ಸಮೃದ್ಧಿ ಯಾದವ್
ಸಮೃದ್ಧಿ ಯಾದವ್

ಹಳೆಗನ್ನಡದಲ್ಲಿ ಸಾಧನೆ ಮಾಡಲು ಹೊರಟಿರುವ ಬೆಂಗಳೂರು ಬಾಲಕಿ ಸಮೃದ್ಧಿ ಯಾದವ್ 

ನಮ್ಮ ಸಂಪ್ರದಾಯ ಆಚರಣೆಗಳು, ಭಾಷೆಗಳು ನಶಿಸಿಹೋಗುತ್ತಿವೆ, ಇಂದಿನ ಯುವ ಜನಾಂಗ ನಮ್ಮ ಭಾಷೆಗಳನ್ನು ಮಾತನಾಡಲು ಹಿಂದೇಟು ಹಾಕುತ್ತಾರೆ ಎಂಬ ಅಪವಾದಗಳು ಕೇಳಿಬರುತ್ತಿರುತ್ತವೆ. ಇಂತವರ ಮಧ್ಯೆ ಸಮೃದ್ಧಿ ಯಾದವ್ ಅಪವಾದ. 

ಬೆಂಗಳೂರು; ನಮ್ಮ ಸಂಪ್ರದಾಯ ಆಚರಣೆಗಳು, ಭಾಷೆಗಳು ನಶಿಸಿಹೋಗುತ್ತಿವೆ, ಇಂದಿನ ಯುವ ಜನಾಂಗ ನಮ್ಮ ಭಾಷೆಗಳನ್ನು ಮಾತನಾಡಲು ಹಿಂದೇಟು ಹಾಕುತ್ತಾರೆ ಎಂಬ ಅಪವಾದಗಳು ಕೇಳಿಬರುತ್ತಿರುತ್ತವೆ. ಇಂತವರ ಮಧ್ಯೆ ಸಮೃದ್ಧಿ ಯಾದವ್ ಅಪವಾದ.


5ನೇ ಶತಮಾನದಲ್ಲಿ ಬನವಾಸಿಯಲ್ಲಿ ಕದಂಬರ ಆಳ್ವಿಕೆ ಸಮಯದಲ್ಲಿ ಬಳಸುತ್ತಿದ್ದ ಹಳೆಗನ್ನಡವನ್ನು 6ನೇ ತರಗತಿಯಲ್ಲಿ ಓದುತ್ತಿರುವ ಈ ಬಾಲಕಿ ಕಲಿಯುತ್ತಿದ್ದಾಳೆ. ಸಾಮಾನ್ಯವಾಗಿ ಹಳೆಗನ್ನಡವೆಂದರೆ ಎಲ್ಲರಿಗೂ ಓದಲು, ಮಾತನಾಡಲು ಕಷ್ಟವಾಗುತ್ತದೆ. ನಾಲಿಗೆ ಸರಿಯಾಗಿ ತಿರುಚಬೇಕು. ಆದರೆ ಹಳೆಗನ್ನಡದ ಸವಿಯನ್ನು ಕಂಡು ಅದನ್ನು 8ನೇ ವಯಸ್ಸಿನಲ್ಲಿಯೇ ಕಲಿಯಲು ಸಮೃದ್ದಿ ಆರಂಭಿಸಿದಳು. 


''ನನ್ನ ತಾಯಿ ರನ್ನನ ಗದಾಯುದ್ಧ ಓದುತ್ತಿದ್ದರು. ಅವರು ಓದುತ್ತಿದ್ದಾಗ ನನಗೂ ಕಲಿಯಬೇಕೆಂಬ ಆಸೆ ಉಂಟಾಯಿತು. ಅಮ್ಮ ನನಗೆ ಹೇಳಿಕೊಡಲು ಆರಂಭಿಸಿದರು. ಹಳೆಗನ್ನಡ ಹೇಗೆ ಉಚ್ಛರಿಸಬೇಕೆಂದು ಆಡಿಯೊ ರೆಕಾರ್ಡ್ ಮಾಡಿ ತೋರಿಸುತ್ತಿದ್ದರು. ಇದೀಗ 10ನೇ ಶತಮಾನದ ಖ್ಯಾತ ಕವಿ ರನ್ನನ ಕೆಲವು ಪದ್ಯಗಳನ್ನು ಸಮೃದ್ಧಿ ಹೇಳುತ್ತಾಳೆ.


ಸಮೃದ್ಧಿ ಇತ್ತೀಚೆಗೆ ತನ್ನ ಯೂಟ್ಯೂಬ್ ಚಾನೆಲ್ ಆರಂಭಿಸಿದ್ದಾಳೆ. ಮುಂದೆ ಕನ್ನಡ ನಿರೂಪಕಿಯಾಗುವ ಬಯಕೆ ಆಕೆಗಿದೆ. ಆರ್ ಜೆ ಅಪರ್ಣ ರೀತಿ ನಾನು ಕೂಡ ಖ್ಯಾತ ನಿರೂಪಕಿಯಾಗಬೇಕು ಎನ್ನುತ್ತಾಳೆ. ಆಕೆಯ ತಾಯಿ ಭಾರತಿ ಸಾಹಿತ್ಯ ವಿದ್ಯಾರ್ಥಿನಿಯಾಗಿದ್ದವರು. ತಾಯಿಗೆ ಪುಸ್ತಕ, ಸಾಹಿತ್ಯ ಓದುವುದರಲ್ಲಿ ಇದ್ದ ಆಸಕ್ತಿ ಮಗಳಿಗೆ ಸಹ ಬಂದಿದೆ. 


ಯಾರೂ ಹೆಚ್ಚಾಗಿ ಬಳಸದಿರುವ ಭಾಷೆಯನ್ನು ಕಲಿಯುವುದು ಅಷ್ಟು ಸುಲಭವಲ್ಲ. ನಾನು ಮತ್ತು ನನ್ನ ಮಗಳು ಹಳೆಗನ್ನಡ, ಹಳೆ ತಮಿಳು ಕೂಡ ಕಲಿಯುತ್ತಿದ್ದೇವೆ ಎಂದರು ಭಾರತಿ.


ಸಮೃದ್ಧಿ ಕನ್ನಡ ಖಾಸಗಿ ಚಾನೆಲ್ ನ ರಿಯಾಲಿಟಿ ಶೋ ಕನ್ನಡ ಕಣ್ಮಣಿಯಲ್ಲಿ ಭಾಗವಹಿಸಿದ್ದಳು. ಇದರಲ್ಲಿ ಭಾಗವಹಿಸಿದ್ದ ಗೌರವಾರ್ಥ ಕನ್ನಡ ಕಣ್ಮಣಿ ಎಂದು 852 ಬಾರಿ ಪೋಸ್ಟ್ ಕಾರ್ಡ್ ನಲ್ಲಿ ಒಂದು ವಾರದಲ್ಲಿಯೇ ಬರೆದಿದ್ದಾಳೆ. ಇದನ್ನು ಲಿಮ್ಕಾ ಬುಕ್ ಆಫ್ ರೆಕಾರ್ಡ್ಸ್ ಗೆ ಸೇರಿಸಲು ಅರ್ಜಿ ಸಲ್ಲಿಸಲಿದ್ದಾಳೆ.

Related Stories

No stories found.

Advertisement

X
Kannada Prabha
www.kannadaprabha.com