ಬೆಂಗಳೂರು: ಕೆಂಪೇಗೌಡ ವಿಮಾನ ನಿಲ್ದಾಣದಲ್ಲಿ ಮಳೆ ನೀರು ಸೋರಿಕೆ, ವಿಡಿಯೋ ವೈರಲ್!

ಧಾರಾಕಾರ ಮಳೆಯಿಂದಾಗಿ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಮೇಲ್ಘಾವಣಿಯಿಂದ ನೀರು ಸೋರುತ್ತಿದ್ದು, ಸಿಬ್ಬಂದಿಗಳು ನೀರನ್ನು ಹೊರ ತಳ್ಳಲು ಪರದಾಡುತ್ತಿರುವ ವಿಡಿಯೋ ಇದೀಗ ವೈರಲ್ ಆಗಿದೆ.
ಕೆಂಪೇಗೌಡ ವಿಮಾನ ನಿಲ್ದಾಣ
ಕೆಂಪೇಗೌಡ ವಿಮಾನ ನಿಲ್ದಾಣ

ಬೆಂಗಳೂರು: ಧಾರಾಕಾರ ಮಳೆಯಿಂದಾಗಿ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಮೇಲ್ಘಾವಣಿಯಿಂದ ನೀರು ಸೋರುತ್ತಿದ್ದು, ಸಿಬ್ಬಂದಿಗಳು ನೀರನ್ನು ಹೊರ ತಳ್ಳಲು ಪರದಾಡುತ್ತಿರುವ ವಿಡಿಯೋ ಇದೀಗ ವೈರಲ್ ಆಗಿದೆ.

ಗುರುವಾರ ರಾತ್ರಿ ದೇವನಹಳ್ಳಿಯಲ್ಲಿ ಸುರಿದ ಮಳೆಯಿಂದಾಗಿ ವಿಮಾನ ನಿಲ್ದಾಣದ ದೇಶೀಯ ನಿರ್ಗಮನ ಗೇಟ್ ಬಳಿ ಸಿಲಿಂಗ್ ನಿಂದ ಮಳೆ ನೀರು ಒಳಗೆ ಸುರಿಯುತ್ತಿದ್ದರಿಂದ ಸಿಬ್ಬಂದಿಗಳು ಪ್ರಯಾಣಿಕರನ್ನು ನಿಲ್ಲಿಸಿ ನೀರನ್ನು ಹೊರಗೆ ತಳ್ಳುತ್ತಿದ್ದಾರೆ. 

ಇದನ್ನು ಪ್ರಯಾಣಿಕರೊಬ್ಬರು ತಮ್ಮ ಮೊಬೈಲ್ ನಲ್ಲಿ ಸೆರೆ ಹಿಡಿದು ಸಾಮಾಜಿಕ ಜಾಲತಾಣಕ್ಕೆ ಪೋಸ್ಟ್ ಮಾಡಿದ್ದು ಈ ವಿಡಿಯೋ ಇದೀಗ ವೈರಲ್ ಆಗಿದೆ. 

ಈ ಸಂಬಂಧ ಪ್ರತಿಕ್ರಿಯಿಸಿರುವ ಬೆಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಲಿಮಿಟೆಡ್ ವಕ್ತಾರ ಸದ್ಯ ಮಳೆ ನೀರು ಸೋರುತ್ತಿದ್ದ ಜಾಗವನ್ನು ಪತ್ತೆ ಮಾಡಿ ಅದನ್ನು ರಿಪೇರಿ ಮಾಡಿದ್ದೇವೆ ಎಂದು ಹೇಳಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com