ಬೆಂಗಳೂರು: ರಕ್ಷಣಾ ಇಲಾಖೆ ಉದ್ಯೋಗಿಗಳಿಂದ ಅನಿರ್ದಿಷ್ಟಾವಧಿ ಮುಷ್ಕರ

ಕೇಂದ್ರದ ಖಾಸಗೀಕರಣ ನೀತಿಯ ವಿರುದ್ಧ ರಕ್ಷಣಾ ಇಲಾಖೆಯ ಉದ್ಯೋಗಿಗಳು ನಗರದಲ್ಲಿ ಬುಧವಾರದಿಂದ ಅನಿರ್ದಿಷ್ಟಾವಧಿ ಮುಷ್ಕರ ಆರಂಭಿಸಿದ್ದಾರೆ.
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ಬೆಂಗಳೂರು: ಕೇಂದ್ರದ ಖಾಸಗೀಕರಣ ನೀತಿಯ ವಿರುದ್ಧ ರಕ್ಷಣಾ ಇಲಾಖೆಯ ಉದ್ಯೋಗಿಗಳು ನಗರದಲ್ಲಿ ಬುಧವಾರದಿಂದ ಅನಿರ್ದಿಷ್ಟಾವಧಿ ಮುಷ್ಕರ ಆರಂಭಿಸಿದ್ದಾರೆ.

ಜೆ ಸಿ ನಗರದ ಟಿವಿ ಟವರ್ ಬಳಿಯ ರಕ್ಷಣಾ ಇಲಾಖೆಯ ಕಚೇರಿ ಮುಂಭಾಗದಲ್ಲಿ ಮುಷ್ಕರ ಆರಂಭಿಸಿರುವ ನೂರಾರು ಉದ್ಯೋಗಿಗಳು, ರಕ್ಷಣಾ ಇಲಾಖೆಯ ಉದ್ಯೋಗ ಕಡಿತ ಮಾಡುವುದರ ವಿರುದ್ಧ ಘೋಷಣೆ ಕೂಗಿದರು.

ಆಲ್ ಇಂಡಿಯಾ ಡಿಫೆನ್ಸ್ ಎಂಪ್ಲಾಯೀಸ್ ಫೆಡರೇಷನ್ ಹಾಗೂ ಸಿಕ್ಯೂಎಎಲ್ ಮತ್ತು ಆರ್. ಸಿವಿಲಿಯನ್ ಎಂಪ್ಲಾಯೀಸ್ ಯೂನಿಯನ್‍ನ ನೇತೃತ್ವದಲ್ಲಿ ನಡೆದ ಮುಷ್ಕರದಲ್ಲಿ ಪಾಲ್ಗೊಂಡು ಮಾತನಾಡಿದ ಫೇಡರೇಷನ್ ಉಪಾಧ್ಯಕ್ಷ ಎಂ.ಕೆ.ರವೀಂದ್ರನ್ ಪಿಳ್ಳೆ, ದೇಶದ ಶಾಂತಿ ಸ್ಥಾಪನೆಗಾಗಿ, ರಕ್ಷಣಾ ಉದ್ಯಮಗಳಲ್ಲಿ ಸ್ವಾವಲಂಬನೆ ಸಾಧಿಸಲು ರಕ್ಷಣಾ ಘಟಕಗಳನ್ನು ಸ್ಥಾಪಿಸಲಾಗಿದ್ದು, ಸಂಸ್ಥೆಯಲ್ಲಿನ ಕೌಶಲ್ಯ ಭರಿತ ನೌಕರರು ಹಗಲಿರುಳು ಶ್ರಮಿಸುತ್ತಿದ್ದಾರೆ. ಆದರೆ, ಸರಕಾರ ಅವರನ್ನು ಉತ್ತೇಜಿಸುವ ಬದಲಾಗಿ, ರಕ್ಷಣಾ ಘಟಕಗಳನ್ನು ನಿಷ್ಕ್ರಿಯಗೊಳಿಸಲು ಮುಂದಾಗಿದೆ. ಇದರಿಂದ ನೂರಾರು ನೌಕರರು ಉದ್ಯೋಗ ಕಳೆದುಕೊಳ್ಳುವ ಭೀತಿಯಲ್ಲಿದ್ದಾರೆ ಎಂದು ಹೇಳಿದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com