ಜಲಸಂಪನ್ಮೂಲ ಇಲಾಖೆಯ ನಿಗಮಗಳ ಅನುದಾನಕ್ಕೆ ಯಡಿಯೂರಪ್ಪ ತಡೆ

ಕಾಂಗ್ರೆಸ್-ಜೆಡಿಎಸ್ ಮೈತ್ರಿ ಸರ್ಕಾರದಲ್ಲಿ  2019-20 ನೇ ಸಾಲಿನ  ವಿಶೇಷ ಘಟಕ ಹಾಗೂ ಗಿರಿಜನ ಉಪಯೋಜನೆಯಡಿ  ಜಲಸಂಪನ್ಮೂಲ ಇಲಾಖೆಯಡಿ ಬರುವ ನಾಲ್ಕು  ನಿಗಮಗಳಿಗೆ ವಿಧಾನಸಭಾ ಕ್ಷೇತ್ರವಾರು ಹಂಚಿಕೆ ಮಾಡಿದ್ದ ಅನುದಾನವನ್ನು ತಡೆಹಿಡಿಯುವಂತೆ  ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ ಆದೇಶ ಹೊರಡಿಸಿದ್ದಾರೆ
ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ
ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ

ಬೆಂಗಳೂರು:ಕಾಂಗ್ರೆಸ್-ಜೆಡಿಎಸ್ ಮೈತ್ರಿ ಸರ್ಕಾರದಲ್ಲಿ 2019-20 ನೇ ಸಾಲಿನ ವಿಶೇಷ ಘಟಕ ಹಾಗೂ ಗಿರಿಜನ ಉಪಯೋಜನೆಯಡಿ  ಜಲಸಂಪನ್ಮೂಲ ಇಲಾಖೆಯಡಿ ಬರುವ ನಾಲ್ಕು  ನಿಗಮಗಳಿಗೆ ವಿಧಾನಸಭಾ ಕ್ಷೇತ್ರವಾರು ಹಂಚಿಕೆ ಮಾಡಿದ್ದ ಅನುದಾನವನ್ನು ತಡೆಹಿಡಿಯುವಂತೆ  ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ ಆದೇಶ ಹೊರಡಿಸಿದ್ದಾರೆ

ಕೃಷ್ಣಾ ಭಾಗ್ಯ  ಜಲ ನಿಗಮ, ಕರ್ನಾಟಕ ನೀರಾವರಿ ನಿಗಮ,  ಕಾವೇರಿ ನೀರಾವರಿ ನಿಗಮ, ವಿಶ‍್ವೇಶ್ವರಯ್ಯ  ಜಲನಿಗಮಗಳಿಂದ  ಹಂಚಿಕೆ ಮಾಡಿರುವ ಅನುದಾನವನ್ನು ವಿಧಾನಸಭಾ ಕ್ಷೇತ್ರವಾರು ಸಮರ್ಪಕವಾಗಿ  ಹಂಚಿಕೆ ಮಾಡಿಲ್ಲ. ಇಲ್ಲಿ ಅಸಮತೋಲನವಾಗಿರುವುದು ತಮ್ಮ ಗಮನಕ್ಕೆ ಬಂದಿದ್ದು, ಇದಕ್ಕೆ ಪೂರಕವಾಗಿ ಅನುದಾನ  ದೊರೆಯದ ಶಾಸಕರು ಪುನರ್ ಹಂಚಿಕೆ ಮಾಡುವಂತೆ ಮನವಿ ಮಾಡಿದ್ದಾರೆ. 

ಆದರೆ ನಿಗಮಗಳಲ್ಲಿ  ಹೆಚ್ಚುವರಿ ಅನುದಾನದ ಲಭ್ಯತೆ ಇಲ್ಲದ ಕಾರಣ  ಅನುದಾನವನ್ನು ಕೂಡಲೇ ಯಥಾಸ್ಥಿತಿಯಲ್ಲಿ  ಹಿಂಪಡೆದು, ಹೊಸದಾಗಿ  ಹಂಚಿಕೆ ಮಾಡುವಂತೆ ಜಲಸಂಪನ್ಮೂಲ ಇಲಾಖೆಗೆ ಯಡಿಯೂರಪ್ಪ  ಆದೇಶಿಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com