ರಾಯಚೂರು: ವರದಕ್ಷಿಣೆ ಕಿರುಕುಳ, 3 ಮಕ್ಕಳೊಂದಿಗೆ ಕಾಲುವೆಗೆ ಹಾರಿ ತಾಯಿ ಆತ್ಮಹತ್ಯೆ

ವರದಕ್ಷಿಣೆ ಕಿರುಕುಳದಿಂದ ಬೇಸತ್ತು ತಾಯಿ ಯೊಬ್ಬರು ತಮ್ಮ ಮೂವರು ಮಕ್ಕಳೊಂದಿಗೆ ಕಾಲುವೆಗೆ ಹಾರಿ ಆತ್ಮಹತ್ಯೆಗೆ ಶರಣಾಗಿರುವ ಹೃದಯ ವಿದ್ರಾವಕ ಘಟನೆ ದೇವದುರ್ಗ ತಾಲೂಕಿನ ಕೊತ್ತದ್ದೊಡ್ಡಿ ಗ್ರಾಮದ ಬಳಿಯ ನಾರಾಯಣಪುರ ಬಲದಂಡೆಯಲ್ಲಿ ನಡೆದಿದೆ

Published: 21st August 2019 04:05 PM  |   Last Updated: 21st August 2019 04:05 PM   |  A+A-


ಸಂಗ್ರಹ ಚಿತ್ರ

Posted By : Raghavendra Adiga
Source : UNI

ರಾಯಚೂರು: ವರದಕ್ಷಿಣೆ ಕಿರುಕುಳದಿಂದ ಬೇಸತ್ತು ತಾಯಿ ಯೊಬ್ಬರು ತಮ್ಮ ಮೂವರು ಮಕ್ಕಳೊಂದಿಗೆ ಕಾಲುವೆಗೆ ಹಾರಿ ಆತ್ಮಹತ್ಯೆಗೆ ಶರಣಾಗಿರುವ ಹೃದಯ ವಿದ್ರಾವಕ ಘಟನೆ ದೇವದುರ್ಗ ತಾಲೂಕಿನ ಕೊತ್ತದ್ದೊಡ್ಡಿ ಗ್ರಾಮದ ಬಳಿಯ ನಾರಾಯಣಪುರ ಬಲದಂಡೆಯಲ್ಲಿ ನಡೆದಿದೆ

ತಾಯಿ ನಸೀಮಾ ಮೆಹಬೂಬ್ (28), ಮಕ್ಕಳಾದ ಮಹ್ಮದ್ ಹನೀಫ್( 5) ಅಯಾನ್ (3), ರೀಗಾನ್ (1) ಮೃತಪಟ್ಟ ದುರ್ದೈವಿಗಳು.

ಸಿರವಾರ ತಾಲೂಕಿನ ಅತ್ತನೂರು ಗ್ರಾಮದ ನಸೀಮಾ ಅವರಿಗೆ ಕಳೆದ 5 ವರ್ಷದ ಹಿಂದೆ ದೇವದುರ್ಗ ತಾಲೂಕಿನ ದೇವತಗಲ್ ಗ್ರಾಮದ ಮೆಹಬೂಬ್ ಎಂಬಾತನೊಂದಿಗೆ ಮದುವೆಯಾಗಿತ್ತು. ಗಂಡ, ಅತ್ತೆ, ಮೈದುನ ಹಾಗೂ ಆತನ ಪತ್ನಿ ಮತ್ತು ನಾದಿನಿ ವರದಕ್ಷಿಣೆ ತರುವಂತೆ ಕಿರುಕುಳ ನೀಡುತ್ತಿದ್ದರು ಎಂದು ಆಕೆಯ ಪಾಲಕರು ಆರೋಪಿಸಿದ್ದಾರೆ.

ಇದರಿಂದ ಬೇಸತ್ತ ನಸೀಮಾ ಸಿರವಾರದ ಆಸ್ಪತ್ರೆಗೆ ಹೋಗಿ ಬರುವುದಾಗಿ ಹೇಳಿ ತನ್ನ ಮೂವರು ಮಕ್ಕಳೊಡನೆ ಕಾಲುವೆಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ.ಇದೀಗ ನಸೀಮಾ ಪತಿ ಮನೆಯವರ ವಿರುದ್ಧ ಆತ್ಮಹತ್ಯೆಗೆ ಪ್ರಚೋದನೆ ಣೀಡಿರುವ ಕುರಿತಂತೆ ಪ್ರಕರಣ ದಾಖಲಾಗಿದೆ.  ಪತಿ ಮಹಿಬೂಬ, ಅತ್ತೆ ಹಮೀದಾ, ಮೈದುನಾ ಮುಸ್ತಫಾ ಮತ್ತು ನಾದಿನಿ ಮುಮ್ತಾಜ್ ರನ್ನು ಸಿರವಾರ ಪೊಲೀಸರು ಬಂಧಿಸಿ ವಿಚಾರಣೆ ನಡೆಸಿದ್ದಾರೆ.
 

Stay up to date on all the latest ರಾಜ್ಯ news with The Kannadaprabha App. Download now
facebook twitter whatsapp