ಮಾಜಿ ಭೂಗತ ದೊರೆ ಮುತ್ತಪ್ಪ ರೈ ಆರೋಗ್ಯದಲ್ಲಿ ಏರುಪೇರು: ಏಮ್ಸ್ ನಲ್ಲಿ ಚಿಕಿತ್ಸೆ

ಮಾಜಿ ಭೂಗತ ಪಾತಕಿ  ರಿಯಲ್ ಎಸ್ಟೇಟ್ ಉದ್ಯಮಿ ಮುತಪ್ಪ ರೈ ಅವರನ್ನು ದೆಹಲಿಯ ಅಖಿಲ ಭಾರತ ವೈದ್ಯಕೀಯ ವಿಜ್ಞಾನ ಸಂಸ್ಥೆ ಆಸ್ಪತ್ರೆಗೆ ದಾಖಲಿಸಲಾಗಿದೆ.

Published: 24th August 2019 03:19 PM  |   Last Updated: 24th August 2019 03:19 PM   |  A+A-


ಮುತಪ್ಪ ರೈ

Posted By : Raghavendra Adiga
Source : The New Indian Express

ಮಾಜಿ ಭೂಗತ ಪಾತಕಿ  ರಿಯಲ್ ಎಸ್ಟೇಟ್ ಉದ್ಯಮಿ ಮುತಪ್ಪ ರೈ ಅವರನ್ನು ದೆಹಲಿಯ ಅಖಿಲ ಭಾರತ ವೈದ್ಯಕೀಯ ವಿಜ್ಞಾನ ಸಂಸ್ಥೆ ಆಸ್ಪತ್ರೆಗೆ ದಾಖಲಿಸಲಾಗಿದೆ.

ರೈ ಅವರ ಕುಟುಂಬಕ್ಕೆ ಹತ್ತಿರವಾಗಿರುವ ಮೂಲಗಳು ಪತ್ರಿಕೆಗೆ ಈ ಸುದ್ದಿಯನ್ನು ಖಚಿತಪಡಿಸಿದೆ. "ರೈ ಸ್ತುತ ಏಮ್ಸ್ ನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಹಾಗೂ ಚೇತರಿಸಿಕೊಳ್ಳುತ್ತಿದ್ದಾರೆ" ಕುಟುಂಬದ ಬಲ್ಲ ಮೂಲಗಳಿಂದ ತಿಳಿದುಬಂದಿದೆ. ಆದರೆ ರೈ ಅವರ ಆರೋಗ್ಯದ ಏರುಪೇರಿಗೆ ಕಾರಣವೇನೆಂದು ಅವರು ಬಹಿರಂಗಪಡಿಸಿಲ್ಲ.

ಕಳೆದ ವರ್ಷ ಆಯುಧ ಪೂಜೆಯ ವೇಳೆ ತಮ್ಮ ಮನೆಯಲ್ಲಿನ ಶಸ್ತ್ರಾಸ್ತ್ರ ಸಂಗ್ರಹದಲ್ಲಿ  ಪೂಜೆ ನಡೆಸುತ್ತಿರುವ ರೈ ಅವರ ವೀಡಿಯೋ ಒಂದು ಸಾಮಾಜಿಕ ತಾಣಗಳಲ್ಲಿ ಸದ್ದು ಮಾಡಿತ್ತು. ಇದಕ್ಕೆ ಸಂಬಂಧಿಸಿ ರೈ 2018 ರಲ್ಲಿ ಬೆಂಗಳೂರಿನ ಸಂಘಟಿತ ಅಪರಾಧ ವಿಭಾಗದ ಅಧಿಕಾರಿಗಳ ಮುಂದೆ ಹಾಜರಾಗಿ ವಿಚಾರಣೆ ಎದುರಿಸಿದ್ದರು.

ದಕ್ಷಿಣ ಕನ್ನಡ ಜಿಲ್ಲೆಯವರಾದ ಮುತ್ತಪ್ಪ ರೈ ಹಿಂದೊಮ್ಮೆ ಭೂಗತ ಸಾಮ್ರಾಜ್ಯದ ದೊರೆಯಾಗಿ ಮೆರೆದಿದ್ದರು. ಕೆಲ ವರ್ಷಗಳ ಹಿಂದೆ ಪುತ್ತೂರು ಮಹಾಲಿಂಗೇಶ್ವರ ದೇವರಿಗೆ ಹೊಸದಾಗಿ ರಥವನ್ನು ಮಾಡಿಸಿಕೊಟ್ಟಿದ್ದರು.

Stay up to date on all the latest ರಾಜ್ಯ news
Poll
RBI

ಕಾರ್ಪೊರೇಟ್‌ ಕಂಪನಿಗಳಿಗೆ ಬ್ಯಾಂಕ್‌ ಆರಂಭಿಸಲು ಅನುಮತಿಸುವಂತೆ ಕೇಂದ್ರ ಸರ್ಕಾರಕ್ಕೆ ಆರ್ ಬಿಐ ನೀಡಿರುವ ಸಲಹೆಯನ್ನು ಸ್ವಾಗತಿಸುತ್ತೀರಾ?


Result
ಹೌದು
ಇಲ್ಲ
ಗೊತ್ತಿಲ್ಲ
flipboard facebook twitter whatsapp