ಮಂಗಳೂರು: ಡೇಟಾ ಎಂಟ್ರಿ ಉದ್ಯೋಗ ಮಾಡೋಕೆ ಹೋಗಿ 1.38 ಕೋಟಿ ಕಳಕೊಂಡ!

ಡೇಟಾ ಎಂಟ್ರಿ ಉದ್ಯೋಗ ಸಿಗುವುದೆಂದು ನಂಬಿ ಮಂಗಳೂರು ಮೂಲದ ವ್ಯಕ್ತಿಯೊಬ್ಬರು 1.38 ಕೋಟಿ ರೂ ಕಳೆದುಕೊಂಡಿರುವ ಘಟನೆ ಮಂಗಳೂರಿನಲ್ಲಿ ನಡೆದಿದೆ.
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ

ಬೆಂಗಳೂರು: ಡೇಟಾ ಎಂಟ್ರಿ ಉದ್ಯೋಗ ಸಿಗುವುದೆಂದು ನಂಬಿ ಮಂಗಳೂರು ಮೂಲದ ವ್ಯಕ್ತಿಯೊಬ್ಬರು 1.38 ಕೋಟಿ ರೂ ಕಳೆದುಕೊಂಡಿರುವ ಘಟನೆ ಮಂಗಳೂರಿನಲ್ಲಿ ನಡೆದಿದೆ.

ಮಂಗಳೂರಿನ ಸುರತ್ಕಲ್ ನಿವಾಸಿಯಾಗಿರುವ ಉಮಾನಾಥ್ ಭಂಡಾರಿ  (43) ಅವರು ಸೈಬರ್ ಅಪರಾಧ ಪೊಲೀಸರಿಗೆ ಬುಧವಾರ ದೂರು ನೀಡಿದ್ದಾರೆ. ಅವರು ದೂರಿನಲ್ಲಿ ಇಬ್ಬರು ಮಹಿಳೆಯರು ಸೇರಿದಂತೆ ಒಂಬತ್ತು ಆರೋಪಿಗಳನ್ನು ಹೆಸರಿಸಿದ್ದಾರೆ.

ಜೂನ್ 1 ರಂದು ತನಗೆ ಮೊಬೈಲ್ ಫೋನ್‌ ನಲ್ಲಿ ಸಂದೇಶ ಒಂದು ಬಂದಿದೆ.ಆ ಕರೆ ದಾಗ ಆತ ಡೇಟಿಂಗ್ ಇಂಡಿಯಾ ಎಂಬ ಸಂಸ್ಥೆಯ ಪ್ರತಿನಿಧಿ ಎಂದು ತನ್ನನ್ನು ತಾನು ಪರಿಚಯಿಸಿಕೊಂಡಿದ್ದ.  ಹೆಸರಾಂತ ಕಂಪನಿಯಲ್ಲಿ ಡೇಟಾ ಎಂಟ್ರಿ ಕೆಲಸ ಕೊಡಿಸುವುದಾಗಿ ಹೇಳಿದ ಆತ ಅರ್ಜಿ ಶುಲ್ಕವಾಗಿ 1,060 ರೂ. ಪಾವತಿಸಲು ಕೇಳಿದ್ದಾನೆ. ಉಮಾನಾಥ್ ಆನ್ ಲೈನ್ ಮೂಲಕ ಆರೋಪಿಗಳು ಒದಗಿಸಿದ ಬ್ಯಾಂಕ್ ಖಾತೆ ಸಂಖ್ಯೆಗೆ ಹಣ ಪಾವತಿಸಿದ್ದಾರೆ.

“ಇದರ ನಂತರ, ಆರೋಪಿಗಳು ವಿವಿಧ ಮೊಬೈಲ್ ಸಂಖ್ಯೆಗಳು ಮತ್ತು ಇಮೇಲ್ ಐಡಿ ಬಳಸಿ ದೂರುದಾರರನ್ನು ಸಂಪರ್ಕಿಸಿದರು ಮತ್ತು ವಿವಿಧ ಒಪ್ಪಂದಗಳ ಮೂಲಕ ಹೆಚ್ಚಿನ ಹಣವನ್ನು ಠೇವಣಿ  ಮಾಡಲು ವಿನಂತಿಸಿದ್ದರು.ಅದರಂತೆ ದೂರುದಾರ ಉಮಾನಾಥ್ ವಿಧ ಬ್ಯಾಂಕ್ ಖಾತೆಗಳಿಗೆ ಹಣವನ್ನು ಜಮೆ ಮಾಡಿದ್ದಾರೆ.ದೂರುದಾರರು ಜೂನ್ ಮತ್ತು ಆಗಸ್ಟ್ ನಡುವೆ 1,38,24,603 ರೂಗಳನ್ನು ಆರೋಪಿಗಳಿಗೆ ವರ್ಗಾಯಿಸಿದ್ದಾರೆ ”ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಆರೋಪಿಗಳು ಕೋಲ್ಕತ್ತಾದವರು ಎಂದು ಹೇಳಲಾಗಿದ್ದು, ಪೊಲೀಸರು ಆರೋಪಿಗಳ ಪತ್ತೆಗೆ ಕ್ರಮ ತೆಗೆದುಕೊಂಡಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com