ಸಿಬಿಐ ನಿವೃತ್ತ ಅಧಿಕಾರಿಯಿಂದ ಸಿದ್ದಾರ್ಥ ಕೊನೇ ಪತ್ರದ ತನಿಖೆ 

ಕೆಫೆ  ಕಾಫಿ ಡೇ ಮಾಲೀಕ ವಿ. ಸಿ. ಸಿದ್ದಾರ್ಥ ಜುಲೈ 27 ರಂದು ಕಂಪನಿಯ ನಿರ್ದೇಶಕರಿಗೆ ಬರೆದಿದ್ದರು ಎನ್ನಲಾದ ಪತ್ರದ ಬಗ್ಗೆ ಸಿಬಿಐ ಮಾಜಿ ಅಧಿಕಾರಿ ಅಶೋಕ್ ಕುಮಾರ್ ಮಲ್ಹೋತ್ರಾ ತನಿಖೆ ನಡೆಸಲಿದ್ದಾರೆ ಎಂದು  ಸಿಸಿಡಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಸಿದ್ದಾರ್ಥ
ಸಿದ್ದಾರ್ಥ

ಬೆಂಗಳೂರು:  ಕೆಫೆ  ಕಾಫಿ ಡೇ ಮಾಲೀಕ ವಿ. ಸಿ. ಸಿದ್ದಾರ್ಥ ಜುಲೈ 27 ರಂದು ಕಂಪನಿಯ ನಿರ್ದೇಶಕರಿಗೆ ಬರೆದಿದ್ದರು ಎನ್ನಲಾದ ಪತ್ರದ ಬಗ್ಗೆ ಸಿಬಿಐ ಮಾಜಿ ಅಧಿಕಾರಿ ಅಶೋಕ್ ಕುಮಾರ್ ಮಲ್ಹೋತ್ರಾ ತನಿಖೆ ನಡೆಸಲಿದ್ದಾರೆ ಎಂದು  ಸಿಸಿಡಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಜುಲೈ 27 ರಂದು ಸಿದ್ದಾರ್ಥ್  ಕೆಫೆ  ಕಾಫಿ ಡೇ ನಿರ್ದೇಶಕರಿಗೆ ಉದ್ದೇಶಪೂರ್ವಕವಾಗಿ ಪತ್ರ ಬರೆದಿದ್ದು, ಎರಡು ದಿನಗಳ ನಂತರ ಅಂದರೆ ಜುಲೈ 31 ರಂದು ಅವರ ಮೃತದೇಹ ಪತ್ತೆಯಾಗಿತ್ತು. "ಆಗಸ್ಟ್ 8 ರಂದು ಮಂಡಳಿಯು ಪತ್ರದ ವಿಷಯಗಳ ಬಗ್ಗೆ ತನಿಖೆ ನಡೆಸಲು ಜಾಗತಿಕ ಲೆಕ್ಕಪರಿಶೋಧಕ ಸಂಸ್ಥೆ  ಅರ್ನ್ಸ್ಟ್ ಅಂಡ್ ಯಂಗ್ ( E&Y) ಯನ್ನು ನೇಮಿಸಿದರೂ ಹಿತಾಸಕ್ತಿ ಸಂಘರ್ಷವನ್ನು ಉಲ್ಲೇಖಿಸಿ ಅದು ತನಿಖೆಯಿಂದ ಹಿಂದೆ ಸರಿದ ನಂತರ ಮಲ್ಹೋತ್ರಾ ಅವರು ತನಿಖೆ ಮಾಡುತ್ತಿದ್ದಾರೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಮಲ್ಹೋತ್ರಾ ಸಿಬಿಐನ ನಿವೃತ್ತ ಡಿಐಜಿಯಾಗಿದ್ದಾರೆ. ಅರ್ನ್ಸ್ಟ್ ಅಂಡ್ ಯಂಗ್ ಕಂಪನಿ ಕೂಡಾ ಕಂಪನಿ ಹಾಗೂ ಅದರ ಅಂಗಸಂಸ್ಥೆಗಳ ಅಕೌಂಟ್ ಪುಸ್ತಕಗಳನ್ನು ಪರಿಶೀಲನೆ ನಡೆಸಿದೆ. ಸಿದ್ದಾರ್ಥ್ ಅವರ ಕಚೇರಿಯಲ್ಲಿ ದೊರೆತ ಎರಡು ಪುಟಗಳ ಪ್ರತಿಗಳ ಅಂಶಗಳ ತನಿಖೆಗೆ ಬಗ್ಗೆ ನವ ದೆಹಲಿ ಮೂಲದ ಅಗಸ್ತ್ಯ ಲೀಗಲ್ ಎಲ್ ಎಲ್ ಪಿ ಮಲ್ಹೋತ್ರಾ  ಅವರಿಗೆ ನೆರವು ನೀಡಲಿದೆ. 

60 ವರ್ಷದ ಸಿದ್ದಾರ್ಥ ಜುಲೈ 29 ರಂದು ರಾತ್ರಿ ಸೇತುವೆಯಿಂದ ನೇತ್ರಾವತಿ ನದಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದರು. ಜುಲೈ 31 ರಂದು ನದಿಯ ದಂಡೆಯ ಮೇಲೆ ಅವರ ಮೃತದೇಹ ಪತ್ತೆಯಾಗಿತ್ತು. 
 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com