ಚಿದಂಬರಂ ಬಂಧನದ ಹಿಂದೆ ದ್ವೇಷ ರಾಜಕಾರಣವಿಲ್ಲ: ಮೈಸೂರಿನಲ್ಲಿ ನಿರ್ಮಲಾ ಸೀತಾರಾಮನ್ ಹೇಳಿಕೆ

ಚಿದಂಬರಂ ಬಂಧನ ರಾಜಕೀಯ ದ್ವೇಷದಿಂದ ಸಂಭವಿಸಿದ್ದಲ್ಲ. ಈ ಪ್ರಕರಣಕ್ಕೂ ಸರ್ಕಾರಕ್ಕೂ ಸಂಬಂಧವಿಲ್ಲ. ಸಿಬಿಐ ಹಾಗೂ ಇಡಿ ಇಲಾಖೆ ಅಧಿಕಾರಿಗಳು ಅವರ ಜವಾಬ್ದಾರಿಯನ್ನಷ್ಟೆ ನಿರ್ವಹಿಸಿದ್ದಾರೆ ಎಂದು ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ..

Published: 23rd August 2019 08:38 AM  |   Last Updated: 23rd August 2019 08:38 AM   |  A+A-


Nirmala Sitaraman

ನಿರ್ಮಲಾ ಸೀತಾರಾಮನ್

Posted By : Shilpa D
Source : The New Indian Express

ಮೈಸೂರು: ಚಿದಂಬರಂ ಬಂಧನ ರಾಜಕೀಯ ದ್ವೇಷದಿಂದ ಸಂಭವಿಸಿದ್ದಲ್ಲ. ಈ ಪ್ರಕರಣಕ್ಕೂ ಸರ್ಕಾರಕ್ಕೂ ಸಂಬಂಧವಿಲ್ಲ. ಸಿಬಿಐ ಹಾಗೂ ಇಡಿ ಇಲಾಖೆ ಅಧಿಕಾರಿಗಳು ಅವರ ಜವಾಬ್ದಾರಿಯನ್ನಷ್ಟೆ ನಿರ್ವಹಿಸಿದ್ದಾರೆ ಎಂದು ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಕಾಂಗ್ರೆಸ್ ಪಕ್ಷದ ಎಲ್ಲಾ ಟೀಕೆಗಳಿಗೂ ಸ್ಪಷ್ಟೀಕರಣ ನೀಡಿದ್ದಾರೆ.

ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕಾಂಗ್ರೆಸ್ ಮುಖಂಡರು ಜವಾಬ್ದಾರಿಯುತವಾಗಿ ನಡೆದುಕೊಳ್ಳಬೇಕು. ಕಾಂಗ್ರೆಸ್ ಮಾಡುತ್ತಿರುವ ಆರೋಪಗಳು ನಿರಾಧಾರ . ಸಿಬಿಐ ಎಲ್ಲಾ ಮಾಹಿತಿ ಕಲೆ ಹಾಕುವವರೆಗೂ ಸುಮ್ಮನಿರಬೇಕು. ಸುಖಾಸುಮ್ಮನೆ ಆರೋಪ ಮಾಡುವುದು ಕಾಂಗ್ರೆಸ್ ಪಕ್ಷಕ್ಕೆ ಶೋಭೆ ತರುವುದಿಲ್ಲ ಎಂದು ತಿಳಿಸಿದ್ದಾರೆ.

ಸಿಬಿಐ ಮತ್ತು ಜಾರಿ ನಿರ್ದೇಶನಾಲಯ (ಇಡಿ) ಸಂಸ್ಥೆಗಳನ್ನು ಕಾಂಗ್ರೆಸ್ ಅಧಿಕಾರದಲ್ಲಿದ್ದಾಗ ಯಾವ ರೀತಿ ಬಳಸಿಕೊಂಡಿತ್ತು ಎಂದು ನೆನಪು ಮಾಡಿಕೊಳ್ಳಲಿ ಎಂದು ಗುಡುಗಿದರು.

ಇದೇ ವೇಳೆ ಜಿಎಸ್‍ಟಿ ಹಾಗೂ ಇತರೆ ತೆರಿಗೆ ವಿಚಾರವಾಗಿ ಮಾತನಾಡಿದ ಅವರು, ಈ ಸಂಬಂಧ ಮೂರನೇ ಸಭೆ ನಡೆಸಿದ್ದೇನೆ. ಗುಜರಾತ್, ವಾರಣಾಸಿ ನಂತರ ಮೂರನೇ ಸಭೆ ಮೈಸೂರಿನಲ್ಲಿ ನಡೆಸಿದ್ದೇನೆ. ಈ ಮೂಲಕ ಸಂಬಂಧ ಪಟ್ಟ ಅಧಿಕಾರಿಗಳಿಂದ ಅಭಿಪ್ರಾಯ ಹಾಗೂ ಮಾಹಿತಿ ಸಂಗ್ರಹ ಮಾಡುತ್ತಿದ್ದೇನೆ ಎಂದರು.

ತೆರಿಗೆಗೆ ಸಂಬಂಧಿಸಿದ ಎಲ್ಲಾ ಪ್ರಕ್ರಿಯೆಗಳು ಮುಖಾಮುಖಿ ರಹಿತವಾಗಿ ನಡೆಯಬೇಕು. ಈ ವ್ಯವಸ್ಥೆಯನ್ನು ವಿಜಯದಶಮಿ ದಿನದಂದು ಪೂರ್ಣಪ್ರಮಾಣದಲ್ಲಿ ಚಾಲನೆ ಮಾಡಲಾಗುವುದು. ಈ ನಿಟ್ಟಿನಲ್ಲಿ ತಂತ್ರಜ್ಞಾನವನ್ನು ಸಂರ್ಪಕವಾಗಿ ಬಳಸಿಕೊಳ್ಳಾಗುತ್ತಿದೆ. ಈ ಮೂಲಕ ಎಲ್ಲ ರೀತಿಯ ತೆಗರಿಗೆ ವಿವರಗಳ ಪರಿಶೀಲನೆ ಆನ್‍ಲೈನ್ ಮೂಲಕವೇ ನಡೆಯಲಿದೆ ಎಂದು ತಿಳಿಸಿದರು. 

Stay up to date on all the latest ರಾಜ್ಯ news with The Kannadaprabha App. Download now
facebook twitter whatsapp