ಬೆಂಗಳೂರು: ಯುವತಿಯರ ಬೆತ್ತಲೆ ಫೋಟೋ ತೋರಿಸಿ ಬ್ಲ್ಯಾಕ್ ಮೇಲ್ ಮಾಡುತ್ತಿದ್ದ ವಂಚಕನ ಬಂಧನ

ಯುವತಿಯ ಹೆಸರು ಹಾಗೂ ಭಾವಚಿತ್ರ ಮೂಲಕ ನಕಲಿ ಇನ್ ಸ್ಟಾ- ಗ್ರಾಮ್ ಖಾತೆ ತೆರೆದು, ಇತರೆ ಯುವತಿಯರ ಜೊತೆ ಸ್ನೇಹ ಬೆಳೆಸಿಕೊಂಡು ಅವರ ಖಾಸಗಿ ಕ್ಷಣದ ಫೋಟೋಗಳನ್ನು ಪಡೆದು....
ಬೆಂಗಳೂರು: ಯುವತಿಯರ ಬೆತ್ತಲೆ ಫೋಟೋ ತೋರಿಸಿ ಬ್ಲ್ಯಾಕ್ ಮೇಲ್ ಮಾಡುತ್ತಿದ್ದ ವಂಚಕನ ಬಂಧನ
ಬೆಂಗಳೂರು: ಯುವತಿಯರ ಬೆತ್ತಲೆ ಫೋಟೋ ತೋರಿಸಿ ಬ್ಲ್ಯಾಕ್ ಮೇಲ್ ಮಾಡುತ್ತಿದ್ದ ವಂಚಕನ ಬಂಧನ

ಬೆಂಗಳೂರು: ಯುವತಿಯ ಹೆಸರು ಹಾಗೂ ಭಾವಚಿತ್ರ ಮೂಲಕ ನಕಲಿ ಇನ್ ಸ್ಟಾ- ಗ್ರಾಮ್ ಖಾತೆ ತೆರೆದು, ಇತರೆ ಯುವತಿಯರ ಜೊತೆ ಸ್ನೇಹ ಬೆಳೆಸಿಕೊಂಡು ಅವರ ಖಾಸಗಿ ಕ್ಷಣದ ಫೋಟೋಗಳನ್ನು ಪಡೆದು ಹಣ ನೀಡುವಂತೆ ಬ್ಲ್ಯಾಕ್ ಮೇಲ್ ಮಾಡುತ್ತಿದ್ದ ವಂಚಕನನ್ನು ಸಿಸಿಬಿ ಪೊಲೀಸರು ಬಂಧಿಸಿದ್ದಾರೆ.

21 ವರ್ಷದ ಚಂದನ್ ಬಂಧಿತ. ಬಿಕಾಂ ವ್ಯಾಸಂಗ ಮಾಡುತ್ತಿದ್ದ ಈತ ಯವತಿಯ ಹೆಸರಿನಲ್ಲಿ ನಕಲಿ ಇನ್ ಸ್ಟಾ-ಗ್ರಾಂ ಖಾತೆ ತೆಗೆದು, ಸುಂದರ ಯುವತಿಯರನ್ನು ಪರಿಚಯಮಾಡಿಕೊಳ್ಳುತ್ತಿದ್ದ. ನಂತರ ಅವರೊಂದಿಗೆ ಸಲುಗೆಯಿಂದ ಸ್ನೇಹ ಬೆಳೆಸಿ, ಅವರ ಖಾಸಗಿ ಕ್ಷಣಗಳ ಭಾವಚಿತ್ರ ಪಡೆದು ಹಣ ನೀಡುವಂತೆ ಬ್ಯ್ಲಾಕ್ ಮೇಲ್ ಮಾಡುತ್ತಿದ್ದ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

ಈ ಕುರಿತು ಯುವತಿಯೋರ್ವಳು, ತನಗೆ 15 ಸಾವಿರ ರೂ. ನೀಡುವಂತೆ ಆತ ಬೇಡಿಕೆ ಇಟ್ಟಿದ್ದು, 500 ರೂ. ಆತನ ಖಾತೆಗೆ ವರ್ಗಾವಣೆ ಮಾಡಿರುವುದಾಗಿ ದೂರು ನೀಡಿದ್ದರು. ಅದರನ್ವಯ ತನಿಖೆ ಕೈಗೊಳ್ಳಲಾಗಿತ್ತು. ಹಣ ಸಂಪಾದನೆ ಮಾಡುವ ದುರಾಸೆಯಿಂದ ಆತ ಈ ಮಾರ್ಗ ಅನುಸರಿಸಿದ್ದ ಎಂದು ಪೊಲೀಸರು ತಿಳಿಸಿದ್ದಾರೆ.

ಸಾಮಾಜಿಕ ತಾಣ ಬಳಕೆದಾರರು ಯಾವುದೇ ಕಾರಣಕ್ಕೆ ಕ್ಷಣಿಕ ಪ್ರಚೋದನೆ, ಆಮಿಷಗಳಿಗೆ ಒಳಗಾಗಿ ಖಾಸಗಿ ಕ್ಷಣಗಳ ಚಿತ್ರವನ್ನು ಇತರರೊಡನೆ ಹಂಚಿಕೊಳ್ಲಬಾರದೆಂದು ಪೋಲೀಸ್ ಆಧಿಕಾರಿಗಳು ಮನವಿ ಮಾಡಿದ್ದಾರೆ.
 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com