ಕೊಪ್ಪಳ: ವೈದ್ಯರ ನಿರ್ಲಕ್ಷ್ಯಕ್ಕೆ ಗರ್ಭಿಣಿ ಸಾವು; ಸಂಬಂಧಿಕರಿಂದ ಜಿಲ್ಲಾಸ್ಪತ್ರೆ ಬಂದ್ ಮಾಡಿ ಪ್ರತಿಭಟನೆ

ವೈದ್ಯರ ನಿರ್ಲಕ್ಷ್ಯದಿಂದ ಗರ್ಭಿಣಿಯೊಬ್ಬರು ಮೃತ ಪಟ್ಟಿದ್ದಾರೆ ಎಂದು ಆರೋಪಿಸಿ ಮೃತರ ಸಂಬಂಧಿಕರು ಆರೋಪಿಸಿದ್ದಾರೆ.
ಜ್ಯೋತಿ ಬಾಯಿ
ಜ್ಯೋತಿ ಬಾಯಿ

ಕೊಪ್ಪಳ: ವೈದ್ಯರ ನಿರ್ಲಕ್ಷ್ಯದಿಂದ ಗರ್ಭಿಣಿಯೊಬ್ಬರು ಮೃತ ಪಟ್ಟಿದ್ದಾರೆ ಎಂದು ಆರೋಪಿಸಿ ಮೃತರ ಸಂಬಂಧಿಕರು ಆರೋಪಿಸಿದ್ದಾರೆ.

ಜ್ಯೋತಿಬಾಯಿ ನಾಯ್ಕ್ (27) ಮೃತ ಗರ್ಭಿಣಿ, ಕೊಪ್ಪಳ ಜಿಲ್ಲಾಸ್ಪತ್ರೆಯಲ್ಲಿ ಘಟನೆ ನಡೆದಿದೆ,  ಬೆಳಗ್ಗೆ ಹೆರಿಗೆಗೆಂದು  ಜ್ಯೋತಿಬಾಯಿ ಜಿಲ್ಲಾಸ್ಪತ್ರೆಗೆ ದಾಖಲಾಗಿದ್ದರು.

ಜ್ಯೋತಿ ಬಾಯಿ ಮೂಲತಃ ಬಳ್ಳಾರಿ ಜಿಲ್ಲೆ ಕೊಗಳಿತಾಂಡಾದವರು, ಆಕೆ ದಾಖಲಾದ ಒಂದು ಗಂಟೆ ಬಳಿಕ ವೈದ್ಯರು ಆಗಮಿಸಿದರು. 

ವೈದ್ಯರು ಬರುವ ವೇಳೆಗೆ ಮೃತಪಟ್ಟಿದ್ದ ಜ್ಯೋತಿಬಾಯಿ ಮೃತ ಪಟ್ಟಿದ್ದರು.  ರಕ್ತದ ಕೊರತೆಯಿಂದ ರೋಗಿ ಮೃತಪಟ್ಟಿದ್ದಾಳೆ ಎಂದು ಹೇಳಿದ ವೈದ್ಯರು ತಿಳಿಸಿದ್ದಾರೆ. ರಕ್ತ ಪರೀಕ್ಷೆಯಲ್ಲಿ ಎಚ್ ಬಿ 11.6  ಎಂದು ಇದ್ದಿದ್ದನ್ನು ವೈದ್ಯರು 2.6 ಎಂದು ತಿದ್ದಿದ್ದಾರೆ ಎಂದು ಆರೋಪಿಸಿ ಸಂಬಂಧಿಕರು ಆಕ್ರೋಶ ವ್ಯಕ್ತ ಪಡಿಸಿದ್ದಾರೆ.

ಮೃತಳ ಸಂಬಂಧಿಕರು 2 ಮುಖ್ಯ ದ್ವಾರ ಬಂದ್ ಮಾಡಿ ಪ್ರತಿಭಟನೆ ನಡೆಸಿರುವುದರಿಂದ ರೋಗಿಗಳ ಪರದಾಡುವಂತಾಗಿದೆ. ಸೂಕ್ತ ಕಾರಣ ನೀಡುವವರೆಗೆ ಶವ ತೆಗೆದುಕೊಂಡು ಹೋಗುವುದಿಲ್ಲ ಎಂದು ಸಂಬಂಧಿಕರು ಪಟ್ಟು ಹಿಡಿದಿದ್ದಾರೆ. 


ವರದಿ: ಬಸವರಾಜ ಕರುಗಲ್

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com