ವಿದ್ಯುತ್ ತಂತಿ ಸ್ಪರ್ಶಿಸಿ ಕೊಪ್ಪಳದಲ್ಲಿ ಐವರು ವಿದ್ಯಾರ್ಥಿಗಳ ಸಾವು; ಕುಟುಂಬಸ್ಥರಿಗೆ ಸಿಎಂ 5 ಲಕ್ಷ ರೂ.ಪರಿಹಾರ ಘೋಷಣೆ 

ವಿದ್ಯುತ್ ತಂತಿ ಸ್ಪರ್ಶಿಸಿ ಐವರು ವಿದ್ಯಾರ್ಥಿಗಳು ಭಾನುವಾರ ಬೆಳಗ್ಗೆ ಮೃತಪಟ್ಟಿರುವ ಘಟನೆ ಕೊಪ್ಪಳದಲ್ಲಿ ನಡೆದಿದೆ.
 

Published: 18th August 2019 08:13 AM  |   Last Updated: 18th August 2019 12:31 PM   |  A+A-


Representational image

ಸಾಂದರ್ಭಿಕ ಚಿತ್ರ

Posted By : Sumana Upadhyaya
Source : Online Desk

ಕೊಪ್ಪಳ: ವಿದ್ಯುತ್‌ ಸ್ಪರ್ಶಿಸಿ ಆರು ಮಂದಿ ವಿದ್ಯಾರ್ಥಿಗಳು ದಾರುಣವಾಗಿ ಮೃತಪಟ್ಟಿರುವ ಘಟನೆ ಕೊಪ್ಪಳದ ನಗರದ ಬನ್ನಿಕಟ್ಟಿ ಪ್ರದೇಶದಲ್ಲಿರುವ ದೇವರಾಜ ಅರಸ್‌ ಮೆಟ್ರಿಕ್‌ ಪೂರ್ವ ವಸತಿ ನಿಲಯದಲ್ಲಿ ಭಾನುವಾರ ಬೆಳಗ್ಗೆ ನಡೆದಿದೆ.


10ನೇ ತರಗತಿ ವಿದ್ಯಾರ್ಥಿಗಳಾದ ಮೆಟಗಲ್​​ ನಿವಾಸಿ ಮಲ್ಲಿಕಾರ್ಜುನ ಮತ್ತು ಲಿಂಗದಹಳ್ಳಿ ನಿವಾಸಿ ಬಸವರಾಜ, 9ನೇ ತರಗತಿ ವಿದ್ಯಾರ್ಥಿಗಳಾದ ಹಲಗೇರಿಯ ದೇವರಾಜ, ಹೈದರ್‌ ​ನಗರದ ಕುಮಾರ್​, 8ನೇ ತರಗತಿಯ ಲಾಚನಕೇರಿ ನಿವಾಸಿ ಗಣೇಶ್​ ಮೃತ ವಿದ್ಯಾರ್ಥಿಗಳು.


ವಸತಿ ನಿಲಯದಲ್ಲಿ ಇತ್ತೀಚೆಗೆ ಧ್ವಜಾರೋಹಣ ಮಾಡಲಾಗಿತ್ತು. ಧ್ವಜಾರೋಹಣ ಕಂಬವನ್ನು ಬ್ಯಾರಲ್ ನಲ್ಲಿ ಇಡಲಾಗಿತ್ತು‌. ಆ ಬ್ಯಾರಲ್ ಗೆ ವಿದ್ಯುತ್ ತಂತಿ ತಾಗಿದೆ. ಇದನ್ನು ಗಮನಿಸದೇ ವಿದ್ಯಾರ್ಥಿಗಳು ಕಂಬವನ್ನು ಕೆಳಗೆ ಇಳಿಸಲು ಮುಂದಾಗಿದ್ದಾರೆ. ಆಗ ವಿದ್ಯುತ್ ಸ್ಪರ್ಶದಿಂದ ಐವರು ಸ್ಥಳದಲ್ಲೆ ಮೃತಪಟ್ಟಿದ್ದಾರೆ.


ಕೊಪ್ಪಳ ನಗರ ಠಾಣಾ ಪೊಲೀಸರು ಸ್ಥಳಕ್ಕೆ ಆಗಮಿಸಿ ತನಿಖೆ ನಡೆಸುತ್ತಿದ್ದಾರೆ. ಮೃತ ವಿದ್ಯಾರ್ಥಿಗಳ ಕುಟುಂಬಕ್ಕೆ ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ ತಲಾ 5 ಲಕ್ಷ ರೂಪಾಯಿ ಪರಿಹಾರ ಘೋಷಿಸಿದ್ದಾರೆ.


ಕೊಪ್ಪಳ ನಗರ ಪೊಲೀಸ್ ಠಾಣೆಯ ಪೊಲೀಸರು ಸ್ಥಳಕ್ಕೆ ಆಗಮಿಸಿ ತನಿಖೆ ನಡೆಸುತ್ತಿದ್ದಾರೆ. 

ಮೃತ ವಿದ್ಯಾರ್ಥಿಗಳ ಪೋಷಕರು ಸ್ಥಳಕ್ಕೆ ಆಗಮಿಸಿದ್ದು ಅವರ ಆಕ್ರಂದನ ಮುಗಿಲು ಮುಟ್ಟಿದೆ. ಸ್ಥಳಕ್ಕೆ ಅಧಿಕಾರಿಗಳು ಬರುವಂತೆ ಆಗ್ರಹಿಸಿ ಮೃತ ವಿದ್ಯಾರ್ಥಿಗಳ ಸಂಬಂಧಿಕರು ಮತ್ತು ಸ್ಥಳೀಯರು ಪ್ರತಿಭಟನೆ ಮಾಡುತ್ತಿದ್ದಾರೆ. 

Stay up to date on all the latest ರಾಜ್ಯ news with The Kannadaprabha App. Download now
facebook twitter whatsapp