'ಹಿಂದೂ ಯುವತಿಯರನ್ನು ಸಿಕ್ಕಲ್ಲಿ ಅತ್ಯಾಚಾರ ಮಾಡಿ ಪೆಟ್ರೋಲ್ ಸುರಿದು ಸುಟ್ಟಾಕಿ': ಫೇಸ್ ಬುಕ್ ಪೋಸ್ಟ್ ಹಾಕಿದವನ ಬಂಧನ 

ತೆಲಂಗಾಣದಲ್ಲಿ ಪ್ರಿಯಾಂಕ ರೆಡ್ಡಿ ಅತ್ಯಾಚಾರ, ಕೊಲೆ ಪ್ರಕರಣದ ಅಪರಾಧಿಗಳಿಗೆ ಸಾರ್ವಜನಿಕವಾಗಿ ಶಿಕ್ಷೆ ವಿಧಿಸುವಂತೆ ಆಗ್ರಹ ಹೆಚ್ಚುತ್ತಿದೆ.

Published: 01st December 2019 07:35 PM  |   Last Updated: 01st December 2019 07:35 PM   |  A+A-


youth arrested over controversial fb post asking to rape and murder hindu girls

'ಹಿಂದೂ ಯುವತಿಯರನ್ನು ಸಿಕ್ಕಲ್ಲಿ ಅತ್ಯಾಚಾರ ಮಾಡಿ ಪೆಟ್ರೋಲ್ ಸುರಿದು ಸುಟ್ಟಾಕಿ': ಫೇಸ್ ಬುಕ್ ಪೋಸ್ಟ್ ಹಾಕಿದವನ ಬಂಧನ

Posted By : Srinivas Rao BV
Source : Online Desk

ಹಾವೇರಿ: ತೆಲಂಗಾಣದಲ್ಲಿ ಪ್ರಿಯಾಂಕ ರೆಡ್ಡಿ ಅತ್ಯಾಚಾರ, ಕೊಲೆ ಪ್ರಕರಣದ ಅಪರಾಧಿಗಳಿಗೆ ಸಾರ್ವಜನಿಕವಾಗಿ ಶಿಕ್ಷೆ ವಿಧಿಸುವಂತೆ ಆಗ್ರಹ ಹೆಚ್ಚುತ್ತಿದೆ. ಈ ಬೆನ್ನಲ್ಲೇ ಮತ್ತೊಂದು ವಿವಾದ ಉಂಟಾಗಿದ್ದು, ಹಿಂದೂ ಯುವತಿಯರನ್ನು ಸಿಕ್ಕಲ್ಲಿ ಅತ್ಯಾಚಾರ ಮಾಡಿ ಪೆಟ್ರೋಲ್ ಸುರಿದು ಸುಟ್ಟಾಕಿ ಎಂದು ಫೇಸ್ ಬುಕ್ ನಲ್ಲಿ ಸಲೀಂ ಅಹ್ಮದ್ ಎಂಬ ವ್ಯಕ್ತಿ ಕರೆ ನೀಡಿದ್ದಾನೆ. 

ಈ ಸಲೀಂ ಅಹ್ಮದ್ ಹಾವೇರಿಯ ಜಿಲ್ಲೆಯವನಾಗಿದ್ದು, ಹಿಂದೂ ಯುವತಿಯರನ್ನು ಅತ್ಯಾಚಾರ ಮಾಡಿ ಹತ್ಯೆ ಮಾಡುವ ಪೋಸ್ಟ್ ಹಾಕಿದ ಬೆನ್ನಲ್ಲೇ ಆತನನ್ನು ಪೊಲೀಸರು ಬಂಧಿಸಿದ್ದಾರೆ. ಸಲೀಂ ಅಹ್ಮದ್ ಪೋಸ್ಟ್ ಗೆ ಸಾರ್ವಜನಿಕ ವಲಯದಲ್ಲಿ ತೀವ್ರ ಆಕ್ರೋಶ ವ್ಯಕ್ತವಾಗಿದೆ. ಕೆಲವು ಸಂಘಟನೆಗಳು ಇದನ್ನು ಗುರುತಿಸಿ ಈ ಕಿಡಿಗೇಡಿಯ ಬಂಧನಕ್ಕೆ ಆಗ್ರಹಿಸಿದ್ದವು. 

ಪೋಸ್ಟ್ ಹಾಕಿದ್ದ ಕೆಲವೇ ಗಂಟೆಗಳಲ್ಲಿ ಹಾವೇರಿಯ ಹಂಸಭಾವಿ ಪೊಲೀಸರು ಈತನನ್ನು ಬಂಧಿಸಿದ್ದಾರೆ.
 

Stay up to date on all the latest ರಾಜ್ಯ news with The Kannadaprabha App. Download now
Poll
Coronavirus Lockdown

ಕರ್ಫ್ಯೂ, ಭಾನುವಾರದ ಲಾಕ್ ಡೌನ್ ನಿಂದ ರಾಜ್ಯದಲ್ಲಿ ಕೊರೋನಾ ಪ್ರಮಾಣ ತಗ್ಗಲಿದೆಯೇ?


Result
ಹೌದು
ಇಲ್ಲ
ಗೊತ್ತಿಲ್ಲ
facebook twitter whatsapp