ಐಟಿ ರಾಜಧಾನಿಗೆ ಲಗ್ಗೆ ಇಟ್ಟ ರೋಬೋ ಸಪ್ಲೇಯರ್ಸ್! ಮಾನವನ ಬದಲಿಗೆ ರೋಬೋಟ್‌ಗಳಿಂದ ಸೇವೆ

 ಇಂದಿರಾನಗರದ 100 ಫೀಟ್ ರಸ್ತೆಯಲ್ಲಿ ಹೊಸದಾಗಿ ತೆರೆಯಲಾಗಿರುವ ರೆಸ್ಟೋರೆಂಟ್ ನಲ್ಲಿ ನಿಮಗೆ ರೋಬೋ ಸರ್ವರ್ ಗಳು ಸಿಗುತ್ತಾರೆ!
ಐಟಿ ರಾಜಧಾನಿಗೆ ಲಗ್ಗೆ ಇಟ್ಟ ರೋಬೋ ಸಪ್ಲೇಯರ್ಸ್!
ಐಟಿ ರಾಜಧಾನಿಗೆ ಲಗ್ಗೆ ಇಟ್ಟ ರೋಬೋ ಸಪ್ಲೇಯರ್ಸ್!

ಬೆಂಗಳೂರು: ಇಂದಿರಾನಗರದ 100 ಫೀಟ್ ರಸ್ತೆಯಲ್ಲಿ ಹೊಸದಾಗಿ ತೆರೆಯಲಾಗಿರುವ ರೆಸ್ಟೋರೆಂಟ್ ನಲ್ಲಿ ನಿಮಗೆ ರೋಬೋ ಸರ್ವರ್ ಗಳು ಸಿಗುತ್ತಾರೆ! ಹೌದು, ಶಿವಮೊಗ್ಗ, ಚೆನ್ನೈ ಮತ್ತು ಕೊಯಮತ್ತೂರಿನಲ್ಲಿ ರೋಬೋಟ್ ರೆಸ್ಟೋರೆಂಟ್‌ಗಳ ಯಶಸ್ಸಿನ ನಂತರ, ಈಗ ಬೆಂಗಳೂರಿನಲ್ಲಿ ಇದೇ ರೀತಿಯ ಹೋಟೆಲ್ ಒಂದು ತಲೆ ಎತ್ತಿದೆ.

ಇಂಡೋ ಏಷ್ಯನ್ ಪಾಕಪದ್ಧತಿಯ ಆಹಾರ ಪೂರೈಸುವ  ಇಂದಿರಾನಗರದ 100 ಅಡಿ ರಸ್ತೆಯಲ್ಲಿರುವ ರೆಸ್ಟೋರೆಂಟ್ ನಲ್ಲಿ ಒಟ್ಟಾರೆ ಆರು ರೋಬೋಟ್‌ ಸರ್ವರ್ ಗಳಿದ್ದಾರೆ. ಇದರಲ್ಲಿ ಒಬ್ಬ ಮ್ಯಾನೇಜರ್ ಹಾಗೂ ಐವರು ಸಪ್ಲೇಯರ್ ಗಳಾಗಿದ್ದಾರೆ.ರೆಸ್ಟೋರೆಂಟ್ ನ ಟೇಬಲ್ ನ ಮೇಲಿರಿಸಿದ್ದ ಟ್ಯಾಬ್ಲೆಟ್ ಬಳಸಿ ರೋಬೋ ಸರ್ವರ್ ಗಳನ್ನು ತಾವು ಕರೆಯಬಹುದಾಗಿದೆ.

ಇದು ರಾಜ್ಯದ ಎರಡನೇ ರೋಬೋಟ್ ಸರ್ವರ್ ಗಳಿರುವ ಹೋಟೆಲ್ ಆಗಿದ್ದು ಇದಕ್ಕೆ ಮುನ್ನ ಶಿವಮೊಗ್ಗದಲ್ಲಿ ಇಂತಹಾ ರೋಬೋಟ್ ಸರ್ವರ್ ರೆಸ್ಟೋರೆಂಟ್ ಪ್ರಾರಂಭವಾಗಿತ್ತು.

ರೋಬೋಟ್‌ಗಳನ್ನು ಸಂವಾದಾತ್ಮಕವಾಗಿ ಪ್ರೋಗ್ರಾಮ್ ಮಾಡಲಾಗಿದೆ ಮತ್ತು ಆಹಾರ ಮತ್ತು ಮೋಕ್‌ಟೇಲ್‌ಗಳನ್ನು ನೀಡುವುದರ ಜೊತೆಗೆ ಬರ್ತಡೇ ಸಾಂಗ್ಸ್, ಇತರೆ ಶುಭಾಶ್ಯ ಸಂದೇಶಗಳನ್ನು ಸಹ ಇವುಗಳು ತಿಳಿಸಲಿದೆ.

 ರೆಸ್ಟೋರೆಂಟ್‌ನಲ್ಲಿ ಒಮ್ಮೆಗೆ 50 ಡೈನರ್‌ಗಳಿಗೆ ಅವಕಾಶವಿದ್ದು ರೋಬೋಟ್ ರೆಸ್ಟೋರೆಂಟ್‌ನ ಸಂಸ್ಥಾಪಕ ವೆಂಕಟೇಶ್ ರಾಜೇಂದ್ರನ್ ಐಟಿ ರಾಜಧಾನಿ ಬೆಂಗಳೂರಿನಲ್ಲಿ ಇಂತಹಾ ಒಂದು ನೂತನ ಪ್ರಯೋಗ ಯಶಸ್ವಿಯಾಗುವ ವಿಶ್ವಾಸ ಹೊಂದಿದ್ದಾರೆ.

ತಮ್ಮ ಕೃತಕ ಬುದ್ಧಿಮತ್ತೆಯ ರೋಬೋಟ್ ಗಳನ್ನು ನೊಡಿಕೊಳ್ಳಲು ರೆಸ್ಟೋರೆಂಟ್‌ನಲ್ಲಿರುವ ಸಿಬ್ಬಂದಿಗೆ ಸಹ ತರಬೇತಿ ನೀಡಲಾಗಿದೆ."ಕಾರ್ಯಾಚರಣೆಯ ಅವಧಿಯಲ್ಲಿ ಉದ್ಭವಿಸಬಹುದಾದ ಯಾವುದೇ ಸಮಸ್ಯೆಗಳಿಗೆ ಹಾಜರಾಗಲು ಸಿಬ್ಬಂದಿ ಗಳಿಗೆ ಸಹ ತರಬೇತಿ ನೀಡಲಾಗಿದೆ.ಪನಿಯ ಮೂಲವೊಂದು ತಿಳಿಸಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com