ಪ್ಲಾಸ್ಟಿಕ್ ಬಳಕೆ ತಡೆಯದಿದ್ದರೆ ಬಿಬಿಎಂಪಿ ವಿರುದ್ಧ ಕ್ರಿಮಿನಲ್ ಮೊಕದ್ದಮೆ- ಡಾ. ಕೆ. ಸುಧಾಕರ್

ರಾಜಧಾನಿಯಲ್ಲಿ ಪ್ಲಾಸ್ಟಿಕ್ ಬಳಕೆ ನಿಯಂತ್ರಿಸುವಲ್ಲಿ ಕ್ರಮ ಕೈಗೊಳ್ಳದಿದ್ದರೆ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ವಿರುದ್ಧ ಕ್ರಿಮಿನಲ್ ಮೊಕದ್ದಮೆ ಹೂಡಲಾಗುವುದು ಎಂದು ರಾಜ್ಯ ಪರಿಸರ ಮಾಲಿನ್ಯ ನಿಯಂತ್ರಣ ಮಂಡಳಿ ಅಧ್ಯಕ್ಷ ಡಾ. ಕೆ. ಸುಧಾಕರ್ ಎಚ್ಚರಿಕೆ ನೀಡಿದ್ದಾರೆ.
ಡಾ.ಕೆ. ಸುಧಾಕರ್
ಡಾ.ಕೆ. ಸುಧಾಕರ್

ಬೆಂಗಳೂರು: ರಾಜಧಾನಿಯಲ್ಲಿ ಪ್ಲಾಸ್ಟಿಕ್ ಬಳಕೆ ನಿಯಂತ್ರಿಸುವಲ್ಲಿ ಕ್ರಮ ಕೈಗೊಳ್ಳದಿದ್ದರೆ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ವಿರುದ್ಧ ಕ್ರಿಮಿನಲ್ ಮೊಕದ್ದಮೆ ಹೂಡಲಾಗುವುದು ಎಂದು ರಾಜ್ಯ ಪರಿಸರ ಮಾಲಿನ್ಯ ನಿಯಂತ್ರಣ ಮಂಡಳಿ ಅಧ್ಯಕ್ಷ ಡಾ. ಕೆ. ಸುಧಾಕರ್ ಎಚ್ಚರಿಕೆ ನೀಡಿದ್ದಾರೆ.

ಬಿಬಿಎಂಪಿ ಜಂಟಿ ಆಯುಕ್ತರೊಂದಿಗೆ ನಿನ್ನೆ ನಡೆಸಿದ ಸಭೆಯಲ್ಲಿ ಪ್ಲಾಸ್ಟಿಕ್ ಬಳಕೆಯನ್ನು ನಿಯಂತ್ರಿಸಲು ವಿಫಲವಾದರೆ ಕ್ರಮ ಜರುಗಿಸುವ ಆದೇಶ ನೀಡಿರುವುದಾಗಿ ಡಾ. ಸುಧಾಕರ್  ದಿ ನ್ಯೂ ಇಂಡಿಯನ್ ಎಕ್ಸ್ ಪ್ರೆಸ್ ಗೆ ತಿಳಿಸಿದರು. 

ಇದಕ್ಕೂ ಮುನ್ನ ಸಾರ್ವಜನಿಕ ದೂರುಗಳ ಹಿನ್ನೆಲೆಯಲ್ಲಿ  ಬ್ರಿಗೇಡ್ ರಸ್ತೆ, ಸದಾಶಿವನಗರ, ನೇಚರ್ಸ್ ಬ್ಯಾಸ್ಕೆಟ್, ನಾಮ್ ದಾರಿ, ನಿಲಗೀರಿಸ್ ಸೂಪರ್ ಮಾರ್ಕೆಟ್ ಗಳ ಮೇಲೆ ದಾಳಿ  ನಡೆಸಿದ  ಸುಧಾಕರ್, ಪ್ಲಾಸ್ಟಿಕ್ ಬಳಕೆ ಕಂಡು ಗರಂ ಆದರು.  

ದೊಡ್ಡ ದೊಡ್ಡ ಮಳಿಗೆಗಳು ಹಾಗೂ ಕಂಪನಿಗಳು ಮೊದಲು ಕಾನೂನು ಪಾಲಿಸಬೇಕು. ಇವರೇ ಪ್ರಾರಂಭಿಸಿಲ್ಲ ಅಂದರೆ ಇನ್ನಿತರ ಚಿಕ್ಕ ಅಂಗಡಿಗಳು ಹೇಗೆ ಅನುಸರಿಸುತ್ತಾರೆ. ಅಂತಹ ಮಳಿಗೆಗಳಿಗೆ ಎಚ್ಚರಿಕೆ ನೀಡಿದ್ದು, ಬಟ್ಟೆ ಬ್ಯಾಗ್ ಗಳನ್ನು ಬಳಸುವಂತೆ ಎಚ್ಚರಿಕೆ ನೀಡಲಾಗಿದೆ ಎಂದು ತಿಳಿಸಿದರು.

ದಾಳಿ ಕುರಿತಂತೆ ಪ್ರತಿಕ್ರಿಯಿಸಿದ ಬಿಬಿಎಂಪಿ ಜಂಟಿ ಆಯುಕ್ತ ಸರ್ಫರಾಜ್ ಖಾನ್, ಪ್ರತಿನಿತ್ಯ ದಾಳಿ ನಡೆಸುವುದಾಗಿ ತಿಳಿಸಿದರು.  ಈಗಾಗಲೇ ಪ್ಲಾಸ್ಟಿಕ್ ಬಳಕೆಯನ್ನು ರದ್ದುಗೊಳಿಸಲಾಗಿದ್ದು, ಪೇಪರ್ ಬ್ಯಾಗ್ ಮತ್ತು ಬಾಳೆ ಎಲೆಗಳನ್ನು ಬಳಸುತ್ತಿರುವುದಾಗಿ ನೇಚರ್ ಬ್ಯಾಸ್ಕೆಟ್ ಕಂಪನಿಯವರು ಹೇಳಿದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com