ಐಷಾರಾಮಿ ಕಾರಿಗೆ ಪೆಟ್ರೋಲ್ ಬದಲಿಗೆ ಡೀಸೆಲ್ ಹಾಕಿದ ಆಸಾಮಿ: ಕೋರ್ಟ್ ಮೆಟ್ಟಿಲೇರಿದ ಮಾಲೀಕ

ಐಷಾರಾಮಿ ಕಾರಿಗೆ ಪೆಟ್ರೋಲ್ ಬದಲಿಗೆ ಡೀಸೆಲ್ ಹಾಕಿದ ಪರಿಣಾಮ ಕಾರಿನ ಎಂಜಿನ್ ಹಾಳಾಗಿದ್ದು, ಪರಿಹಾರಕ್ಕಾಗಿ ಕಾರಿನ ಮಾಲೀಕ ಕೋರ್ಟ್ ಮೆಟ್ಟಿಲೇರಿರುವ ಘಟನೆ ಬೆಂಗಳೂರಿನಲ್ಲಿ ನಡೆದಿದೆ.
ಐಷಾರಾಮಿ ಕಾರಿಗೆ ಪೆಟ್ರೋಲ್ ಬದಲಿಗೆ ಡೀಸೆಲ್ ಹಾಕಿದ ಆಸಾಮಿ: ಕೋರ್ಟ್ ಮೆಟ್ಟಿಲೇರಿದ ಮಾಲೀಕ
ಐಷಾರಾಮಿ ಕಾರಿಗೆ ಪೆಟ್ರೋಲ್ ಬದಲಿಗೆ ಡೀಸೆಲ್ ಹಾಕಿದ ಆಸಾಮಿ: ಕೋರ್ಟ್ ಮೆಟ್ಟಿಲೇರಿದ ಮಾಲೀಕ

ಬೆಂಗಳೂರು: ಐಷಾರಾಮಿ ಕಾರಿಗೆ ಪೆಟ್ರೋಲ್ ಬದಲಿಗೆ ಡೀಸೆಲ್ ಹಾಕಿದ ಪರಿಣಾಮ ಕಾರಿನ ಎಂಜಿನ್ ಹಾಳಾಗಿದ್ದು, ಪರಿಹಾರಕ್ಕಾಗಿ ಕಾರಿನ ಮಾಲೀಕ ಕೋರ್ಟ್ ಮೆಟ್ಟಿಲೇರಿರುವ ಘಟನೆ ಬೆಂಗಳೂರಿನಲ್ಲಿ ನಡೆದಿದೆ.

ಆಕ್ವಾ ಪ್ಯಾಕರ್ಸ್ ಆ್ಯಂಡ್ ಮೂವರ್ಸ್ ಪ್ರೈವೇಟ್ ಲಿಮಿಟೆಡ್ ಮಾಲೀಕ ವಿಕಾಸ್ ಅಗರ್ವಾಲ್ ಅವರು ರೂ.10 ಲಕ್ಷ ಬೇಡಿಕೆ ಇಟ್ಟು ಗ್ರಾಹಕರ ವ್ಯಾಜ್ಯಗಳ ಪರಿಹಾರ ವೇದಿಕೆಗೆ ದೂರು ನೀಡಿದ್ದಾರೆ. 

ಪ್ರಸಕ್ತ ವರ್ಷ ಅಕ್ಟೋಬರ್ 4ರಂದು ಟಿವಿ ಸುಂದರಮ್ ಅಯ್ಯಂಗಾರ್ ಆ್ಯಂಡ್ ಸನ್ಸ್ ಪ್ರೈವೇಟ್ ಲಿಮಿಟೆಡ್ ಕೆಪನಿಗೆ ವಿಭಾಗೀಯ ಕೇಂದ್ರದಲ್ಲಿ ಕಾರನ್ನು ಸರ್ವಿಸ್'ಗೆ ಬಿಡಲಾಗಿತ್ತು. ಕಾರ್ ಡಿಸ್ಕ್ ನಲ್ಲಿ ಸಮಸ್ಯೆಯಿದೆ ಎಂದು ಹೇಳಿದ್ದೆ. ಕಾರು ಸರ್ವಿಸ್ ಆದ ಬಳಿಕ ರೂ.43,725 ಬಿಲ್ ಮೊತ್ತವನ್ನು ನೀಡಲಾಗಿತ್ತು. 

ಕಾರು ರಿಪೇರಿಯಾದ ಬಳಿಕ ಬಿಲ್ ಮೊತ್ತವನ್ನು ನೀಡಿ,, ಪರೀಕ್ಷೆಗೆಂದು ಕಾರನ್ನು ತೆಗೆದುಕೊಂಡು ಹೋಗಿದ್ದೆ. ಸರ್ವಿಸ್ ಕೇಂದ್ರದ ಗೇಟ್ ಬಳಿಯೇ ಕಾರು ಕೆಟ್ಟಿರುವುದು ಗಮನಕ್ಕೆ ಬಂದಿತು. ಈ ವೇಳೆ ಮಾಡನಾಡಿದ ಸರ್ವಿಸ್ ಮಾಡಿದ ವ್ಯಕ್ತಿ ಕಾರಿಗೆ ಡೀಸೆಲ್ ಹಾಕಲಾಗಿದೆ ಎಂದು ಹೇಳಿದೆ. ಇದು ನನಗೆ ಸಾಕಷ್ಟು ಆಘಾತ ತಂದಿತು. ನನ್ನದು ಪೆಟ್ರೋಲ್ ಚಾಲಿಕ ಕಾರಾಗಿತ್ತು ಎಂದು ಅಗರ್ವಾಲ್ ಹೇಳಿದ್ದಾರೆ. 

ಬಳಿಕ ಸರ್ವಿಸ್ ಕೇಂದ್ರದ ಮ್ಯಾನೇಜರ್ ರಾಮ್ ಪ್ರಸಾದ್ ಬಳಿ ಹೇಳಿದರೆ, ಇದೊಂದು ಸಣ್ಣ ಪ್ರಮಾದವೆಂದು ಉತ್ತರ ನೀಡುತ್ತಾರೆ. ಇದು ಅವರ ವೃತ್ತಿಪರವನ್ನೇ ಪ್ರಶ್ನಿಸುವಂತಿದೆ. ಅಷ್ಡಕ್ಕೂ ನನ್ನ ಪರವಾನಗಿ ಇಲ್ಲದೇ ಅವರು ಪೆಟ್ರೋಲ್ ಟ್ಯಾಂಕ್'ನ್ನು ಸ್ವಚ್ಛಗೊಳಿಸಿದ್ದಾರೆಂದು ತಿಳಿಸಿದ್ದಾರೆ.

ಕಾರು ಕೆಟ್ಟು 2 ತಿಂಗಳುಗಳು ಕಳೆದಿವೆ. ಸರ್ವಿಸ್ ಕೇಂದ್ರ ಒಬ್ಬರ ಮೇಲೆ ಒಬ್ಬರನ್ನು ದೂಷಿಸಿಕೊಳ್ಳುತ್ತಿದೆ. ಇಂಜಿನ್ ಬದಲಿಸಿಕೊಡುವಂತೆ ತಿಳಿಸದೆ. ಅದಕ್ಕೆ ಅವರು ತಯಾರಿಲ್ಲ. ಹೀಗಾಗಿ ಮರ್ಸಿಡಿಸ್ ಬೆಂಜ್ ಕಂಪನಿಯಲ್ಲಿಯೂ ನಾನು ದೂರು ದಾಖಲಿಸಿದ್ದೇನೆ. ವೈಟ್ ಫೀಲ್ಡ್ ನಲ್ಲಿರುವ ಹೂಡಿಯಲ್ಲಿ ಸರ್ವಿಸ್ ಸೆಂಟರ್ ಇದೆ, ಈ ಕೇಂದ್ರದ ವಿರುದ್ಧವೂ ದೂರುು ದಾಖಲಿಸಿದ್ದೇನೆಂದಿದ್ದಾರೆ. 

ಇನ್ನು ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಮರ್ಸಿಡಿಸ್ ಬೆಂಜ್ ಸ್ಥಳೀಯ ಮ್ಯಾನೇಜರ್ ರಜತ್ ಅವರು, ಈ ಬಗ್ಗೆ ಅಗರ್ವಾಲ್ ಅವರು ಸಾಕಷ್ಟು ಬಾರಿ ನನ್ನೊಂದಿಗೆ ಮಾತುಕತೆ ನಡೆಸಿದ್ದಾರೆ. ಪ್ರಸ್ತುತ ಈ ವಿಚಾರದ ಬಗ್ಗೆ ಮಾತುಕತೆಗಳು ನಡೆಯುತ್ತಿದ್ದು, ಈ ಕುರಿತು ಪ್ರಸ್ತುತ ಯಾವುದೇ ಪ್ರತಿಕ್ರಿಯೆಗಳನ್ನೂ ನೀಡುವುದಿಲ್ಲ ಎಂದು ಹೇಳಿದ್ದಾರೆ. 

ಪ್ರಕರಣ ಪ್ರಸ್ತುತ ನ್ಯಾಯಾಲಯದ ಅಂಗಳದಲ್ಲಿದೆ. ಹೀಗಾಗಿ ನಾನು ಯಾವುದೇ ಪ್ರತಿಕ್ರಿಯೆ ನೀಡುವುದಿಲ್ಲ. ನಮ್ಮ ಕಾನೂನು ಸಲಹೆಗಾರರು ಈ ಬಗ್ಗೆ ವಿಚಾರಣೆ ನಡೆಸುತ್ತಿದ್ದಾರೆಂದು ಸರ್ವಿಸ್ ಕೇಂದ್ರದ ಮ್ಯಾನೇಜರ್ ರಾಮ್ ಪ್ರಸಾದ್ ಹೇಳಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com