ಅಕ್ರಮ ಪಬ್ ಮೇಲೆ ಸಿಸಿಬಿ ದಾಳಿ: ಸ್ಯಾಂಡಲ್ ವುಡ್ ನಟ ಸೇರಿ ಮೂವರು ಅರೆಸ್ಟ್!

ಲೇ ಮರಿಡಿಯನ್ ಹೋಟೆಲ್ ನಲ್ಲಿರುವ 'ಶುಗರ್ ಫ್ಯಾಕ್ಟರಿ' ಎಂಬ ಹೆಸರಿನ ಬಾರ್ ಆ್ಯಂಡ್ ರೆಸ್ಟೋರೆಂಟ್ ನಲ್ಲಿ ಅಬಕಾರಿ ಹಾಗೂ ಡಿಸ್ಕೋಥೆಕ್ ನಿಯಮಗಳನ್ನು ಉಲ್ಲಂಘಿಸಿ ಬಾರ್ ಹಾಗೂ ರೆಸ್ಟೋರೆಂಟ್ ನಡೆಸಿದ್ದ ಸ್ಯಾಂಡಲ್ ವುಡ್ ನಟ ಸೇರಿ ಇಬ್ಬರನ್ನು ಸಿಸಿಬಿ ಪೊಲೀಸರು ಬಂಧಿಸಿದ್ದಾರೆ 
ರೋಹನ್ ಗೌಡ
ರೋಹನ್ ಗೌಡ

ಬೆಂಗಳೂರು: ಲೇ ಮರಿಡಿಯನ್ ಹೋಟೆಲ್ ನಲ್ಲಿರುವ 'ಶುಗರ್ ಫ್ಯಾಕ್ಟರಿ' ಎಂಬ ಹೆಸರಿನ ಬಾರ್ ಆ್ಯಂಡ್ ರೆಸ್ಟೋರೆಂಟ್ ನಲ್ಲಿ ಅಬಕಾರಿ ಹಾಗೂ ಡಿಸ್ಕೋಥೆಕ್ ನಿಯಮಗಳನ್ನು ಉಲ್ಲಂಘಿಸಿ ಬಾರ್ ಹಾಗೂ ರೆಸ್ಟೋರೆಂಟ್ ನಡೆಸಿದ್ದ ಸ್ಯಾಂಡಲ್ ವುಡ್ ನಟ ಸೇರಿ ಇಬ್ಬರನ್ನು ಸಿಸಿಬಿ ಪೊಲೀಸರು ಬಂಧಿಸಿದ್ದಾರೆ

ಸ್ಯಾಂಡಲ್ ವುಡ್ ನಟ ಹಾಗೂ ಬಿಗ್ ಬಾಸ್ ಸ್ಫರ್ಧಿಯಾಗಿದ್ದ ರೋಹನ್ ಗೌಡ (37) ಸೇರಿ ಶೇಷಾದ್ರಿಪುರಂನ ನವೀದ್ (29) ಹಾಗೂ ಮತ್ತೀಕೆರೆಯ ಶಶಿಕುಮಾರ್ (41) ಬಂಧಿತರು.

ಲೇ ಮರಿಡಿಯನ್ ಹೋಟೆಲ್ ನ  ನೆಲಮಹಡಿಯ ಶುಗರ್ ಫ್ಯಾಕ್ಟರಿ ಬಾರ್ ಆ್ಯಂಡ್ ರೆಸ್ಟೋರೆಂಟ್ ನಲ್ಲಿ ಅಬಕಾರಿ ಮತ್ತು ಡಿಸ್ಕೋಥೆಕ್ ನಿಮಯಗಳನ್ನು ಉಲ್ಲಂಘಿಸಿ, ಸಾರ್ವಜನಿಕರಿಗೆ ಮದ್ಯ ಹಾಗೂ ಊಟ ಸರಬರಾಜು ಮಾಡಿ ಅಕ್ರಮವಾಗಿ ಹಣ ಸಂಪಾದಿಸಲಾಗುತ್ತಿದೆ ಎಂಬ ಖಚಿತ ಮಾಹಿತಿ ಮೇರೆಗೆ ಸಿಸಿಬಿ ಪೊಲೀಸರು ಕ್ಷೀಪ್ರ ಕಾರ್ಯಾಚರಣೆ ಕೈಗೊಂಡಿದ್ದರು

ಕಾರ್ಯಾಚರಣೆಯಲ್ಲಿ ಮೂವರನ್ನು ಬಂಧಿಸಿ, ಸೌಂಡ್ ಸಿಸ್ಟಂ, ಮ್ಯೂಸಿಕ್ ಕಂಟ್ರೋಲರ್, ಮದ್ಯದ ಬಾಟಲ್, ಸ್ವೈಪಿಂಗ್ ಮಿಷಿನ್ ಹಾಗೂ 2,100 ನಗದು ವಶಪಡಿಸಿಕೊಳ್ಳಲಾಗಿದೆ. ಆರೋಪಿಗಳು ಮತ್ತು ಲೀ ಮೆರಿಡಿಯನ್ ಹೋಟೆಲ್ ಅಧ್ಯಕ್ಷರಾದ ಮ್ಯಾಕ್ ಚಾರ್ಲ್ಸ್‌ ಮತ್ತು ಎಂಎಸ್ ರೆಡ್ಡಿ ಸೇರಿಕೊಂಡು ಅಬಕಾರಿ ಮತ್ತು ಕಂಟ್ರೋಲಿಂಗ್ ಆಫ್ ಪ್ಲೇಸ್ ಆಫ್ ಪಬ್ಲಿಕ್ ಎಂಟರ್ ಟೆನ್ಮೆಂಟ್ ನಿಯಮಗಳನ್ನು ಉಲ್ಲಂಘಿಸಿ, ಅವಧಿ ಮೀರಿ ಗ್ರಾಹಕರಿಗೆ ಅಲ್ಲಿಯೇ ಮದ್ಯ ಸೇವನೆಗೆ ಅವಕಾಶ ನೀಡಿದ್ದರು. ಅಲ್ಲದೇ, ಧ್ವನಿವರ್ಧಕವನ್ನು ಉಪಯೋಗಿಸಿ ಅಕ್ಕ ಪಕ್ಕದ ಸಾರ್ವಜನಿಕರಿಗೆ ಶಬ್ದ ಮಾಲಿನ್ಯ ಉಂಟು ಮಾಡಿ ತೊಂದರೆ ನೀಡುತ್ತಿದ್ದರು. ಈ ಸಂಬಂಧ ಹೈಗ್ರೌಂಡ್ಸ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದ್ದು, ಪ್ರಕರಣ ತನಿಖೆಯಲ್ಲಿದೆ ಎಂದು ಪೊಲೀಸರು ತಿಳಿಸಿದ್ದಾರೆ

ನಗರ ಅಪರಾಧ ವಿಭಾಗದ ಜಂಟಿ ಪೊಲೀಸ್ ಆಯುಕ್ತ ಸಂದೀಪ್ ಪಾಟೀಲ್ ಹಾಗೂ ಉಪ ಪೊಲೀಸ್ ಆಯುಕ್ತ ಕುಲದೀಪ್ ಕುಮಾರ್ ಆರ್.ಜೈನ್ ಮಾರ್ಗದರ್ಶನದಲ್ಲಿ ಮಹಿಳೆ ಮತ್ತು ಮಾದಕ ದ್ರವ್ಯ ದಳದ ಸಹಾಯಕ ಪೊಲೀಸ್ ಆಯುಕ್ತ ಹೆಚ್.ಎನ್.ವೆಂಕಟೇಶ್ ಪ್ರಸನ್ನ ಅವರ ನೇತೃತ್ವದಲ್ಲಿ ಕಾರ್ಯಾಚರಣೆ ಕೈಗೊಳ್ಳಲಾಗಿತ್ತು

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com