ಇಂದಿನಿಂದ ಮೆಟ್ರೋ ಹಸಿರು ಮಾರ್ಗದಲ್ಲಿ 6 ಬೋಗಿಯ 2 ರೈಲು ಸಂಚಾರ ಆರಂಭ

ನಮ್ಮ ಮೆಟ್ರೋ ರೈಲು ನಿಗಮದ ಹಸಿರು ಮಾರ್ಗ (ನಾಗಸಂದ್ರ-ಯಲಚೇನಹಳ್ಳಿ)ದಲ್ಲಿ ಸೋಮವಾರದಿಂದ ಆರು ಬೋಗಿಗಳ ಎರಡು ರೈಲುಗಳ ಸಂಚಾರ ಆರಂಭವಾಗಲಿದೆ.
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ

ಬೆಂಗಳೂರು: ನಮ್ಮ ಮೆಟ್ರೋ ರೈಲು ನಿಗಮದ ಹಸಿರು ಮಾರ್ಗ (ನಾಗಸಂದ್ರ-ಯಲಚೇನಹಳ್ಳಿ)ದಲ್ಲಿ ಸೋಮವಾರದಿಂದ ಆರು ಬೋಗಿಗಳ ಎರಡು ರೈಲುಗಳ ಸಂಚಾರ ಆರಂಭವಾಗಲಿದೆ.

ಒಟ್ಟಾರೆ 6 ಬೋಗಿಗಳ ಎರಡು ರೈಲುಗಳು ಹಸಿರು ಮಾರ್ಗದಲ್ಲಿ ಕಾರ್ಯಾಚರಣೆ ನಡೆಸಲಿವೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. 


ಭಾನುವಾರ ಹೊರತು ಪಡಿಸಿದರೆ ಉಳಿದ ದಿನಗಳು 53 ಸುತ್ತಿನ ಪ್ರಯಾಣವನ್ನು ಈ ರೈಲುಗಳು ಮಾಡಲಿವೆ. ಬೆಳಿಗ್ಗೆ ಮತ್ತು ಸಂಜೆ ಗರಿಷ್ಠ ಸಮಯದಲ್ಲಿ ಆರು ಬೋಗಿಗಳ ರೈಲು ನಿಗದಿತ ಸಮಯದಲ್ಲಿ ಸಂಚಾರ ನಡೆಸಲಿವೆ. 

ನಾಗಸಂದ್ರ-ಪೀಣ್ಯದಿಂದ ಯಲಚೇನಹಳ್ಳಿ ಮಾರ್ಗದಲ್ಲಿ ಬೆಳಿಗ್ಗೆ 7.50ರಿಂದ ರಾತ್ರಿ 8.28 ಸಮಯಕ್ಕೆ ಸಂಚರಿಸಲಿದ್ದು, ಯಲಚೇನಹಳ್ಳಿಯಿಂದ ನಾಗಸಂದ್ರ-ಪೀಣ್ಯದವರೆಗೆ ಬೆಳಿಗ್ಗೆ 8.31ರಿಂದ ರಾತ್ರಿ 8.37ಗಂಟೆವರೆಗೆ ಸಂಚರಿಸಲಿವೆ ಎಂದು ಬೆಂಗಳೂರು ಮೆಟ್ರೋ ರೈಲು ನಿಗಮ ತಿಳಿಸಿದೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com