ಐಎಂಎ ಹಗರಣ: ಸಿಬಿಐನಿಂದ ಮಾಜಿ ಸಿಎಂ, ಮಾಜಿ ನಗರ ಪೋಲೀಸ್ ಆಯುಕ್ತರ ತನಿಖೆ?

ಬಹುಕೋಟಿ ಐ ಮಾನಿಟರಿ ಅಡ್ವೈಸರಿ (ಐಎಂಎ) ಹಗರಣದ ತನಿಖೆ ನಡೆಸಿರುವ ಕೇಂದ್ರೀಯ ತನಿಖಾ ದಳ ರಾಜ್ಯದ ಮಾಜಿ ಮುಖ್ಯಮಂತ್ರಿ, ಮಾಜಿ ಬೆಂಗಳೂರು ನಗರ ಪೊಲೀಸರನ್ನು ಪ್ರಶ್ನಿಸುವ ಸಾಧ್ಯತೆ ಇದೆ.

Published: 25th August 2019 09:10 AM  |   Last Updated: 25th August 2019 09:10 AM   |  A+A-


ಮನ್ಸೂರ್ ಅಲಿ ಖಾನ್

Posted By : Raghavendra Adiga
Source : The New Indian Express

ಬಹುಕೋಟಿ ಐ ಮಾನಿಟರಿ ಅಡ್ವೈಸರಿ (ಐಎಂಎ) ಹಗರಣದ ತನಿಖೆ ನಡೆಸಿರುವ ಕೇಂದ್ರೀಯ ತನಿಖಾ ದಳ ರಾಜ್ಯದ ಮಾಜಿ ಮುಖ್ಯಮಂತ್ರಿ, ಮಾಜಿ ಬೆಂಗಳೂರು ನಗರ ಪೊಲೀಸರನ್ನು ಪ್ರಶ್ನಿಸುವ ಸಾಧ್ಯತೆ ಇದೆ.

ಪ್ರಕರಣವನ್ನು ಸಿಬಿಐಗೆ ಹಸ್ತಾಂತರಿಸಿದ ಐದು ದಿನಗಳ ನಂತರ, ಈ ಹಗರಣದ ಬಗ್ಗೆ ಇದುವರೆಗೆ ತನಿಖೆ ನಡೆಸುತ್ತಿದ್ದ ವಿಶೇಷ ತನಿಖಾ ತಂಡ (ಎಸ್‌ಐಟಿ) ಆರೋಪಿ ಮತ್ತು ಸಾಕ್ಷಿಗಳ ಹೇಳಿಕೆಗಳನ್ನು ಸಂಗ್ರಹಿಸುವಲ್ಲಿ ನಿರತವಾಗಿದೆ. ಇಡೀ ಪ್ರಕರಣದ ಸಂಬಂಧ 15-20,000 ಪುಟಗಳ ದಾಖಲೆ ಸಿದ್ದಪಡಿಸಲಾಗಿದೆ.ಸೆಪ್ಟೆಂಬರ್ 9 ರಂದು ಚಾರ್ಜ್‌ಶೀಟ್ ಸಲ್ಲಿಸುವ ನಿರೀಕ್ಷೆಯಿದೆ.

ಪತ್ರಿಕೆಗೆ ಸಿಕ್ಕಿರುವ ಮಾಹಿತಿ ಆಧಾರದ ಮೇಲೆ  ಹಗರಣದ ಕಿಂಗ್‌ಪಿನ್ ಮತ್ತು ಐಎಂಎ ನಿರ್ದೇಶಕ ಮೊಹಮ್ಮದ್ ಮನ್ಸೂರ್ ಅಲಿ ಖಾನ್ ಅವರು ಎಸ್‌ಐಟಿಗೆ ನೀಡಿದ ಹೇಳಿಕೆಯಲ್ಲಿ, 2018 ರ ಚುನಾವಣೆಗೆ ಮುನ್ನ ಮಾಜಿ ಸಿಎಂಗೆ ಹಣವನ್ನು ಕಳುಹಿಸಿದ್ದೇನೆ ಎಂದು ಹೇಳಿದ್ದಾರೆ ಅಲ್ಲದೆ ಮಹಾನಗರದ ಮಾಜಿ  ಪೊಲೀಸ್ ಆಯುಕ್ತರು.ಸಹ ಹಣ ಪಡೆದಿದ್ದಾರೆ ಎನ್ನಲಾಗಿದೆ.  "ಮೂರು ಜನರ ಮೂಲಕ ಮಾಜಿ ಸಿಎಂಗೆ 5 ಕೋಟಿ ರೂ. ಕಳುಹಿಸಲಾಗಿದೆ ಎಂದು ಖಾನ್ ಹೇಳಿದ್ದಾರೆ. ಅವರು ಇತರ ರಾಜಕಾರಣಿಗಳು ಮತ್ತು ಅಧಿಕಾರಿಗಳನ್ನೂ ಹೆಸರಿಸಿದ್ದಾರೆ. ಎಲ್ಲಾ ಹೇಳಿಕೆಗಳನ್ನು ಸಿಬಿಐಗೆ ಸಲ್ಲಿಸಲಾಗುವುದು.ನಾವು ಅವರೆಲ್ಲಾ ಹೇಳಿಕೆಗಳನ್ನು ಸಂಗ್ರಹಿಸಿ ವರದಿ ತಯಾರಿಸುತ್ತಿದ್ದು  ವರದಿಯು 20,000 ಪುಟಗಳವರೆಗೆ ಬರಬಹುದು ”ಎಂದು ಎಸ್‌ಐಟಿಯ ಹಿರಿಯ ಅಧಿಕಾರಿಯೊಬ್ಬರು ಹೇಳಿದರು. ಇನ್ನು ಖಾನ್ ಓರ್ವ ಆರೋಪಿ ಅವನೇನು ಹೇಳಿಕೆಗಳನ್ನೂ ನೀಡಬಹುದು ಆದರೆ ಸತ್ಯವನ್ನು ನಾವು ಪರಿಶೀಲಿಸಬೇಕಾಗಿದೆ ಎಂದು ವಿಚಾರಣಾಧಿಕಾರಿಯೊಬ್ಬರು ಹೇಳಿದರು.

ಇನ್ನು ಬಿಜೆಪಿಯ ಹಿರಿಯ ನಾಯಕರಿಗೆ ಸಹ ಗೆ ನಿಜಾಮುದ್ದೀನ್ ಮೂಲಕ ಹಣ ಪಾವತಿಸಿದ್ದೇನೆ ಎಂದು ಖಾನ್ ತಮ್ಮ ಹೇಳಿಕೆಯಲ್ಲಿ ಆರೋಪಿಸಿದ್ದಾರೆ. ಆದರೆ, ಎಸ್‌ಐಟಿ ನಿಜಾಮುದ್ದೀನ್‌ರನ್ನು ಪ್ರಶ್ನಿಸಿದಾಗ, ಅವರು ಅದನ್ನು ನಿರಾಕರಿಸಿದ್ದರು. "ಇವುಗಳನ್ನು ಸಿಬಿಐ ಪರಿಶೀಲಿಸಬೇಕಾಗಿದೆ" ಎಂದು ಎಸ್ಐಟಿ ಅಧಿಕಾರಿಗಳು ತಿಳಿಸಿದ್ದಾರೆ. ಐಪಿಎಸ್ ಅಧಿಕಾರಿ ತನ್ನಿಂದ 25 ಕೋಟಿ ರೂ. ಬೇಡಿಕೆ ಇಟ್ಟಿದ್ದರಿಂದ ಬೆಂಗಳೂರಿನಿಂದ ಪರಾರಿಯಾಗಿದ್ದಾಗಿಮನ್ಸೂರ್ ಹೇಳಿದ್ದಾರೆ. “ಅಧಿಕಾರಿಯೊಂದಿಗೆ ಯಾರು ಇದ್ದಾರೆ ಎಂದು ಕೇಳಿದಾಗ, ಮನ್ಸೂರ್ ಅವರು ಕೇವಲ ಇಬ್ಬರು ಮಾತ್ರ ಎಂದು ಹೇಳಿದರು. ಆದರೆ ಅದನ್ನು ಖಾತರಿ ಪಡಿಸಲು ಯಾವ ಪುರಾವೆಗಳಿಲ್ಲ.ಅಲ್ಲದೆ ಹಲವಾರು ಟಿವಿ ಚಾನಲ್ ಗಳಿಗೆ ಸಹ ಕೋಟಿ ಕೋಟಿ ರು. ಪಾವತಿಸಲಾಗಿದೆ ಎಂದು ಖಾನ್ ತನಿಖೆ ವೇಳೆ ಬಾಯಿ ಬಿಟ್ಟಿದ್ದಾನೆ.

ಸಧ್ಯ  ಎಸ್‌ಐಟಿ ಈ ಪ್ರಕರಣದ ಹೆಚ್ಚಿನ ತನಿಖೆಯನ್ನು ನಿಲ್ಲಿಸಿದೆ. ಈವರೆಗೆ ನಡೆದ ತನಿಖೆಯ ಬಗ್ಗೆ ಕೇಂದ್ರ ಸಂಸ್ಥೆಗೆ ವಿವರವಾದ ವರದಿಯನ್ನು ನೀಡಬೇಕಾಗುತ್ತದೆ. “ಮಹಜರ್ ಗಳಿಂಡ ಹಿಡಿದು ಹೇಳಿಕೆಗಳವರೆಗೆ ಎಲ್ಲವನ್ನೂ ದಾಖಲಿಸಬೇಕಾಗಿದೆ. ಇದು ಬಹಳಷ್ಟು ಕಾಗದದ ಕೆಲಸ. ದಾಖಲೆಗಳನ್ನು ಆದಷ್ಟು ಬೇಗ ಅವರಿಗೆ ಸಲ್ಲಿಸುವಂತೆ ಕೇಳಿಕೊಳ್ಳಲಾಗಿದೆ, ”ಎಂದು ಅಧಿಕಾರಿ ಹೇಳಿದರು. ಈವರೆಗೆ ಎಸ್‌ಐಟಿಯಿಂದ ತನಿಖೆ ನಡೆಸಲಾಗಿದ್ದು, ಸೆಪ್ಟೆಂಬರ್ 9ಕ್ಕೆ ಅದನ್ನು ನ್ಯಾಯಾಲಯಕ್ಕೆ ಸಲ್ಲಿಸಲು ಕೊನೆಯ ದಿನವಾದ್ದರಿಂದ ಕೇಂದ್ರ ಸಂಸ್ಥೆ ಚಾರ್ಜ್‌ಶೀಟ್ ಸಲ್ಲಿಸುವುದಿಲ್ಲ.ಸಿಬಿಐ ಕೈಯಲ್ಲಿ ಕಡಿಮೆ ಸಮಯ ಇರುವುದರಿಂದ ಎಸ್‌ಐಟಿ ಚಾರ್ಜ್‌ಶೀಟ್ ಸಲ್ಲಿಸಬೇಕಾಗುತ್ತದೆ. ಇಡೀ ಕೇಸ್ ಫೈಲ್ ಕನ್ನಡದಲ್ಲಿದೆ ಮತ್ತು ಸಿಬಿಐ ಅದನ್ನು ಮಾಡಬೇಕಾದರೆ, ಅವರು ಅನುವಾದವನ್ನು ಮಾಡಬೇಕಾಗುತ್ತದೆ, ಅದು ಅವರಿಗೆ ಕಷ್ಟಕರವಾಗಿರುತ್ತದೆ ”ಎಂದು ಮತ್ತೊಬ್ಬ ಅಧಿಕಾರಿ ಹೇಳಿದರು.

“ಫೋನ್ ಕರೆಗಳನ್ನು ಟ್ರ್ಯಾಕ್ ಮಾಡುವುದು, ಕರೆ ದಾಖಲೆಗಳನ್ನು ಹಿಂಪಡೆಯುವುದು, ವಾಟ್ಸಾಪ್ ಸಂದೇಶಗಳು ಮತ್ತು ಕರೆಗಳನ್ನು ಪರಿಶೀಲಿಸುವುದು ಸೇರಿ ಅನೇಕ ಕಾರ್ಯಗಳಿದ್ದು ಇದು ನಮಗೆ  ಕಠಿಣ ಕಾರ್ಯವಾಗಿದೆ. ಸಾಕಷ್ಟು ಕೆಲಸ ಮಾಡಲಾಗಿದೆ ”ಎಂದು ಅಧಿಕಾರಿ ಹೇಳಿದ್ದಾರೆ.

Stay up to date on all the latest ರಾಜ್ಯ news with The Kannadaprabha App. Download now
facebook twitter whatsapp