ಬೆಂಗಳೂರು-ಮಂಗಳೂರು ಮಧ್ಯೆ ಆ.25ರಿಂದ ರೈಲು ಸಂಚಾರ ಪುನರಾರಂಭ 

ಭೂಕುಸಿತ ಮತ್ತು ಪ್ರವಾಹದಿಂದ ಸ್ಥಗಿತಗೊಂಡಿದ್ದ ಬೆಂಗಳೂರು-ಮಂಗಳೂರು ನಡುವೆ ರೈಲ್ವೆ ಸಂಚಾರ ಇದೇ 25ರಿಂದ ಆರಂಭವಾಗುವ ಸಾಧ್ಯತೆಯಿದೆ. ಸಂಚಾರ ಸ್ಥಗಿತಗೊಂಡ ಕೂಡಲೇ ಹಳಿ ದುರಸ್ತಿ ಮಾಡುವ ಕಾರ್ಯ ನಡೆಸಲಾಗಿತ್ತು. 
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ಮಂಗಳೂರು: ಭೂಕುಸಿತ ಮತ್ತು ಪ್ರವಾಹದಿಂದ ಸ್ಥಗಿತಗೊಂಡಿದ್ದ ಬೆಂಗಳೂರು-ಮಂಗಳೂರು ನಡುವೆ ರೈಲ್ವೆ ಸಂಚಾರ ಇದೇ 25ರಿಂದ ಆರಂಭವಾಗುವ ಸಾಧ್ಯತೆಯಿದೆ. ಸಂಚಾರ ಸ್ಥಗಿತಗೊಂಡ ಕೂಡಲೇ ಹಳಿ ದುರಸ್ತಿ ಮಾಡುವ ಕಾರ್ಯ ನಡೆಸಲಾಗಿತ್ತು.


ಹಳಿ ದುರಸ್ತಿ ಕಾರಣದಿಂದ ಈ ರೈಲುಗಳ ಸಂಚಾರವನ್ನು ರದ್ದುಪಡಿಸಲಾಗಿದೆ. ಅವುಗಳೆಂದರೆ ಕಾರವಾರ-ಯಶವಂತಪುರ ರೈಲು ಸಂಖ್ಯೆ 16516 ಸಂಚಾರ ನಾಳೆ, ಕಣ್ಣೂರು-ಕಾರವಾರದಿಂದ ಕೆಎಸ್ಆರ್ ಬೆಂಗಳೂರು ಎಕ್ಸ್ ಪ್ರೆಸ್ ರೈಲು ಸಂಖ್ಯೆ 16518/16524 ಸಂಚಾರ ಕೂಡ ಇಂದು ಮತ್ತು ನಾಳೆ ಸಂಚಾರ ಇಲ್ಲ. 


ರೈಲು ಸಂಖ್ಯೆ 16511/16513 ಕೆಎಸ್ಆರ್ ಬೆಂಗಳೂರಿನಿಂದ ಕಣ್ಣೂರು/ಕಾರವಾರ ಎಕ್ಸ್ ಪ್ರೆಸ್ ಇಂದು ಮತ್ತು ನಾಳೆ, ರೈಲು ಸಂಖ್ಯೆ 16575 ಯಶವಂತಪುರದಿಂದ ಮಂಗಳೂರು ಜಂಕ್ಷನ್ ಎಕ್ಸ್ ಪ್ರೆಸ್ ನಾಡಿದ್ದು 25ರಂದು, ರೈಲು ಸಂಖ್ಯೆ 16585 ಯಶವಂತಪುರದಿಂದ ಮಂಗಳೂರು ಎಕ್ಸ್ ಪ್ರೆಸ್ ಸಂಚಾರ ಕೂಡ 25ರಂದು ರದ್ದಾಗಲಿದೆ. 


ರೈಲು ಸಂಖ್ಯೆ 16514 ಕಾರವಾರದಿಂದ ಕೆಎಸ್ಆರ್ ಬೆಂಗಳೂರು ಎಕ್ಸ್ ಪ್ರೆಸ್ ಆಗಸ್ಟ್ 25ರಂದು ಭಾಗಶಃ ಅಂದರೆ ಕಾರವಾರದಿಂದ ಮಂಗಳೂರು ಸೆಂಟ್ರಲ್ ವರೆಗೆ ಸಂಚಾರ ರದ್ದಾಗಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com