತಿ ನೋಡಿ ಬೇಸರವಾಗಿದ್ದು ಸರಳವಾಗಿ ಪೂಜೆ ನೆರವೇರಿಸಿ, ಉಳಿತಾಯವಾಗುವ ಹಣ ಹಾಗೂ ಸಾಮಗ್ರಿಗಳನ್ನು ಸಂತ್ರಸ್ತರಿಗೆ ನೀಡಲು ಉದ್ದೇಶಿಸಿದ್ದಾರೆ.

ಗೃಹ ಪ್ರವೇಶವನ್ನು ತೀರಾ ಸರಳವಾಗಿ ಆಚರಿಸುವ ಮುಖೇನ ಅದರಿಂದ ಉಳಿತಾಯವಾಗುವ ವೆಚ್ಚ ಹಾಗೂ ಶುಭ ಕಾರ್ಯಕ್ಕೆ ಬೇಕಾಗುವ ಸಾಮಾಗ್ರಿಗಳನ್ನು ಸಂತ್ರಸ್ತರಿಗೆ ನೀಡಲು ಉದ್ದೇಶಿಸಿದ್ದಾರೆ. ಸಂಬಂಧಿಕರು, ಹಿತೈಷಿಗಳು, ಸ್ನೇಹಿತರು ತಮಗೆ ನೀಡಲು ಬಯಸಿರುವ ಕಾಣಿಕೆಗಳು, ಉಡುಗೊರೆಗಳನ್ನು ಸಂತ್ರಸ್ತರಿಗೆ ನೀಡಲು ಮನವಿ ಮಾಡಿದ್ದಾರೆ.

ನಾನು ಚಂದ್ರ ಲೇಔಟ್‌ನಲ್ಲಿ ಕಳೆದ 10 ವರ್ಷಗಳಿಂದ ಫ್ಲವರ್‌ ಡೆಕೊರೇಷನ್‌ ಕೆಲಸ ಮಾಡುತ್ತಿದ್ದೇನೆ. ಗಂಗೊಂಡನಹಳ್ಳಿಯಲ್ಲಿ ಚಿಕ್ಕದಾದ ಮನೆ ನಿರ್ಮಿಸಿದ್ದೇವೆ. ಉತ್ತರ ಕರ್ನಾಟಕದಲ್ಲಿನ ಜಲಯ ಪ್ರಳಯ ಕಂಡು ತುಂಬಾ ಬೇಜಾರಾಯ್ತು. ಅಲ್ಲಿನ ಜನರು ಸಂಕಷ್ಟದಲ್ಲಿರುವಾಗ ನಾವು ಗೃಹ ಪ್ರವೇಶವನ್ನು ಅದ್ಧೂರಿಯಾಗಿ ಆಚರಿಸುವುದು ಸರಿಯಲ್ಲವೆಂದು ರದ್ದುಗೊಳಿಸಿದ್ದೇವೆ. ಸರಳವಾಗಿ ಪೂಜೆ ನೆರವೇರಿಸಲಾಗುವುದು ಎಂದು ಭಾಗ್ಯಮ್ಮ ನಿಲಯ ದ ಮಾಲೀಕ ಶೇಖರ್ ಹೇಳಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com