ಪ್ರೀತಿ ಮಾಯೆ ಹುಷಾರು: ಫೇಸ್‍ಬುಕ್‍ ಗೆಳೆಯನನ್ನ ನೋಡಲು ಭೋಪಾಲ್‍ಗೆ ತೆರಳಿದ ಬೆಂಗಳೂರು ವಿದ್ಯಾರ್ಥಿನಿ, ಏನಾಯ್ತು?

ಫೇಸ್‍ಬುಕ್‍ ಗೆಳೆಯನಿಗೆ ಸರ್ಪ್ರೈಸ್ ನೀಡಲು ಬೆಂಗಳೂರಿನ 10ನೇ ತರಗತಿ ವಿದ್ಯಾರ್ಥಿನಿಯೊಬ್ಬಳು ಭೋಪಾಲ್‍ಗೆ ತೆರಳಿರುವ ಪ್ರಸಂಗವೊಂದು ನಡೆದಿದೆ.
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ

ಬೆಂಗಳೂರು: ಫೇಸ್‍ಬುಕ್‍ ಗೆಳೆಯನಿಗೆ ಸರ್ಪ್ರೈಸ್ ನೀಡಲು ಬೆಂಗಳೂರಿನ 10ನೇ ತರಗತಿ ವಿದ್ಯಾರ್ಥಿನಿಯೊಬ್ಬಳು ಭೋಪಾಲ್‍ಗೆ ತೆರಳಿರುವ ಪ್ರಸಂಗವೊಂದು ನಡೆದಿದೆ.

ಅಪ್ರಾಪ್ತ ಬಾಲಕಿ ತನ್ನ ತಂದೆ ಜೊತೆ ಜಗಳವಾಡಿಕೊಂಡು ಫೇಸ್ ಬುಕ್ ಗೆಳೆಯರ ನೋಡಲು ವಿಮಾನದಲ್ಲಿ ಭೋಪಾಲ್ ಗೆ ಹೋಗಿದ್ದು ಅಲ್ಲಿ ಪೊಲೀಸರ ಕೈಗೆ ಸಿಕ್ಕಿಬಿದ್ದು ಸದ್ಯ ಬೆಂಗಳೂರಿಗೆ ವಾಪಸ್ಸಾಗಿದ್ದಾಳೆ. 

ಮೊದಲಿಗೆ ವಿದ್ಯಾರ್ಥಿನಿ ಹುಡುಗ ಮನೆ ಬಳಿ ಹೋಗಿದ್ದಾಳೆ. ತನ್ನ ಫೇಸ್‍ಬುಕ್‍ ಸ್ನೇಹಿತೆಯನ್ನು ಕಂಡ ಹುಡುಗ ಆಕೆಯನ್ನು ಹೋಟೆಲ್ ಒಂದರಲ್ಲಿ ಬುಕ್ ಮಾಡಿ ಇರಿಸಿದ್ದಾನೆ. ಆಕೆಗೆ ಬುದ್ದಿವಾದ ಹೇಳಿ ವಾಪಸ್ ಮನೆಗೆ ಹೋಗುವಂತೆ ಹೇಳಿದ್ದಾನೆ. ಈ ವೇಳೆ ಹುಡುಗಿ ಕಿರುಚಾಡಿ ಗಲಾಟೆ ಮಾಡಿದ್ದರಿಂದ ಪೊಲೀಸರು ಬಂದು ಆಕೆಯನ್ನು ಮಕ್ಕಳ ಕಲ್ಯಾಣ ಸಮಿತಿಗೆ ಸೇರಿಸಿದ್ದಾರೆ. 

ಸಮಿತಿಯವರು ವಿದ್ಯಾರ್ಥಿನಿಯ ತಂದೆಗೆ ಕರೆ ಮಾಡಿ ಕರೆಸಿಕೊಂಡು ನಂತರ ಆಕೆಯ ಮನವೊಲಿಸಿ ಬೆಂಗಳೂರಿಗೆ ಕಳುಹಿಸಿಕೊಟ್ಟಿದ್ದಾರೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com