ನೂತನ ಸಚಿವರಿಗೆ ವಿಧಾನಸೌಧ, ವಿಕಾಸಸೌಧದಲ್ಲಿ ಕೊಠಡಿಗಳ ಹಂಚಿಕೆ

ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಸಂಪುಟ ಸಚಿವರಾಗಿ ಮಂಗಳಾರ ಅಧಿಕಾರ ಸ್ವೀಕರಿಸಿದ 17 ಸಚಿವರಿಗೆ ವಿಧಾನಸೌಧ ಮತ್ತು ವಿಕಾಸಸೌಧದಲ್ಲಿ ಕೊಠಡಿಗಳನ್ನು ಹಂಚಿಕೆ ಮಾಡಲಾಗಿದೆ.

Published: 21st August 2019 02:59 PM  |   Last Updated: 21st August 2019 02:59 PM   |  A+A-


Section 144 imposed around Vidhana Soudha from July 11 to 14

ವಿಧಾನಸೌಧ

Posted By : Lingaraj Badiger
Source : UNI

ಬೆಂಗಳೂರು: ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಸಂಪುಟ ಸಚಿವರಾಗಿ ಮಂಗಳಾರ ಅಧಿಕಾರ ಸ್ವೀಕರಿಸಿದ 17 ಸಚಿವರಿಗೆ ವಿಧಾನಸೌಧ ಮತ್ತು ವಿಕಾಸಸೌಧದಲ್ಲಿ ಕೊಠಡಿಗಳನ್ನು ಹಂಚಿಕೆ ಮಾಡಲಾಗಿದೆ.

ಗೋವಿಂದ ಎಂ.ಕಾರಜೋಳ ಅವರಿಗೆ ವಿಧಾನಸೌಧದ 340-340 ಎ, ಡಾ.ಅಶ್ವಥ್ ನಾರಾಯಣ ಸಿ.ಎನ್. ಅವರಿಗೆ ವಿಕಾಸಸೌಧದ 242-243, ಲಕ್ಷ್ಮಣ ಸವದಿ ಅವರಿಗೆ ವಿಧಾನಸೌಧ 301-301ಎ, ಕೆ.ಎಸ್. ಈಶ್ವರಪ್ಪ ಅವರಿಗೆ ವಿಧಾನಸೌಧ 329-329 ಎ, ಆರ್.ಅಶೋಕ್ ಅವರಿಗೆ ವಿಧಾನಸೌಧ 317-317ಎ, ಜಗದೀಶ್ ಶೆಟ್ಟರ್ ಅವರಿಗೆ ವಿಧಾನಸೌಧ 315-315ಎ, ಬಿ.ಶ್ರೀರಾಮುಲು ಅವರಿಗೆ ವಿಧಾನಸೌಧ 328-328 ಎ, ಎಸ್.ಸುರೇಶ್ ಕುಮಾರ್ ಅವರಿಗೆ ವಿಧಾನಸೌಧ 262-262ಎ, 201 ಎಫ್, ವಿ. ಸೋಮಣ್ಣ ಅವರಿಗೆ 314-314 ಎ, ಸಿ.ಟಿ.ರವಿ ಅವರಿಗೆ ವಿಧಾನಸೌಧ 344-344 ಎ, ಬಸವರಾಜ ಬೊಮ್ಮಾಯಿ ಅವರಿಗೆ ವಿಧಾನಸೌಧ 327-327 ಎ ಕೊಠಡಿಗಳನ್ನು ಹಂಚಿಕೆ ಮಾಡಿ ಆದೇಶ ಹೊರಡಿಸಲಾಗಿದೆ.

ಕೋಟ ಶ್ರೀನಿವಾಸ ಪೂಜಾರಿ ಅವರಿಗೆ ವಿಧಾನಸೌಧ 336-336 ಎ, ಜೆ.ಸಿ.ಮಾಧುಸ್ವಾಮಿ ವಿಧಾನಸೌಧ 316-316 ಎ, ಸಿ.ಸಿ.ಪಾಟೀಲ್ ಅವರಿಗೆ ವಿಧಾನಸೌಧ 305-305 ಎ, ಎಚ್. ನಾಗೇಶ್ ಅವರಿಗೆ ವಿಕಾಸಸೌಧ 342-343, ಪ್ರಭು ಚೌಹಾಣ್ ಅವರಿಗೆ ವಿಕಾಸಸೌಧ 143-146, ಜೊಲ್ಲೆ ಶಶಿಕಲಾ ಅಣ್ಣಾ ಸಾಹೇಬ್ ಅವರಿಗೆ ವಿಕಾಸಸೌಧ 141-142 ಸಂಖ್ಯೆಯ ಕೊಠಡಿಗಳನ್ನು ಹಂಚಿಕೆ ಮಾಡಲಾಗಿದೆ.

Stay up to date on all the latest ರಾಜ್ಯ news with The Kannadaprabha App. Download now
facebook twitter whatsapp