ಬೆಂಗಳೂರು: ಮಗ ಸೊಸೆ ಕಿರುಕುಳ ನೀಡುತ್ತಿದ್ದಾರೆ ಎಂದು ಆರೋಪಿಸಿ ವೃದ್ಧ ದಂಪತಿ ಆತ್ಮಹತ್ಯೆ 

ಮನೆಯ ಗೋಡೆ ಮೇಲೆ ಡೆತ್ ನೋಟ್ ಬರೆದಿಟ್ಟು ವೃದ್ಧ ದಂಪತಿ ಆತ್ಮಹತ್ಯೆ ಮಾಡಿಕೊಂಡ ಘಟನೆ ಬೆಂಗಳೂರಿನ ಗಿರಿನಗರದಲ್ಲಿ ನಡೆದಿದೆ. 
 

Published: 25th August 2019 11:31 AM  |   Last Updated: 25th August 2019 11:31 AM   |  A+A-


Representational image

ಸಾಂದರ್ಭಿಕ ಚಿತ್ರ

Posted By : Sumana Upadhyaya
Source : The New Indian Express

ಬೆಂಗಳೂರು: ಮನೆಯ ಗೋಡೆ ಮೇಲೆ ಡೆತ್ ನೋಟ್ ಬರೆದಿಟ್ಟು ವೃದ್ಧ ದಂಪತಿ ಆತ್ಮಹತ್ಯೆ ಮಾಡಿಕೊಂಡ ಘಟನೆ ಬೆಂಗಳೂರಿನ ಗಿರಿನಗರದಲ್ಲಿ ನಡೆದಿದೆ. 


ಮಗ ಮತ್ತು ಸೊಸೆಯಿಂದ ಕಿರುಕುಳ, ಹಿಂಸೆಯನ್ನು ತಾಳಲಾರದೆ ಈ ಕ್ರಮ ತೆಗೆದುಕೊಂಡಿರುವುದಾಗಿ ಡೆತ್ ನೋಟ್ ನಲ್ಲಿ ಬರೆದಿಟ್ಟು ವೃದ್ಧ ದಂಪತಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.


ಮೃತರನ್ನು ಬಿಇಎಲ್ ಮಾಜಿ ನೌಕರ 70 ವರ್ಷದ ಕೃಷ್ಣಮೂರ್ತಿ ಮತ್ತು ಅವರ ಪತ್ನಿ 68 ವರ್ಷದ ಸ್ವರ್ಣ ಎಂದು ಗುರುತಿಸಲಾಗಿದ್ದು ಗಿರಿನಗರ ಮುಖ್ಯ ರಸ್ತೆಯ ನಿವಾಸಿಗಳಾಗಿದ್ದರು. ಸ್ವರ್ಣ ವಿಷ ಸೇವಿ ಆತ್ಮಹತ್ಯೆ ಮಾಡಿಕೊಂಡರೆ ಕೃಷ್ಣಮೂರ್ತಿ ವಿಷ ಸೇವಿಸಿ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.


ಸಾಫ್ಟ್ ವೇರ್ ಎಂಜಿನಿಯರ್ ಆಗಿರುವ ಮಗ ಮತ್ತು ಸೊಸೆ ವೈಟ್ ಫೀಲ್ಡ್ ನ ಖಾಸಗಿ ಕಂಪೆನಿಯಲ್ಲಿ ಕೆಲಸ ಮಾಡುತ್ತಿದ್ದು ಮೊನ್ನ ಶುಕ್ರವಾರ ರಾತ್ರಿ 10.30ರ ಸುಮಾರಿಗೆ ಕೆಲಸ ಮುಗಿಸಿಕೊಂಡು ಮನೆಗೆ ಹಿಂತಿರುಗಿ ಬಂದು ನೋಡಿದಾಗ ಘಟನೆ ಬೆಳಕಿಗೆ ಬಂದಿದೆ. ಕಾಲಿಂಗ್ ಬೆಲ್ ಒತ್ತಿದರೆ ವೃದ್ಧ ದಂಪತಿ ಬಾಗಿಲು ತೆಗೆಯಲಿಲ್ಲ, ಬಾಗಿಲು ಬಡಿದರೂ ಪ್ರತಿಕ್ರಿಯೆ ಬರಲಿಲ್ಲ. ಆಗ ಕಿಟಕಿ ಮೂಲಕ ನೋಡಿದಾಗ ಆತ್ಮಹತ್ಯೆ ಮಾಡಿಕೊಂಡಿರುವುದು ಬೆಳಕಿಗೆ ಬಂದಿದೆ.


ಸಾಯುವುದಕ್ಕೆ ಮೊದಲು ಕೃಷ್ಣಮೂರ್ತಿ ಗೋಡೆಯಲ್ಲಿ ಡೆತ್ ನೋಟ್ ಬರೆದು ಅಂಟಿಸಿದ್ದರು. ಅದರಲ್ಲಿ ನಮ್ಮ ಸಾವಿಗೆ ಮಗ ಮತ್ತು ಸೊಸೆಯ ಕುರುಕುಳವೇ ಕಾರಣ, ನಾವು ತೀವ್ರ ನೊಂದು ಹೋಗಿದ್ದೇವೆ ಎಂದು ಬರೆದಿದ್ದರು.


ಸ್ವರ್ಣ ಸ್ಪೈನಲ್ ಕಾರ್ಡ್ ನೋವಿನಿಂದ ಬಳಲುತ್ತಿದ್ದು ಸಂಪೂರ್ಣ ಹಾಸಿಗೆ ಹಿಡಿದಿದ್ದರು. ಮನೆಕೆಲಸಕ್ಕೆ ಮಹಿಳೆಯರು ಬರುತ್ತಿದ್ದರೂ ಅವರು ಸರಿಯಾಗಿ ಕೆಲಸ ಮಾಡುತ್ತಿಲ್ಲ ಎಂದು ಪದೇ ಪದೇ ಕೆಲಸದಿಂದ ತೆಗೆದುಹಾಕುತ್ತಿದ್ದರು. ಕೃಷ್ಣಮೂರ್ತಿಯವರೇ ಪತ್ನಿಯನ್ನು ನೋಡಿಕೊಳ್ಳುತ್ತಿದ್ದರು. ಈ ದಂಪತಿಯ ಮಗಳು ನಾಗರಬಾವಿಯಿಂದ ಪ್ರತಿದಿನ ಸಂಜೆ ಬಂದು ನೋಡಿಕೊಂಡು ಹೋಗುತ್ತಿದ್ದರು. 
ದಂಪತಿ ಆತ್ಮಹತ್ಯೆಗೆ ಮುನ್ನ ಪದೇ ಪದೇ ಮಗ-ಸೊಸೆಯ ಜತೆ ಜಗಳವಾಗುತ್ತಿತ್ತು, ತಮ್ಮನ್ನು ವೃದ್ಧಾಶ್ರಮಕ್ಕೆ ಸೇರಿಸುತ್ತಾರೆ ಎಂಬ ಭಯ ಈ ದಂಪತಿಗಿತ್ತು. ಇದರಿಂದಲೇ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎನ್ನಲಾಗುತ್ತಿದೆ. 


ತಮ್ಮ ಸೋದರ ತಂದೆ -ತಾಯಿಯನ್ನು ಚೆನ್ನಾಗಿ ನೋಡಿಕೊಳ್ಳುತ್ತಿದ್ದರು ಎಂದು ದಂಪತಿಯ ಮಗಳು ವೈರುಧ್ಯ ಹೇಳಿಕೆ ನೀಡಿದ್ದಾರೆ.

Stay up to date on all the latest ರಾಜ್ಯ news with The Kannadaprabha App. Download now
facebook twitter whatsapp