ತಮಿಳುನಾಡಿಗೆ 6 ಲಷ್ಕರ್ ಉಗ್ರರ ಎಂಟ್ರಿ: ಕರ್ನಾಟಕ ಕರಾವಳಿಯಲ್ಲಿ ಹೈ ಅಲರ್ಟ್

ಉಗ್ರ ಸಂಘಟನೆ ಲಷ್ಕರ್-ಎ-ತೊಯ್ಬಾ ಗೆ ಸೇರಿದ ಆರು ಭಯೋತ್ಪಾದಕರು ನೆರೆಯ ತಮಿಳುನಾಡಿಗೆ ನುಸುಳಿರುವ ಬಗ್ಗೆ ಗುಪ್ತಚರ ವರದಿ ದೊರೆತ ನಂತರ  ಕರ್ನಾಟಕದ ಕರಾವಳಿಯಲ್ಲಿ ಭದ್ರತೆ ಹೆಚ್ಚಿಸಲಾಗಿದೆ.ಜನರು ಎಚ್ಚರದಿಂದಿರಬೇಕೆಂದು ಉಡುಪಿಯ ಮಲ್ಪೆ ಪೋಲೀಸರು ಸಾರ್ವಜನಿಕ ಪ್ರಕಟಣೆ ಹೊರಡಿಸಿದ್ದಾರೆ.

Published: 26th August 2019 09:38 AM  |   Last Updated: 26th August 2019 09:38 AM   |  A+A-


ಸಂಗ್ರಹ ಚಿತ್ರ

Posted By : Raghavendra Adiga
Source : PTI

ಉಡುಪಿ: ಉಗ್ರ ಸಂಘಟನೆ ಲಷ್ಕರ್-ಎ-ತೊಯ್ಬಾ ಗೆ ಸೇರಿದ ಆರು ಭಯೋತ್ಪಾದಕರು ನೆರೆಯ ತಮಿಳುನಾಡಿಗೆ ನುಸುಳಿರುವ ಬಗ್ಗೆ ಗುಪ್ತಚರ ವರದಿ ದೊರೆತ ನಂತರ  ಕರ್ನಾಟಕದ ಕರಾವಳಿಯಲ್ಲಿ ಭದ್ರತೆ ಹೆಚ್ಚಿಸಲಾಗಿದೆ.ಜನರು ಎಚ್ಚರದಿಂದಿರಬೇಕೆಂದು ಉಡುಪಿಯ ಮಲ್ಪೆ ಪೋಲೀಸರು ಸಾರ್ವಜನಿಕ ಪ್ರಕಟಣೆ ಹೊರಡಿಸಿದ್ದಾರೆ.

ಸಾರ್ವಜನಿಕ ಪ್ರಕಟಣೆಯಲ್ಲಿ ಉಡುಪಿಯ ಮಲ್ಪೆ ಪ್ರದೇಶದ ಜನರು ಜಾಗರೂಕರಾಗಿರಿ ಮತ್ತು ಅನುಮಾನಾಸ್ಪದವಾಗಿ ಕಾಣುವ ಯಾವುದೇ ವ್ಯಕ್ತಿಗಳನ್ನು ಕಂಡರೆ ಪೊಲೀಸರಿಗೆ ತಿಳಿಸಿ ಎಂದು ಹೇಳಲಾಗಿದೆ.

ವಿನಾಶಕಾರಿ ಚಟುವಟಿಕೆಗಳನ್ನು ನಡೆಸಲು ಪಾಕಿಸ್ತಾನ ಸೇರಿ ವಿವಿಧಿಡೆಯ  ಆರು ಲಷ್ಕರ್-ಎ-ತೈಬಾ ಭಯೋತ್ಪಾದಕರು ಶ್ರೀಲಂಕಾದಿಂದ ರಾಜ್ಯಕ್ಕೆ ನುಸುಳಿದ್ದಾರೆ ಎಂದು ಗುಪ್ತಚರ ಸಂಸ್ಥೆಗಳು ತಿಳಿಸಿದ ಬೆನ್ನಲ್ಲೇ ತಮಿಳುನಾಡು  ಸರ್ಕಾರ ತೀವ್ರ ಕಟ್ಟೆಚ್ಚರ ವಹಿಸಿದೆ.ಗುಪ್ತಚರ ಮಾಹಿತಿಯ ಆಧಾರದ ಮೇಲೆ ಎಲ್ಲಾ ಪೊಲೀಸ್ ಠಾಣೆಗಳಿಗೆ ಎಚ್ಚರಿಕೆ ರವಾನಿಸಲಾಗಿದೆ ಎಂದು ಸಿಎಸ್ಪಿ  ಮಲ್ಪೆ  ಪೊಲೀಸ್ ಠಾಣೆ ಇನ್ಸ್‌ಪೆಕ್ಟರ್ ಪ್ರಮೋದ್ ಕುಮಾರ್ ಪಿಟಿಐಗೆ ತಿಳಿಸಿದ್ದಾರೆ.

Stay up to date on all the latest ರಾಜ್ಯ news with The Kannadaprabha App. Download now
facebook twitter whatsapp